– ಸಿಬಿಐ ತನಿಖೆಗೆ ಆಗ್ರಹಿಸಿ ಕೋರ್ಟ್ ಮೆಟ್ಟಿಲೇರಿದ್ದ ನಟ ವಿಜಯ್ & ಟೀಂ
ಚೆನ್ನೈ: ಕರೂರು ರಾಜಕೀಯ ರ‍್ಯಾಲಿವೇಳೆ ಸಂಭವಿಸಿದ ಕಾಲ್ತುಳಿತ ದುರಂತದ (TVK Vijay Rally Stampede) ಬಗ್ಗೆ ಸ್ವತಂತ್ರ ತನಿಖೆ ಅಥವಾ ಸಿಬಿಐ ತನಿಖೆ ನಡೆಸಬೇಕೆಂದು ನಟ ಹಾಗೂ ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್ ದಳಪತಿ ಸಲ್ಲಿಸಿದ್ದ ಅರ್ಜಿ ಇಂದು ವಿಚಾರಣೆ ನಡೆಯಲಿದೆ.
ವಿಜಯ್ ಅವರ ಪರವಾಗಿ ತಮಿಳಗ ವೆಟ್ರಿ ಕಳಗಂ ಪಕ್ಷದ ಕಾನೂನು ತಂಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮದ್ರಾಸ್ ಹೈಕೋರ್ಟ್‌ನಲ್ಲಿ ನಡೆಯಲಿದೆ. ಈ ನಡುವೆ ರ‍್ಯಾಲಿಗಳಿಗೆ ಇನ್ಮುಂದೆ ಪ್ರೋಟೋಕಾಲ್ ತಯಾರಿಸುವವರೆಗೆ ನಟ ವಿಜಯ್ ರ‍್ಯಾಲಿಗೂ ಅನುಮತಿ ನೀಡದಂತೆ ಅರ್ಜಿ ಸಲ್ಲಿಸಿದೆ. ಈ ಅರ್ಜಿಯೂ ಇಂದೇ ವಿಚಾರಣೆಗೆ ಬರುವ ಸಾಧ್ಯತೆ. ಇದನ್ನೂ ಓದಿ: Vijay Rally Stampede | ದುರಂತದ ಬೆನ್ನಲ್ಲೇ ನಟ ವಿಜಯ್ ನಿವಾಸಕ್ಕೆ ಬಾಂಬ್ ಬೆದರಿಕೆ – ಬಿಗಿ ಭದ್ರತೆ
ಈ ಕುರಿತು ಮಾತನಾಡಿರುವ ಟಿವಿಕೆ ಪಕ್ಷದ ವಕೀಲ ಅರಿವಳಗನ್, ಕರೂರಿನಲಿ ನಡೆದ ಘಟನೆ ಹಿಂದೆ ಕ್ರಿಮಿನಲ್ ಪಿತೂರಿ ಇದೆ. ಆದ್ದರಿಂದ ನಾವು ರಾಜಕೀಯ ಸಂಸ್ಥೆಯ ಮೂಲಕ ತನಿಖೆ ಮಾಡೋದು ಬೇಡ. ಸ್ವತಂತ್ರ ಸಂಸ್ಥೆ ಮೂಲಕ ತನಿಖೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದೇವೆ. ನ್ಯಾಯಾಲಯವೇ ವಿಶೇಷ ತನಿಖಾ ತಂಡವನ್ನ ರಚಿಸಬೇಕು. ಇಲ್ಲದಿದ್ದರೆ ಪ್ರಕರಣವನ್ನ ಸಿಬಿಐಗೆ ವಹಿಸಬೇಕು ಅಂತ ಆಗ್ರಹಿಸಿದ್ದಾರೆ,
ಸಾವಿನ ಸಂಖ್ಯೆ ಏರಿಕೆ
ಇನ್ನೂ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. ಕರೂರು ಸರ್ಕಾರಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಶಾರದಾ ಮೃತಪಟ್ಟಿದ್ದಾರೆ. ಇದನ್ನೂ ಓದಿ: TVK Vijay Rally Stampede | ದುರಂತದಲ್ಲಿ 2 ವರ್ಷದ ಕಂದಮ್ಮ ಬಲಿ – ಕುಟುಂಬದಲ್ಲಿ ಮುಗಿಲು ಮುಟ್ಟಿದ ಆಕ್ರಂದನ
ಸಿಸಿಟಿವಿ, ಡ್ರೋನ್ ವಿಡಿಯೋ ಪರಿಶೀಲನೆ
ಈಗಾಗಲೇ ಪ್ರಕರಣ ದಾಖಲಿಸಿಕೊಂಡು ಪ್ರಾಥಮಿಕ ತನಿಖೆ ಆರಂಭಿಸಿರುವ ಪೊಲೀಸರು ಕಾಲ್ತುಳಿತದ ಸ್ಥಳದಲ್ಲಿರುವ ಎಲ್ಲಾ ಸಿಸಿಕ್ಯಾಮರಾ, ಡ್ರೋನ್ ವಿಡಿಯೋ ಹಾಗೂ ಮೊಬೈಲ್‌ಗಳಲ್ಲಿ ರೆಕಾರ್ಡ್ ಮಾಡಿದ್ದ ವಿಡಿಯೋಗಳನ್ನ ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದಾರೆ.