ಬೆಂಗಳೂರು/ನವದೆಹಲಿ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ (Dharmasthala Mass Burials Case) ಸಂಬಂಧಿಸಿದಂತೆ ಬುರುಡೆ ಗ್ಯಾಂಗ್‌ನ ಮತ್ತೊಂದು ಮುಖವಾಡ ಕಳಚಿಬಿದ್ದಿದೆ. ಸುಪ್ರೀಂ ಕೋರ್ಟ್‌ನಲ್ಲಿ ಛೀಮಾರಿ ಹಾಕಿಸಿಕೊಂಡಿದ್ದ ಗ್ಯಾಂಗ್, ತಮಗಾದ ಹಿನ್ನಡೆಯನ್ನು ಮುಚ್ಚಿಟ್ಟು ದಕ್ಷಿಣ ಕನ್ನಡ (Dakshina Kannada) ಎಸ್ಪಿಗೆ ದೂರು ನೀಡಿದ್ದ ಸತ್ಯ ಈಗ ಬಟಾಬಯಲಾಗಿದೆ.
ಸುಪ್ರೀಂ (Supreme Court) ಆದೇಶವನ್ನ ಮುಚ್ಚಿಚ್ಚು ರಾಜ್ಯ ಸರ್ಕಾರವನ್ನೇ (Karnataka Government) ಈ ಬುರುಡೆ ಗ್ಯಾಂಗ್ ಯಾಮಾರಿಸಿತ್ತು. ಅರ್ಜಿ ವಜಾಗೊಂಡಿದ್ದರೂ ಎಸ್‌ಐಟಿ ರಚನೆ ಮಾಡಿಸಿಕೊಂಡು ತನಿಖೆ ಮಾಡಿಸಿತ್ತು ಅನ್ನೋ ರಹಸ್ಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಗಡಿಪಾರು ಆದೇಶ ಬಳಿಕ ತಿಮರೋಡಿ ಅಜ್ಞಾತ – ಇತ್ತ ಚಿನ್ನಯ್ಯನ 15, 16ನೇ ವಿಡಿಯೋ ರಿಲೀಸ್
ಸುಪ್ರೀಂ ಕೋರ್ಟ್ ಆದೇಶ ಮುಚ್ಚಿಟ್ಟು ಮೋಸ
ದಕ್ಷಿಣ ಕನ್ನಡ ಎಸ್ಪಿಗೆ ದೂರು ನೀಡುವುದಕ್ಕೆ ಮುನ್ನವೇ ಚಿನ್ನಯ್ಯನ ಮೂಲಕ ಬುರುಡೆ ಗ್ಯಾಂಗ್ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಆದ್ರೆ ಮೇ 5ರಂದು ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ, ನ್ಯಾ.ಸತೀಶ್ ಚಂದ್ರ ನೇತೃತ್ವದ ಪೀಠ ಅರ್ಜಿ ವಜಾ ಮಾಡಿತ್ತು. ಆದ್ರೂ ಇದನ್ನ ಮುಚ್ಚಿಟ್ಟು ಬುರುಡೆ ಗ್ಯಾಂಗ್ ಬೆಳ್ತಂಗಡಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಎಸ್ಪಿಗೂ ದೂರು ನೀಡಲಾಗಿತ್ತು. ಇದನ್ನೂ ಓದಿ: ತಿಮರೋಡಿ ಬಳಿಗೆ ನಮ್ಮನ್ನ ಕರೆದುಕೊಂಡು ಹೋಗಿದ್ದೇ ಸೌಜನ್ಯ ಮಾವ: ಚಿನ್ನಯ್ಯನ 2ನೇ ಪತ್ನಿ ಬಾಂಬ್
ಎಸ್‌ಐಟಿ ರಚನೆ ಮಾಡುವಂತೆ ಅರ್ಜಿ ಸಲ್ಲಿಸಿದ್ದ ಗ್ಯಾಂಗ್
ಕಳೆದ ಏಪ್ರಿಲ್ 30 ರಂದು ಧರ್ಮಸ್ಥಳ ಪ್ರಕರಣದ ಕುರಿತು ಎಸ್‌ಐಟಿ ರಚನೆ ಮಾಡುವಂತೆ ಒತ್ತಾಯಿಸಿ ಬುರುಡೆ ಗ್ಯಾಂಗ್ ಅರ್ಜಿ ಸಲ್ಲಿಕೆ ಮಾಡಿತ್ತು. ಆದ್ರೆ ಮೇ 5ರಂದೇ ಸುಪ್ರೀಂ ಕೋರ್ಟ್ ಬುರುಡೆ ಗ್ಯಾಂಗ್‌ಗೆ ಛೀಮಾರಿ ಹಾಕಿ ಅರ್ಜಿ ವಜಾಗೊಳಿಸಿತ್ತು. ಇದರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಕಾಣುತ್ತಿಲ್ಲ, ವೈಯಕ್ತಿಕ ಹಿತಾಸಕ್ತಿ ಕಾಣಿಸುತ್ತಿದೆ. ಇದು ಪೈಸಾ ಇಂಟರೆಸ್ಟ್ ಲಿಟಿಗೇಷನ್, ಪೊಲಿಟಿಕಲ್ ಇಂಟರೆಸ್ಟ್ ಲಿಟಿಗೇಷನ್, ಪ್ರೈವೇಟ್ ಇಂಟರೆಸ್ಟ್ ಲಿಟಿಗೇಷನ್ ಎಂದು ಬುರುಡೆ ಗ್ಯಾಂಗ್‌ಗೆ ತಪರಾಕಿ ಹಾಕಿತ್ತು. ನಾಚಿಕೆ ಮಾನಾ ಮರ್ಯಾದೆ ಎಲ್ಲವನ್ನೂ ಬಿಟ್ಟು ಬಂದು ದೂರು ನೀಡಿದ್ದೀರಿ ಎಂದು ಗ್ಯಾಂಗನ್ನ ತೀವ್ರ ತರಾಟೆಗೆ ತೆಗೆದುಕೊಂಡಿದ್ದಲ್ಲದೇ ಸಾರಾಸಗಟಾಗಿ ಅರ್ಜಿಯನ್ನ ತಿರಸ್ಕರಿಸಿತ್ತು.
ಇದೆಲ್ಲವನ್ನೂ ಮುಚ್ಚಿಟ್ಟಿದ್ದ ಬುರುಡೆ ಗ್ಯಾಂಗ್ ಬೆಳ್ತಂಗಡಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಬಳಿಕ ಎಸ್ಪಿಗೂ ದೂರು ನೀಡಿ ಪ್ರಕರಣ ಮುನ್ನೆಲೆಗೆ ತಂದಿದೆ ಅನ್ನೋದು ಈಗ ಬಯಲಾಗಿದೆ. ಇದನ್ನೂ ಓದಿ: ಚಿನ್ನಯ್ಯನ ಜೊತೆ ಮಾತನಾಡಿದ್ದ ಪಾರ್ಟ್-2 ವಿಡಿಯೋ ರಿಲೀಸ್ – ಆರೋಪದಿಂದ ಪಾರಾಗಲು ಬುರುಡೆ ಗ್ಯಾಂಗ್ ಪ್ಲ್ಯಾನ್?



