71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಂಗಳವಾರ ಜರುಗಿತ್ತು. ಈ ವೇಳೆ ಅತ್ಯುತ್ತಮ ನಟಿ ಎಂದು ರಾಷ್ಟ್ರ ಪ್ರಶಸ್ತಿ ಪಡೆದ ರಾಣಿ ಮುಖರ್ಜಿ ತಮ್ಮ ಸರಳ ಉಡುಗೆಯಲ್ಲಿ ಭಾರಿ ಗಮನ ಸೆಳೆದಿದ್ದಾರೆ. `ಮಿಸಸ್ ಚಟರ್ಜಿ ವರ್ಸಸ್ ನಾರ್ವೆ’ ಚಿತ್ರದ ಅಭಿನಯಕ್ಕೆ ರಾಣಿ ಮುಖರ್ಜಿ ಪ್ರಶಸ್ತಿ ಸ್ವೀಕರಿಸುವ ವೇಳೆ ಕಂದು ಬಣ್ಣದ ಸವ್ಯಸಾಚಿ ಡಿಸೈನರ್ ಸೀರೆಯನ್ನು ಧರಿಸಿದ್ದರು. ಕತ್ತಲ್ಲಿ ಮುತ್ತಿನ ಚಾಕರ್ ಧರಿಸಿದ್ದ ರಾಣಿ ಜೊತೆಗೆ ಸಣ್ಣದೊಂದು ಬಂಗಾರದ ಚೈನ್ ಕೂಡ ಧರಿಸಿದ್ದರು. ಇದೇ ಚೈನ್ ಇದೀಗ ಭಾರೀ ಚರ್ಚೆಗೀಡಾಗಿದೆ.
ರಾಣಿ ಧರಿಸಿದ್ದ ಬಂಗಾರದ ಸಿಂಪಲ್ ಚೈನ್‌ನಲ್ಲಿ ಸಣ್ಣ ಅಕ್ಷರಗಳ ಜೋಡಣೆ ಕಾಣುತ್ತದೆ. ಅಕ್ಷರಳನ್ನ ಪೂರ್ತಿ ಜೋಡಿಸಿದಾಗ `ಅಧಿರಾ’ ಎಂದು ಹೆಸರು ಕಾಣುತ್ತೆ. ಇದು ರಾಣಿ ಮುಖರ್ಜಿ ಮಗಳ ಹೆಸರು. ಬೇರೆ ಯಾವ ಕಾರ್ಯಕ್ರಮದಲ್ಲಾದ್ರೂ ಈ ಚೈನ್ ಧರಿಸಬಹುದಿತ್ತು. ಆದರೆ ಇದೇ ಕಾರ್ಯಕ್ರಮಕ್ಕೆ ರಾಣಿ ಈ ವಿಶೇಷ ಡಿಸೈನರ್ ಚೈನ್ ಧರಿಸಿರುವುದಕ್ಕೆ ಕಾರಣವಿದೆ.ಇದನ್ನೂ ಓದಿ: ಭೈರಪ್ಪನವರ ಬದುಕು ಕೊನೆಯಿಲ್ಲದ ʻಯಾನʼ – ನಟ ಅನಂತನಾಗ್ ಭಾವುಕ
ಮಗಳು ಅಧಿರಾ ಜನಿಸಿದ ಬಳಿಕ ಮಿಸಸ್ ಚಟರ್ಜಿ ವರ್ಸಸ್ ನಾರ್ವೆ ಚಿತ್ರದಲ್ಲಿ ನಟಿಸುವ ರಾಣಿ ಮುಖರ್ಜಿ ಚಿತ್ರದಲ್ಲಿ ತಾಯಿ ಮಕ್ಕಳಿಗಾಗಿ ಸರ್ವತ್ಯಾಗಕ್ಕೂ ಸಿದ್ಧವಾಗುವ ಮನೋಜ್ಞ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತಾಯಿ ಮಗುವಿನ ಸಂಬಂಧವೇ ಮಿಸಸ್ ಚಟರ್ಜಿ ವರ್ಸಸ್ ನಾರ್ವೇ ಸಿನಿಮಾದ ಹೈಲೈಟ್. ಚಿತ್ರದಲ್ಲಿ ರಾಣಿ ದೆಬಿಕಾ ಚಟರ್ಜಿ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ನಟಿಸಿದ್ದಾರೆ. ಹಿಂದೆಲ್ಲಾ ಗ್ಲಾಮರ್ ಪಾತ್ರದಲ್ಲಷ್ಟೇ ಹೆಸರು ಮಾಡಿದ್ದರು. ಇದೀಗ ಮಗಳು ಜನಿಸಿದ ಬಳಿಕ ತಾಯ್ತನದ ಮಹತ್ವ, ತ್ಯಾಗದ ಪ್ರತಿಫಲ ಪಾತ್ರದ ರೂಪವಾಗಿ ಬಂದಿದೆ ಅನ್ನೋದನ್ನ ರಾಣಿ ಹಿಂದೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಅದೇ ಪಾತ್ರಕ್ಕೀಗ ರಾಷ್ಟ್ರಪ್ರಶಸ್ತಿ ಬಂದಿದೆ. ಪ್ರಶಸ್ತಿಯನ್ನ ಪರೋಕ್ಷವಾಗಿ ಮಗಳು ಅಧಿರಾಗೆ ಅಮ್ಮ ರಾಣಿ ಮುಖರ್ಜಿ ಪ್ರೆಸೆಂಟ್ ಮಾಡಿದ್ದಾರೆ ಎನ್ನುವುದೇ ವಿಶೇಷ.