ದಾವಣಗೆರೆ: ಫ್ಲೆಕ್ಸ್ ಹಾಕಿದ ವಿಚಾರಕ್ಕೆ ಎರಡು ಕೋಮಿನ ನಡುವೆ ವಾಗ್ವಾದ ನಡೆದು ವಿಕೋಪಕ್ಕೆ ತಿರುಗಿದ ಘಟನೆ ದಾವಣಗೆರೆ (Davanagere) ನಗರದ ಬೇತೂರು ರಸ್ತೆಯ ಕಾರ್ಲ್ ಮಾರ್ಕ್ಸ್ ನಗರದಲ್ಲಿ ನಡೆದಿದೆ.
ಕಾರ್ಲ್ ಮಾರ್ಕ್ಸ್ ನಗರದ 13ನೇ ಕ್ರಾಸ್ ನಲ್ಲಿ ಅನ್ಯ ಕೋಮಿನ ಮನೆ ಮುಂದೆ ಐ ಲವ್ ಮಹಮ್ಮದೀಯ ಫ್ಲೆಕ್ಸ್ ಸೇರಿದಂತೆ ಬೇರೆ ಬೇರೆ ಫ್ಲೆಕ್ಸ್ ಹಾಕಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಎರಡು ಕೋಮಿನ ಯುವಕರ ನಡುವೆ ವಾಗ್ವಾದ ಶುರುವಾಗಿದ್ದು, ನಮ್ಮ ಮನೆಯ ಮುಂಭಾಗ ಫ್ಲೆಕ್ಸ್ ಹಾಕಬೇಡಿ ಎಂದು ಹೇಳಿದ್ದಕ್ಕೆ ಗಲಾಟೆ ನಡೆಸಿದ್ದಾರೆ.ಇದನ್ನೂ ಓದಿ: ಸಿಕ್ಸ್ ಮೇಲೆ ಸಿಕ್ಸ್ – ಏಷ್ಯಾಕಪ್‌ನಲ್ಲಿ ದಾಖಲೆ ಬರೆದ ಅಭಿಷೇಕ್ ಶರ್ಮಾ
ಗಲಾಟೆ ಕೆಲ ಯುವಕರ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಅಜಾದ್ ನಗರ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ಅಲ್ಲದೆ ಕೆಲ ಕಿಡಿಗೇಡಿಗಳು ಒಂದು ಧರ್ಮದ ಮನೆಯನ್ನೇ ಟಾರ್ಗೆಟ್ ಮಾಡಿ ಕಲ್ಲು ಹೊಡೆದಿದ್ದಾರೆ. 13ನೇ ಕ್ರಾಸ್ ನಲ್ಲಿ ಗಲಾಟೆಯಾದ್ರೆ 1ನೇ ಕ್ರಾಸ್ ನಲ್ಲಿರುವ ಮನೆಗಳ ಮೇಲೆ ಕಲ್ಲು ತೂರಾಟ ಮಾಡಿದ್ದು, ನಿವಾಸಿಗಳು ಕಿಡಿಗೇಡಿಗಳ ವಿರುದ್ಧ ಹಿಡಿಶಾಪ ಹಾಕಿದ್ರು.
ಸ್ಥಳಕ್ಕೆ ಐಜಿಪಿ ರವಿಕಮತೇಗೌಡ, ಎಸ್ ಪಿ ಉಮಾ ಪ್ರಶಾಂತ್ ಆಗಮಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದರು. ಅಕ್ಷೇಪಾರ್ಹ ಫ್ಲೆಕ್ಸ್ ಅನ್ನು ತೆರವು ಮಾಡಲು ಪೊಲೀಸರು ಮುಂದಾಗಿದ್ದು, ಸದ್ಯ ವಾತಾವರಣ ತಿಳಿಗೊಂಡಿದ್ದು, ಸ್ಥಳದಲ್ಲಿ ಪೊಲೀಸರು ಮೊಖಂ ಹೂಡಿದ್ದಾರೆ. ಅಲ್ಲದೆ ಎರಡು ಕೋಮಿನ ಜನರು ಶಾಂತಿಯುತವಾಗಿ ಸಹಬಾಳ್ವೆ ನಡೆಸುತ್ತೇವೆ ಎಂದು ಮುಸ್ಲಿಂ ಮುಖಂಡರು ತಿಳಿಸಿದರು.ಇದನ್ನೂ ಓದಿ: ರಾಜ್ಯದ 39 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ಹೆಸರು ಅಂತಿಮ – ವಿನಯ್ ಕುಲಕರ್ಣಿ ಪತ್ನಿಗೂ ಸಿಕ್ತು ಪಟ್ಟ