ಬೆಂಗಳೂರು: ಎಷ್ಟೇ ಮಾಡಿದರೂ ಮಹಾನಗರಗಳಲ್ಲಿ ಗುಂಡಿಗಳು (Pothole) ಇದ್ದೇ ಇರುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ.
ರಸ್ತೆ ಗುಂಡಿ ವಿಚಾರದ ಬಗ್ಗೆ ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಎಷ್ಟೇ ಮಾಡಿದರೂ ಗುಂಡಿ ಇದ್ದೇ ಇರುತ್ತದೆ. ಗಾಡಿಗಳ ದಟ್ಟಣೆ ಇರುತ್ತೆ, ಲಾರಿ ಎಲ್ಲಾ ಹೆಚ್ಚು ಇರೋದ್ರಿಂದ ಇದ್ದೇ ಇರುತ್ತದೆ. ಎಷ್ಟೇ ದಪ್ಪ ರಸ್ತೆ ಮಾಡಿದರೂ ಗುಂಡಿ ಇರುತ್ತೆ. ಬೆಂಗಳೂರನ್ನ ಕಂಪ್ಲೀಟ್ ವೈಟ್ ಟಾಪಿಂಗ್ ಮಾಡೋವರೆಗೂ ಗುಂಡಿ ಇರುತ್ತೆ. ಎಲ್ಲಾ ರಾಜ್ಯದ ಸಿಟಿಯ ಡೇಟಾ ನೀವು ತರಿಸಿಕೊಳ್ಳಿ, ಹೇಳ್ತಾರೆ. ನಮ್ಮ ಹತ್ರ ಏನಾಗುತ್ತೋ ಅದನ್ನ ಮಾಡುತ್ತಿದ್ದೇವೆ. ಡೆಡ್ ಲೈನ್ ಫಿಕ್ಸ್ ಮಾಡಿದ್ದೇವೆ. ಗುತ್ತಿಗೆದಾರರಿಗೆ ಶಿಕ್ಷೆಗೆ ಒಳಪಡಿಸೋದಾಗಿ ಹೇಳಿದ್ದೇವೆ. ನಾನು ನಿರಂತರವಾಗಿ ಐದು ಕಾರ್ಪೋರೇಷನ್ ಬಗ್ಗೆ ನಿಗಾ ಇಟ್ಟಿದ್ದೇನೆ ಎಂದರು. ಇದನ್ನೂ ಓದಿ: ಜಯನಗರಕ್ಕೆ ಶೀಘ್ರದಲ್ಲೇ ಪೈಪ್‌ಲೈನ್ ಅನಿಲ ಲಭ್ಯ- ಗೇಲ್ PNG ಯೋಜನೆಗೆ ತೇಜಸ್ವಿ ಸೂರ್ಯ ಚಾಲನೆ
ಇದೇ ಸಂದರ್ಭದಲ್ಲಿ ಸಿಎಂ ಸಿಟಿ ರೌಡ್ಸ್ ಬಗ್ಗೆಯೂ ಮಾತನಾಡಿದ ಅವರು, ನಾನು ಸಹ ಅದರಲ್ಲಿ ಇರಬೇಕಿತ್ತು. ಆದರೆ ನನಗೆ ಒಂದು ಮೀಟಿಂಗ್ ಇತ್ತು, ಗ್ಯಾರಂಟಿ ಸಮಿತಿ ಅವರಿಗೆ ಟ್ರೈನಿಂಗ್ ಕೊಡಬೇಕಿತ್ತು. ಹೀಗಾಗಿ ಸಿಎಂಗೆ ತಡವಾಗುತ್ತೆ ಎಂದು ನಾನು ಹೋಗಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಡಿಸಿಎಂ ಅವರೇ ರೈತರ ಮುಂದೆ ತೊಡೆ ತಟ್ಟುತ್ತಿದ್ದೀರಿ, ನಿಮ್ಮ ತೊಡೆ ಮುರಿಯುವ ಕಾಲ ದೂರವಿಲ್ಲ: ನಿಖಿಲ್
 


 
		 
		 
		 
		 
		
 
		 
		 
		 
		