ತುಮಕೂರು: ಬೈಕ್ (Bike) ಹಾಗೂ ಆಕ್ಟಿವಾ (Honda Activa) ನಡುವೆ ಅಪಘಾತ ಸಂಭವಿಸಿದ ಪರಿಣಾಮ ಮೂವರು ಸವಾರರು ಸಾವನಪ್ಪಿದ ಘಟನೆ ತುಮಕೂರು (Tumakuru) ಜಿಲ್ಲೆ ಶಿರಾ (Sira) ನಗರದ ಸಾಯಿ ಡಾಬಾ ಬಳಿ ನಡೆದಿದೆ.
ಶಿರಾದ ಎಮ್ಮೆರಳ್ಳಿ ತಾಂಡಾದ ವಿಷ್ಣು (28), ರಾಮನಗರ ಮೂಲದ ಮುತ್ತುರಾಜ್ (36) ಮತ್ತು ವೆಂಕಟಧನ ಶೆಟ್ಟಿ(64) ಮೃತ ದುರ್ದೈವಿಗಳು. ವಿಷ್ಣು ಬೈಕಲ್ಲಿ ತೆರಳುತಿದ್ದಾಗ ಎದುರುಗಡೆ ಬಂದ ಹೋಂಡಾ ಆಕ್ಟಿವಾ ಡಿಕ್ಕಿ ಹೊಡೆದಿದೆ. ಪರಿಣಾಮ ಆಕ್ಟಿವಾದಲ್ಲಿ ತೆರಳುತಿದ್ದ ರಾಮನಗರ ಮೂಲದ ಇಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿಯ ಎದೆಗೆ ಗುಂಡಿಕ್ಕಬೇಕು – ಕೇರಳ ಬಿಜೆಪಿ ನಾಯಕನ ಹೇಳಿಕೆಗೆ ಕಾಂಗ್ರೆಸ್ ಆಕ್ಷೇಪ
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ವಿಷ್ಣು ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾನೆ. ಈ ಸಂಬಂಧ ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬರೇಲಿಯ ‘ಐ ಲವ್ ಮುಹಮ್ಮದ್’ ಪ್ರತಿಭಟನೆಯಲ್ಲಿ ಹಿಂಸಾಚಾರ – ಮಾಸ್ಟರ್ ಮೈಂಡ್ ನದೀಮ್ ಅರೆಸ್ಟ್