– 5 ದಿನದಲ್ಲೇ ಸಮೀಕ್ಷೆ ಪೂರ್ಣಗೊಳಿಸಿದ ಶಿಕ್ಷಕಿ
ಚಿತ್ರದುರ್ಗ: ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ (Caste Census) ಗೈರಾದ ಹಿನ್ನೆಲೆ ಚಿತ್ರದುರ್ಗದಲ್ಲಿ (Chitradurga) 68 ಸಿಬ್ಬಂದಿಗೆ ನೋಟಿಸ್ ನೀಡಿದ್ದು, ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
68 ಗಣತಿದಾರರು ಈವರೆಗೆ ಸಮೀಕ್ಷೆಗೆ ವರದಿ ಮಾಡಿಕೊಂಡಿಲ್ಲ. ಈ ಹಿನ್ನೆಲೆ ಗೈರಾಗಿ ನಿರ್ಲಕ್ಷ್ಯ ವಹಿಸಿದ 68 ಮಂದಿ ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಚಿತ್ರದುರ್ಗ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮುಡಾ ಕೇಸಲ್ಲಿ ಬಿ-ರಿಪೋರ್ಟ್‌ಗೆ ಸ್ನೇಹಮಯಿ ಆಕ್ಷೇಪ – ಅ.8ಕ್ಕೆ ಆದೇಶ ಕಾಯ್ದಿರಿಸಿದ ಜನಪ್ರತಿನಿಧಿಗಳ ನ್ಯಾಯಾಲಯ
ಇನ್ನು ಗೈರಾದವರಿಗೆ ನೋಟಿಸ್ ಒಂದೆಡೆಯಾದರೆ ಇನ್ನೊಂದೆಡೆ ಶಿಕ್ಷಕಿಯೊಬ್ಬರು (Teacher) ಕೇವಲ 5 ದಿನದಲ್ಲೇ ಸಮೀಕ್ಷೆ ಕಾರ್ಯ ಮುಗಿಸಿ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ದಾಸರ್ಲಹಳ್ಳಿ ಗ್ರಾಮದಲ್ಲಿ ಶಿಕ್ಷಕಿ ಎಂ.ರಾಧಾ ತ್ವರಿತಗತಿಯಲ್ಲಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿದ್ದಾರೆ. ಗ್ರಾಮದ ಜನರು ಕೆಲಸಕ್ಕೆ ಹೋಗುವ ಮುನ್ನ ಶಿಕ್ಷಕಿ ಹಾಜರಾಗುತ್ತಿದ್ದು, ಗ್ರಾಮದಲ್ಲೇ ಉಳಿದುಕೊಂಡು ಸಮೀಕ್ಷೆ ಕಾರ್ಯ ಕೈಗೊಂಡಿದ್ದಾರೆ. ಶಿಕ್ಷಕಿ ಎಂ.ರಾಧಾ ಕಾರ್ಯಕ್ಕೆ ದಾಸರ್ಲಹಳ್ಳಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಕ್ ಸರ್ಕಾರದ ವಿರುದ್ಧ ಪಿಓಕೆಯಲ್ಲಿ ಭಾರೀ ಪ್ರತಿಭಟನೆ – ಷರೀಫ್, ಅಸಿಮ್ ಮುನೀರ್‌ಗೆ ಪುಕ ಪುಕ