ಗದಗ: ಸೆ.22 ರಿಂದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ (Caste Census Survey) ಆರಂಭವಾಗಿದೆ. 2ನೇ ದಿನವೂ ಸರ್ವೆ ಕಾರ್ಯಕ್ಕೆ ವಿಘ್ನ ಎದುರಾಗಿದೆ. ಗದಗ (Gadag) ನಗರದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಸಿಬ್ಬಂದಿ ಸರ್ವರ್ ಸಮಸ್ಯೆಯಿಂದ ಪರದಾಡಿದ್ದಾರೆ.
ಸಮೀಕ್ಷೆಯ ಆಪ್ ಓಪನ್ ಆಗುತ್ತಿರಲಿಲ್ಲ. ಇನ್ನು ಕೆಲವು ಮೊಬೈಲ್‌ನಲ್ಲಿ ಓಪನ್ ಆದ್ರೂ ಓಟಿಪಿ ಬರುತ್ತಿರಲಿಲ್ಲ. ಅಪ್ಡೇಟ್ ಕೇಳಿ ತಂತಾನೆ ಆಪ್ ಕ್ಲೋಸ್ ಆಗುತ್ತಿತ್ತು. ಸರ್ವೆ ಸಂಬಂಧಿಸಿದ ಯುಹೆಚ್‌ಐಡಿ ಸ್ಟಿಕ್ಕರ್ ಸರಿಯಾಗಿ ಅಂಟಿಸಿರಲಿಲ್ಲ ಈ ರೀತಿಯಾದ ಸಮಸ್ಯೆಯನ್ನು ಸಿಬ್ಬಂದಿ ಎದುರಿಸುತ್ತಿದ್ದಾರೆ. ಇದನ್ನೂ ಓದಿ: ಟಾರ್ಗೆಟ್ 20 ಲಕ್ಷ, ನಡೆದಿದ್ದು 10 ಸಾವಿರ ಮಂದಿ ಗಣತಿ – ಮೊದಲ ದಿನವೇ ನೀರಸ ಆರಂಭ
ಕೆಲವು ಕಡೆಗಳಲ್ಲಿ ಸರಿಯಾಗಿ ಲೊಕೇಷನ್ ತೋರಿಸದೇ ಎಲ್ಲೆಲ್ಲೋ ತೋರಿಸುತ್ತಿದೆ. ಒಂದು ಮನೆ ಅರ್ಜಿ ಭರ್ತಿ ಮಾಡಲು 2 ರಿಂದ 3 ಗಂಟೆ ತೆಗೆದುಕೊಳ್ಳುತ್ತಿದೆ. ನಾಲ್ಕೈದು ಬಾರಿ ಒಟಿಪಿ ತೆಗೆದುಕೊಳ್ಳುತ್ತದೆ. ಪದೇಪದೇ ಒಟಿಪಿ ಹೇಳಲು ಜನರು ಹಿಂದೇಟು ಹಾಕ್ತಿದ್ದಾರೆ. ಇದನ್ನೂ ಓದಿ: ಹಾವೇರಿ | ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆಪ್‌ನಲ್ಲಿ ಮೊದಲ ದಿನವೇ ತಾಂತ್ರಿಕ ದೋಷ – ಸಿಬ್ಬಂದಿ ಪರದಾಟ
ಇನ್ನು ಕೆಲವು ಮನೆಗಳಲ್ಲಿ ಸ್ಟಿಕ್ಕರ್ ಕಿತ್ತು ಹಾಕಿದ್ದಾರೆ. ಕೆಲವು ಮನೆಗಳಲ್ಲಿ ಬರಬೇಡಿ ಹೋಗಿ ಅಂತಾರೆ. ಇನ್ನು ಕೆಲವರು ಎಷ್ಟು ಸಮಯಬೇಕು ನಿಮಗೆ ಸಾಕು ಎದ್ದು ಹೋಗಿ ಎನ್ನುತ್ತಿದ್ದಾರೆಂದು ಸಿಬ್ಬಂದಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.
ಕಷ್ಟಪಟ್ಟು ಅರ್ಜಿ ಭರ್ತಿ ಮಾಡಿದಾಗ ಕೊನೆ ಕ್ಷಣದಲ್ಲಿ ಸಬ್ಮಿಟ್ ತೆಗೆದುಕೊಳ್ಳುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದ್ರೂ ಯಾರೂ ಸೂಕ್ತ ಪರಿಹಾರ ಹೇಳುತ್ತಿಲ್ಲ. ಈ ಎಲ್ಲದರಿಂದ ನಾವೆಲ್ಲ ಗೊಂದಲಕ್ಕೀಡಾಗಿದ್ದೇವೆ. ಮೊದಲು ಸಮಸ್ಯೆ ಬಗೆಹರಿಸಿ, ನಂತರ ಕೆಲಸಕ್ಕೆ ಬರುತ್ತೇವೆ ಎಂದು ಸಿಬ್ಬಂದಿ ಹೇಳಿದ್ದಾರೆ.