ಬೆಂಗಳೂರು: ಜಾತಿಗಣತಿ (Caste Census) ವೇಳೆ ಉಪಜಾತಿಗಳ ಮೊದಲು ಒಕ್ಕಲಿಗ (Vokkaliga) ಎಂದು ಬರೆಸಬೇಕು ಎಂದು ಒಕ್ಕಲಿಗ ಸಮುದಾಯದ ಸಭೆಯಲ್ಲಿ ಒಕ್ಕೊರಲ ಕೂಗು ಕೇಳಿಬಂದಿದೆ.
ವಿಜಯನಗರದ ಆದಿಚುಂಚನಗಿರಿ ಮಠದಲ್ಲಿ ನಿರ್ಮಲಾನಂದಸ್ವಾಮಿಗಳ ನೇತೃತ್ವದಲ್ಲಿ ಒಕ್ಕಲಿಗ ಸಮುದಾಯದ ಜಾತಿಗಣತಿ ಜಾಗೃತಿ ಸಭೆ ನಡೆಯುತ್ತಿದೆ. ಸಭೆಯಲ್ಲಿ ನಂಜಾವಧೂತ ಸ್ವಾಮೀಜಿ, ಹೆಚ್‌ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್, ಡಿವಿ ಸದಾನಂದಗೌಡ, ಆರ್ ಅಶೋಕ್, ಚಲುವರಾಯಸ್ವಾಮಿ, ಅಶ್ವಥ್ ನಾರಾಯಣ್, ನಿಖಿಲ್ ಕುಮಾರಸ್ವಾಮಿ, ಎಂ.ಸಿ.ಸುಧಾಕರ್, ಒಕ್ಕಲಿಗರ ಸಂಘದ ಅಧ್ಯಕ್ಷರು ಹಾಗೂ ವಿವಿಧ ಮಠಾಧೀಶರು ಭಾಗಿಯಾಗಿದ್ದಾರೆ. ಅಲ್ಲದೇ ಒಕ್ಕಲಿಗ ಶಾಸಕರು, ಸಂಸದರು, ಪರಿಷತ್ ಸದಸ್ಯರು, ಮಾಜಿ ಶಾಸಕರು ಪಕ್ಷಾತೀತವಾಗಿ ಪಾಲ್ಗೊಂಡಿದ್ದಾರೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ; JDS ಮುಖಂಡ ಕಬ್ಜ ಮಾಡಿದ್ದ 75 ಕೋಟಿ ಮೌಲ್ಯದ ಭೂಮಿ ಬಿಡಿಎ ವಶಕ್ಕೆ
ಸಮೀಕ್ಷೆ ಗೊಂದಲ, ಒಕ್ಕಲಿಗರ ಉಪ ಜಾತಿಯ ಕುರಿತು ಸಭೆಯಲ್ಲಿ ಚರ್ಚೆ ನಡೆಯುತ್ತಿದೆ. ಒಕ್ಕಲಿಗರನ್ನ ಏನೆಂದು ಉಲ್ಲೇಖಿಸಬೇಕು ಎಂದು ಸಮಾಲೋಚನೆ ನಡೆಸಲಾಗುತ್ತಿದೆ. ಸಭೆ ಬಳಿಕ ಶ್ರೀಗಳು ಸುದ್ದಿಗೋಷ್ಠಿ ನಡೆಸಲಿದ್ದಾರೆ. ಜಾತಿ ಸಮೀಕ್ಷೆಯಲ್ಲಿ ಏನೆಂದು ನಮೂದಿಸಬೇಕು? ಒಕ್ಕಲಿಗ ಸಮುದಾಯಲ್ಲಿ ಉಪಜಾತಿಗಳಿವೆ. ಜಾತಿ ಕಲಂನಲ್ಲಿ ಏನೆಂದು ನಮೂದು ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ: ಬೆಂಗಳೂರಿನ ಹಲವೆಡೆ ಮಂಗಳವಾರ ವಿದ್ಯುತ್ ವ್ಯತ್ಯಯ – ಎಲ್ಲೆಲ್ಲಿ ಕರೆಂಟ್ ಇರಲ್ಲ?
ಇನ್ನು ಸಭೆಗೂ ಮುನ್ನ ಹೆಚ್‌ಡಿಕೆ ಹಾಗೂ ಡಿಕೆಶಿ ನಿರ್ಮಲಾನಂದನಾಥ ಶ್ರೀಗಳನ್ನು ಭೇಟಿ ಮಾಡಿದ್ದಾರೆ. ಸ್ವಾಮೀಜಿಗಳ ಜೊತೆಯಲ್ಲೇ ಇಬ್ಬರೂ ವೇದಿಕೆಗೆ ಆಗಮಿಸಿದರು. ಸ್ವಾಮೀಜಿ ಅಕ್ಕಪಕ್ಕದಲ್ಲಿ ಕುಳಿತರೂ ಡಿಕೆಶಿ ಹಾಗೂ ಹೆಚ್‌ಡಿಕೆ ಒಬ್ಬರನ್ನೊಬ್ಬರು ಮಾತನಾಡಿಸಲಿಲ್ಲ. ಇದನ್ನೂ ಓದಿ: ಕ್ರಿಶ್ಚಿಯನ್ ಕುರುಬ ಅಂತ ನಾವು ಬರೆಸಿಲ್ಲ, ಜನರೇ ಬರೆಸಿದ್ದಾರೆ: ಶಿವರಾಜ ತಂಗಡಗಿ