ಕಲ್ಲು ತೂರುವವರ ಬದಲು ಅರುಂಧತಿ ರಾಯ್‍ನ ಜೀಪಿಗೆ ಕಟ್ಟಿ: ಬಿಜೆಪಿ ಸಂಸದ ಪರೇಶ್ ರಾವಲ್

Public TV
1 Min Read
partesh rawal and arundhanti

ನವದೆಹಲಿ: ಕಲ್ಲು ತೂರಾಟ ನಡೆಸುವವರನ್ನು ಜೀಪಿಗೆ ಕಟ್ಟುವ ಬದಲು ಲೇಖಕಿ ಅರುಂಧತಿ ರಾಯ್ ಅವರನ್ನು ಕಟ್ಟಿ ಎಂದು ಬಿಜೆಪಿ ಸಂಸದ ಪರೇಶ್ ರಾವಲ್ ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ.

ಕಾಶ್ಮೀರದಲ್ಲಿ ಸೈನಿಕರ ಮೇಲೆ ಕಲ್ಲು ತೂರಾಟ ನಡೆಸುವವರನ್ನು ಸೇನೆಯ ಜೀಪಿನ ಮುಂಭಾಗಕ್ಕೆ ಕಟ್ಟಿದ್ದರ ಹಿನ್ನೆಲೆಯಲ್ಲಿ, ಕಲ್ಲು ತೂರಾಟ ನಡೆಸುವವರ ಬದಲು ಲೇಖಕಿ ಅರುಂಧತಿ ರಾಯ್ ಅವರನ್ನು ಕಟ್ಟಿ ಎಂದು ಪರೇಶ್ ರಾವಲ್ ಟ್ವೀಟ್ ಮಾಡಿದ್ದಾರೆ. ಪರೇಶ್ ರಾವಲ್ ಭಾನುವಾರ ರಾತ್ರಿ ಈ ರೀತಿಯಾಗಿ ಟ್ವಿಟ್ಟರ್‍ನಲ್ಲಿ ಬರೆದುಕೊಂಡಿದ್ದು, ಈ ಹೇಳಿಕೆಯ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ.

stone pelter

ಅರುಂಧತಿ ರಾಯ್ ಭಾರತೀಯ ಸೇನೆಯ ವಿರುದ್ಧ ಮಾತನಾಡಿದ್ದರು ಎಂಬ ಹಿನ್ನೆಲೆಯಲ್ಲಿ ರಾವಲ್ ಈ ರೀತಿ ಟ್ವೀಟ್ ಮಾಡಿದ್ದಾರೆಂದು ವರದಿಯಾಗಿದೆ.

ಇದನ್ನೂ ಓದಿ: ಕಲ್ಲು ತೂರಿದ್ದ ಯುವಕನನ್ನು ಜೀಪಿಗೆ ಕಟ್ಟಿ ಮೆರವಣಿಗೆ ಮಾಡಿದ್ದ ಅಧಿಕಾರಿಗೆ ಸೇನೆಯಿಂದ ಪ್ರಶಸ್ತಿ

ಪರೇಶ್ ರಾವಲ್ ಟ್ವೀಟ್‍ಗೆ ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದು, `ನಿಮಗೆ ಅರುಂಧತಿ ರಾಯ್ ಸಿಗದಿದ್ರೆ, ಪತ್ರಕರ್ತೆ ಸಾಗಾರಿಕಾ ಘೋಷ್ ಅವರನ್ನು ಜೀಪಿನ ಮುಂಭಾಗಕ್ಕೆ ಕಟ್ಟಬಹುದು. ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ರಾವಲ್ `ನಮ್ಮ ಮುಂದೆ ಹಲವು ಆಯ್ಕೆಗಳಿವೆ’ ಎಂದು ಹೇಳಿದ್ದಾರೆ.

ಪರೇಶ್ ರಾವಲ್ ಟ್ವೀಟ್‍ಗೆ ಅರುಂಧತಿ ರಾಯ್ ಇದೂವರೆಗೂ ಪ್ರತಿಕ್ರಿಯೆ ನೀಡಿಲ್ಲ. ಆದರೆ ಪತ್ರಕರ್ತೆ ಸಾಗರಿಕಾ ಘೋಷ್ ಪ್ರತಿಕ್ರಿಯಿಸಿದ್ದು, `ಅದ್ಭುತ ಸರ್, ತುಂಬಾ ಒಳ್ಳೆಯದು. ನೀವೊಬ್ಬ ಮಾದರಿ ಸಂಸದೀಯ ಪಟು’ ಎಂದು ವ್ಯಂಗ್ಯ ಮಾಡಿದ್ದಾರೆ.

ಈ ಟ್ವೀಟ್‍ಗೆ ಕಾಂಗ್ರೆಸ್‍ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಪ್ರತಿಕ್ರಿಯಿಸಿ, `ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ಬಿಜೆಪಿ ನಡುವೆ ಮೈತ್ರಿ ಬೆಸೆದವರನ್ನು ಯಾಕೆ ಜೀಪಿಗೆ ಕಟ್ಟಬಾರದು’ ಎಂದಿದ್ದಾರೆ.

 

 

 

Share This Article
Leave a Comment

Leave a Reply

Your email address will not be published. Required fields are marked *