– ಮುಂದೆ ತಾನಾಸಿ, ಚಿನ್ನಯ್ಯ ಅಕ್ಕನ ವಿಡಿಯೋ ಕೂಡ ವೈರಲ್ ಮಾಡ್ತಾರೆ; ಕಳವಳ
ಚಾಮರಾಜನಗರ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ (Dharmasthala Case) ಆರಂಭದಿಂದಲೂ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಲೇ ಇದೆ. ಶುಕ್ರವಾರ (ಸೆ.19) ಮಹೇಶ್‌ಶೆಟ್ಟಿ ತಿಮರೋಡಿ ಆರೋಪಿ ಚಿನ್ನಯ್ಯನ ಜೊತೆ ಮಾತನಾಡಿದ್ದ ಒಂದು ವರ್ಷದ ಹಿಂದಿನ ವಿಡಿಯೋವೊಂದು ರಿಲೀಸ್ ಆಗಿತ್ತು. ಇದಕ್ಕೆ ಸಂಬಂಧಿಸಿದಂತೆ ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿರುವ ಚಿನ್ನಯ್ಯನ 2ನೇ ಪತ್ನಿ ಹೊಸ ಬಾಂಬ್ ಸಿಡಿಸಿದ್ದಾರೆ. ವಿಠಲ ಗೌಡನೇ ನಮ್ಮನ್ನ ತಿಮರೋಡಿ (Mahesh Shetty Thimarody) ಮನೆಗೆ ಕರೆದುಕೊಂಡು ಹೋಗಿದ್ದು ಅಂತ ಹೇಳಿದ್ದಾರೆ.
ʻಪಬ್ಲಿಕ್ ಟಿವಿʼ (Public TV) ಜೊತೆಗೆ ಮಾತನಾಡಿದ 2ನೇ ಪತ್ನಿ ಮಲ್ಲಿಕಾ, ವಿಠಲ ಗೌಡನೇ (Vittal Gowda) ನಮ್ಮನ್ನ ತಿಮರೋಡಿ ಬಳಿ ಕರೆದುಕೊಂಡು ಹೋಗಿದ್ದು. ನಾನು ಹೋದಾಗ ತಿಮರೋಡಿ ಮನೆ ಇದು ಅಂತ ಗೊತ್ತಿರಲಿಲ್ಲ. ಸ್ವಲ್ಪ ಕೆಲಸ ಉಂಟು ಅಂತ ವಿಠಲ ಕರೆದುಕೊಂಡ ಹೋದ. ಬುರುಡೆಯನ್ನು ತಮಿಳುನಾಡು, ಕೇರಳ, ಬೆಂಗಳೂರು, ದೆಹಲಿ ಅಂತ ಹೇಳ್ತಿದ್ದರು ಅಂತ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ವರ್ಷದ ಹಿಂದೆಯೇ ತಿಮರೋಡಿ ಜೊತೆ ಚಿನ್ನಯ್ಯ ಮಾತುಕತೆ – ಸ್ಫೋಟಕ ವಿಡಿಯೋ ರಿಲೀಸ್
ಸೌಜನ್ಯ ಮಾವ ಬುರುಡೆ ಎತ್ತಿಕೊಂಡು ಗಿರೀಶ್ ಮಟ್ಟಣ್ಣನವರ್ ಮನೆಯಲ್ಲಿ ಮಡಗಿದ್ದರಂತೆ. ತಿಮರೋಡಿ ಆವತ್ತು ಕೆಲಸದವರ ರೀತಿ ಇದ್ದರು. ಛೆಂಬರ್ ಕೆಲಸವಿದೆ ಬನ್ನಿ ಅಂತಾ ಕರೆದುಕೊಂಡು ಹೋಗಿ ತಿಮರೋಡಿ ಮನೆಯಲ್ಲಿ ಬಿಟ್ಟರು. ಅಲ್ಲಿ ಟೀ ಕುಡಿದ್ವಿ. ಮದ್ವೆ ಆಗಿ ಎಷ್ಟು ವರ್ಷ ಆಯ್ತಮ್ಮಾ ಅಂತ ಕೇಳಿದ್ರು, 4 ವರ್ಷ ಆಯ್ತು ಅಂತ ಹೇಳಿದ್ದೆ. ಒಟ್ಟಿನಲ್ಲಿ ಈ ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುವುದೇ ಈ ಗ್ಯಾಂಗ್ ಉದ್ದೇಶವಾಗಿತ್ತು. ಇದೀಗ ನಮ್ಮ ವಿಡಿಯೋ ವೈರಲ್ ಮಾಡಿದ್ದಾರೆ. ಮುಂದೆ ತಾನಾಸಿ ಹಾಗೂ ಚಿನ್ನಯ್ಯ (Chinnaiah) ಅಕ್ಕನ ವಿಡಿಯೋ ಕೂಡ ವೈರಲ್ ಮಾಡ್ತಾರೆ. ನನ್ನ ಗಂಡನನ್ನು ಈ ಪ್ರಕರಣದಲ್ಲಿ ಸಿಕ್ಕಿಸುವ ಪ್ಲ್ಯಾನ್ ಮಾಡಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ ಮಲ್ಲಿಕಾ.
ನಾನು ಮಾತನಾಡದಂತೆ ಎಸ್‌ಐಟಿ ಅಧಿಕಾರಿಗಳು ಸೂಚಿಸಿದ್ದಾರೆ. ನನ್ನ ಗಂಡ ಚಿನ್ನಯ್ಯನನ್ನು ನೋಡಲೂ ಹೋಗುವುದಿಲ್ಲ. ಅವರು ಮೊದಲೇ ನೀನೂ ಬರಬಾರದು ಅಂತ ಹೇಳಿದ್ದಾರೆಂದು ತಿಳಿಸಿದ್ದಾರೆ. ಇದನ್ನೂ ಓದಿ: ಚಿನ್ನಯ್ಯನ ಜೊತೆ ಮಾತನಾಡಿದ್ದ ಪಾರ್ಟ್-2 ವಿಡಿಯೋ ರಿಲೀಸ್ – ಆರೋಪದಿಂದ ಪಾರಾಗಲು ಬುರುಡೆ ಗ್ಯಾಂಗ್ ಪ್ಲ್ಯಾನ್?