ಬೆಂಗಳೂರು: ಮಾರಕಾಸ್ತ್ರ ಹಿಡಿದು ಯಶ್ ರೀತಿ ಬಿಲ್ಡಪ್ ಕೊಟ್ಟು ಡೂಪ್ಲಿಕೇಟ್ `ಕೆಜಿಎಫ್’ (KGF) ಲೋಕವನ್ನು ಸೃಷ್ಟಿಸಿ ವೈರಲ್ ಮಾಡಿದ್ದ ರೀಲ್ಸ್ ಸ್ಟಾರ್ ಶ್ರೀನಿವಾಸ್‌ಗೆ ಸಿಸಿಬಿ (CCB) ಶಾಕ್ ನೀಡಿದೆ.
ರೀಲ್ಸ್ ಸ್ಟಾರ್ ಶ್ರೀನಿವಾಸ್ ರಾಜ್ ಎಂಬಾತನಿಗೆ ಸಿಸಿಬಿ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಹಿಂದೆ ಮುಂದೆ ಜನರನ್ನು ಇಟ್ಟುಕೊಂಡು ಹೀರೋ ರೀತಿಯಲ್ಲೇ ಪೋಸ್ ಕೊಟ್ಟು ರೀಲ್ಸ್ ಮಾಡಿದ್ದ. ರಾಕಿಂಗ್ ಸ್ಟಾರ್ ಯಶ್ ಸ್ಟೈಲ್‌ನ್ನು ಕಾಪಿ ಮಾಡಿ, ಚಾಕು, ಚೂರಿ ಮತ್ತು ಗನ್ ಹಿಡಿದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಭಯ ಹುಟ್ಟಿಸುವ ರೀತಿಯಲ್ಲಿ ವಿಡಿಯೋ ಹರಿಬಿಟ್ಟಿದ್ದ.ಇದನ್ನೂ ಓದಿ: ನಿಮ್ಮ ಮಾಹಿತಿ ಸುರಕ್ಷಿತವಾಗಿರಲ್ಲ: ಜಾತಿಗಣತಿ ಬಹಿಷ್ಕಾರಕ್ಕೆ ತೇಜಸ್ವಿ ಸೂರ್ಯ ಕರೆ
ಈ ವಿಡಿಯೋ ಪೊಲೀಸ್ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್‌ನ ಕಣ್ಣಿಗೆ ಬಿದ್ದಿದ್ದು, ಸಿಸಿಬಿ ಪೊಲೀಸರು ಶ್ರೀನಿವಾಸ್ ಕರೆತಂದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಇದೆಲ್ಲ ಡೂಪ್ಲಿಕೇಟ್ ವೆಪನ್ಸ್ ಎಂದು ಮಾಹಿತಿ ನೀಡಿದ್ದಾನೆ.
ಸದ್ಯ ಪೊಲೀಸರು ವಿಡಿಯೋದಲ್ಲಿ ಬಳಸಿದ್ದ ಎಲ್ಲಾ ವಸ್ತುಗಳನ್ನು ತಂದೊಪ್ಪಿಸಲು ಸೂಚಿಸಿದ್ದಾರೆ. ಯಾವುದೇ ಒಂದು ಮಾರಕಾಸ್ತ್ರ ತಪ್ಪಿಸಿದರೂ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.ಇದನ್ನೂ ಓದಿ:‘ಐ ಲವ್ ಮುಹಮ್ಮದ್’ ಅಭಿಯಾನಕ್ಕೆ 5 ದಿನಗಳ ಪ್ಲ್ಯಾನಿಂಗ್ – ಯುಪಿ ಪೊಲೀಸರ ತನಿಖೆಯಲ್ಲಿ ಬಯಲು
 


 
		 
		 
		 
		 
		
 
		 
		 
		 
		