ಬೆಂಗಳೂರು: ನಂಬರ್ ಪ್ಲೇಟ್ (Number Plate) ಇಲ್ಲದ ವಾಹನಗಳನ್ನು ರಸ್ತೆಗೆ ಇಳಿಸಿದ್ರೆ ಸೆಕ್ಷನ್ 420 ಅಡಿಯಲ್ಲಿ ವಂಚನೆ ಪ್ರಕರಣ ದಾಖಲಿಸಲು ಬೆಂಗಳೂರು (Bengaluru) ಪೊಲೀಸರು ಮುಂದಾಗಿದ್ದಾರೆ.
ನಂಬರ್ ಪ್ಲೇಟ್ ಇಲ್ಲದ ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ. ಯಾಕೆ ಇಷ್ಟು ಕಠಿಣ ಕ್ರಮ ಎಂದರೆ, ಕೆಲವರು ಸಂಚಾರಿ ನಿಯಮ ಉಲ್ಲಂಘನೆ ಮರೆಮಾಚಲು, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಕೆಲ ಪುಂಡರು ವಾಹನಗಳಿಗೆ ನಂಬರ್ ಪ್ಲೇಟ್ ಹಾಕದೆ, ನಂಬರ್ ಪ್ಲೇಟ್ ವಿಕಾರಗೊಳಿಸಿ ಓಡಾಡುತ್ತಿದ್ದಾರೆ. ಅಂತವರನ್ನು ಮಟ್ಟ ಹಾಕಲು ಪೊಲೀಸರು ಕಠಿಣ ನಿರ್ಧಾರಕ್ಕೆ ಮುಂದಾಗುತ್ತಿದ್ದಾರೆ. ಇದನ್ನೂ ಓದಿ: ಹಾಸನ | ಮನೆಯಲ್ಲಿ ನಿಗೂಢ ಸ್ಫೋಟ – ಝೀರೋ ಟ್ರಾಫಿಕ್‍ನಲ್ಲಿ ಬೆಂಗಳೂರಿನ ಆಸ್ಪತ್ರೆಗೆ ಗಾಯಾಳುಗಳ ರವಾನೆ
ಪಶ್ಚಿಮ ವಿಭಾಗ ಒಂದರಲ್ಲೇ 40ಕ್ಕೂ ಹೆಚ್ಚು ವಾಹನ ಸವಾರರ ವಿರುದ್ಧ ವಂಚನೆ ಕೇಸ್ ದಾಖಲಿಸಿಸಲಾಗಿದೆ. ನಗರದ ವಿವಿಧ ವಿಭಾಗದಲ್ಲಿ ಒಟ್ಟು ನೂರಕ್ಕು ಅಧಿಕ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಬಿಸಿಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಒಂದು ರಾತ್ರಿಯಲ್ಲಿ ನಗರದಾದ್ಯಂತ ಸುಮಾರು 1000 ವಾಹನಗಳನ್ನ ಪೊಲೀಸರು ಸೀಜ್ ಮಾಡಿದ್ದರು. ಕೆಲವರು ಸಮರ್ಪಕದ ಕಾರಣ ನೀಡಿ ವಾಹನ ಬಿಡಿಸಿಕೊಂಡು ಹೋದರೆ, ಉಳಿದವರು ಸಮರ್ಪಕವಾದ ಕಾರಣ ನೀಡದೆ ಹೋಗಿದ್ದರಿಂದ ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ದಾಖಲಾದವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗುತ್ತದೆ. ವಾಹನ ಸವಾರರು ಕೋರ್ಟ್ ಮುಖಾಂತರವೇ ತಮ್ಮ ತಮ್ಮ ವಾಹನಗಳನ್ನು ಬಿಡಿಸಿಕೊಳ್ಳುವಂತೆ ಪೊಲೀಸರು ಮಾಡುತ್ತಿದ್ದಾರೆ. ಇದನ್ನೂ ಓದಿ: ಪತ್ನಿ ಕೊಲೆ ಮಾಡಿ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಟೆಕ್ಕಿ

