ಬೆಂಗಳೂರು: ಕ್ಯಾಂಪಸ್‌ನಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸಿಎಂ ಸಿದ್ದರಾಮಯ್ಯನವರ (CM Siddaramaiah) ಮನವಿಯನ್ನು ವಿಪ್ರೋ (Wipro) ಮುಖ್ಯಸ್ಥ ಅಜೀಂ ಪ್ರೇಮ್‌ಜಿ (Azim Premji) ತಿರಸ್ಕರಿಸಿದ್ದಾರೆ.
ಇಬ್ಲೂರು ಜಂಕ್ಷನ್‌ನ ಔಟರ್ ರಿಂಗ್ ರೋಡ್ ಟ್ರಾಫಿಕ್ ಸಮಸ್ಯೆಗೆ (Traffic Problem) ಪರಿಹಾರ ಕಂಡುಕೊಳ್ಳಲು ವಿಪ್ರೋ ಕ್ಯಾಂಪಸ್‌ನಲ್ಲಿ ಸೀಮಿತ ವಾಹನಗಳ ಸಂಚಾರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದು ಮನವಿ ಮಾಡಿದ್ದರು
ಈ ಪತ್ರಕ್ಕೆ ಉತ್ತರಿಸಿ ಪತ್ರ ಬರೆದ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜಿ, ಸರ್ಜಾಪುರ ವಿಪ್ರೋ ಕ್ಯಾಂಪಸ್‌ನಲ್ಲಿ ವಾಹನ ಸಂಚಾರಕ್ಕೆ ಅವಕಾಶ ದೀರ್ಘಕಾಲಿಕ ಪರಿಹಾರ ಅಲ್ಲ. ಸರ್ಜಾಪುರದ ವಿಪ್ರೋ ಕ್ಯಾಂಪಸ್ ಜಾಗತಿಕ ಗ್ರಾಹಕರಿಗೆ ಸೇವೆಗಳನ್ನು ಒದಗಿಸುವ ವಿಶೇಷ ಆರ್ಥಿಕ ವಲಯ. ನಮ್ಮ ಒಪ್ಪಂದದ ನಿಯಮಗಳು ಆಡಳಿತ, ಪ್ರವೇಶ ನಿಯಂತ್ರಣ ಮಾನದಂಡಗಳು ಕಡ್ಡಾಯಗೊಳಿಸಿದೆ. ಖಾಸಗಿ ಆಸ್ತಿಯ ಮೂಲಕ ಸಾರ್ವಜನಿಕ ವಾಹನ ಸಂಚಾರವು ಸುಸ್ಥಿರ, ದೀರ್ಘಕಾಲೀನ ಪರಿಹಾರವಲ್ಲ ಎಂದು ಅಜೀಂ ಪ್ರೇಮ್‌ಜೀ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಬುರುಡೆ ಗ್ಯಾಂಗ್ ಪಿಐಎಲ್ ವಜಾ| ಇದೊಂದು ಬೇಜವಾಬ್ದಾರಿ ಸರ್ಕಾರ, ವಕೀಲ ಧನಂಜಯ್ ಕ್ಷಮೆಗೆ ಆಗ್ರಹಿಸಿದ ಸೂಲಿಬೆಲೆ
ಶಾಶ್ವತ ಪರಿಹಾರಕ್ಕೆ ರಾಜ್ಯ ಸರ್ಕಾರದ ಜೊತೆ ವಿಪ್ರೋ ಮಾತುಕತೆ, ಪಾಲುದಾರಿಕೆಗೆ ಸಿದ್ಧ. ಶೀಘ್ರ ರಾಜ್ಯ ಸರ್ಕಾರದ ಅಧಿಕಾರಿಗಳ ಜೊತೆ ನಮ್ಮ ತಂಡ ಚರ್ಚಿಸಲಿದೆ ಎಂದು ತಿಳಿಸಿದ್ದಾರೆ.
ನಮ್ಮ ಸರ್ಜಾಪುರ ಕ್ಯಾಂಪಸ್ ಸಾರ್ವಜನಿಕ ರಸ್ತೆಗಳಿಗೆ ಉದ್ದೇಶಿಸದ ಪಟ್ಟಿ ಮಾಡಿದ ಕಂಪನಿ. ಅಲ್ಲದೇ ವಿಶೇಷ ಖಾಸಗಿ ಆಸ್ತಿಯಾಗಿದೆ. ಕಾನೂನು, ಆಡಳಿತ ಮತ್ತು ಶಾಸನಬದ್ಧ ಸವಾಲುಗಳನ್ನು ಎದುರಿಸುತ್ತೇವೆ. ಆದರೂ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಕರ್ನಾಟಕ ಸರ್ಕಾರದೊಂದಿಗೆ ಕೈ ಜೋಡಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ದತ್ತಾಂಶವನ್ನು ಸಂಪೂರ್ಣವಾಗಿ ರಕ್ಷಿಸಿ – ಜಾತಿ ಸಮೀಕ್ಷೆಗೆ ಷರತ್ತು, ಸರ್ಕಾರಕ್ಕೆ ಬಿಗ್ ರಿಲೀಫ್
ಡೇಟಾ-ಚಾಲಿತ ವಿಧಾನವು ನಮ್ಮ ನಗರಕ್ಕೆ ಹೆಚ್ಚು ಪರಿಣಾಮಕಾರಿ ಫಲಿತಾಂಶಗಳನ್ನ ನೀಡುತ್ತದೆ ಎಂದು ನಾವು ನಂಬುತ್ತೇವೆ. ರೇಶ್ಮಿ ಶಂಕರ್ ನೇತೃತ್ವದ ನಮ್ಮ ತಂಡ ನಿಮ್ಮ ಅಧಿಕಾರಿಗಳೊಂದಿಗೆ ಸಾಧ್ಯವಾದಷ್ಟು ಬೇಗ ಮುಂದಿನ ದಾರಿಯ ಬಗ್ಗೆ ಚರ್ಚಿಸಲಿದೆ ಎಂದು ಉತ್ತರಿಸಿದ್ದಾರೆ.