ದಕ್ಷಿಣ ಕನ್ನಡ/ರಾಯಚೂರು: ಧರ್ಮಸ್ಥಳ ಬುರುಡೆ ಗ್ಯಾಂಗ್ ಲೀಡರ್ ಮಹೇಶ್ ಶೆಟ್ಟಿ ತಿಮರೋಡಿಯನ್ನು ರಾಯಚೂರಿನ ಮಾನ್ವಿಗೆ ಗಡಿಪಾರು ಮಾಡಲಾಗಿದ್ದು, ಇತ್ತ ಬುರುಡೆ ಗ್ಯಾಂಗ್‌ನಿಂದ 15 & 16ನೇ ವಿಡಿಯೋ ರಿಲೀಸ್ ಆಗಿದೆ.
ಮಹೇಶ್ ಶೆಟ್ಟಿ ತಿಮರೋಡಿಯನ್ನು ರಾಯಚೂರಿನ ಮಾನ್ವಿಗೆ ಗಡಿಪಾರು ಮಾಡಲಾಗಿದ್ದು, ಇದುವರೆಗೆ ಆತನ ಸುಳಿವು ಸಿಕ್ಕಿಲ್ಲ. ಪ್ರತಿ 7 ದಿನಗಳಿಗೊಮ್ಮೆ ಮಾನ್ವಿ ಠಾಣೆಯ ಅಧಿಕಾರಿ ಮುಂದೆ ಹಾಜರಾಗಲು ಸೂಚನೆ ನೀಡಲಾಗಿದೆ. ಮಾನ್ವಿ (Manvi) ತಾಲೂಕಿಗೆ ತಿಮರೋಡಿಯನ್ನು (Mahesh Shetty Timarody) ಗಡಿಪಾರು ಮಾಡಿದ್ದಕ್ಕೆ ವಿರೋಧ ವ್ಯಕ್ತವಾಗಿದೆ. ನಮ್ಮ ಜಿಲ್ಲೆಗೆ ಬೇಡ, ಯಾವುದಾದರೂ ಕಾಡಿಗೆ ಕಳುಹಿಸಿ ಎಂದು ದಲಿತ ಸೇನೆ ಹಾಗೂ ಸಮಾನ ಮನಸ್ಕರ ವೇದಿಕೆ ಪ್ರತಿಭಟನೆ ನಡೆಸಿದೆ. ರಾಜಕೀಯ ನಾಯಕರನ್ನು ಕೀಳಾಗಿ ನಿಂದಿಸಿದ್ದೇ ಗಡಿಪಾರಿಗೆ ಪ್ರಮುಖ ಕಾರಣವಾಗಿದೆ.ಇದನ್ನೂ ಓದಿ: ರಾಯಚೂರು ಜಿಲ್ಲೆಗೆ ಬೇಡ, ಯಾವುದಾದರು ಕಾಡಿಗೆ ಕಳಿಸಿ: ತಿಮರೋಡಿ ಗಡಿಪಾರಿಗೆ ಆಕ್ಷೇಪ
ಬುರುಡೆ ಗ್ಯಾಂಗ್‌ನಿಂದ 15 & 16ನೇ ವಿಡಿಯೋ ರಿಲೀಸ್ ಆಗಿದೆ. 2023ರ ಆಗಸ್ಟ್‌ನಲ್ಲಿ ಮಾಡಿದ ವಿಡಿಯೋ ಇದಾಗಿದ್ದು, ತಿಮರೋಡಿ ಮನೆಗೆ ಚಿನ್ನಯ್ಯ ಮೊದಲ ಭಾರೀ ಭೇಟಿ ನೀಡಿದ್ದಾಗ ಚೆನ್ನೈ ಮೂಲದ ಸ್ವಾಮೀಜಿ, ಸೌಜನ್ಯ ಕೇಸ್, ಮಹಿಳೆಯರ ಕೊಲೆಗಳ ಬಗ್ಗೆ ಚರ್ಚೆ ಆಗಿದೆ. ಪಾಯಿಂಟ್ ನಂ.16ರಲ್ಲಿ ಅನಾಥ ಶವ ಹೂತಿರೋ ಬಗ್ಗೆಯೂ ಚಿನ್ನಯ್ಯ ಹೇಳಿದ್ದಾನೆ. ಕೋರ್ಟ್ನಲ್ಲಿ ಚಿನ್ನಯ್ಯ 183 ಸ್ವಇಚ್ಛಾ ಹೇಳಿಕೆ ಪೂರ್ಣವಾಗದಿದ್ದರಿಂದ ನಾಳೆ ಮತ್ತೆ ಹೇಳಿಕೆ ದಾಖಲಿಸಲಿದೆ.
ಈ ಮಧ್ಯೆ, ತಿಮರೋಡಿ ಮನೆಗೆ ಎಸ್‌ಐಟಿ ಅಧಿಕಾರಿಗಳು ಭೇಟಿ ನೀಡಿ, ಹಣ ವರ್ಗಾವಣೆ ಬಗ್ಗೆ ಪತ್ನಿಯಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ.ಇದನ್ನೂ ಓದಿ:ಮಹೇಶ್ ಶೆಟ್ಟಿ ತಿಮರೋಡಿ ದಕ್ಷಿಣ ಕನ್ನಡದಿಂದ 1 ವರ್ಷ ಗಡಿಪಾರು