ಹಾಸನ: ಸುರಕ್ಷತೆಗಾಗಿ ಅಳವಡಿಸಲಾಗಿದ್ದ 3 ಸಿಸಿ ಕ್ಯಾಮೆರಾಗಳನ್ನು ಕಳ್ಳನೊಬ್ಬ ಕದ್ದೊಯ್ದ ಪ್ರಕರಣ ಹೊಳೆನರಸೀಪುರದ (Holenarasipur) ಪೇಟೆ ಬೀದಿಯಲ್ಲಿ ನಡೆದಿದೆ.
ಪೊಲೀಸರ ಸೂಚನೆ ಮೇರೆಗೆ ಪೇಟೆ ಬೀದಿಯಲ್ಲಿರುವ ಅಂಗಡಿಗಳಿಗೆ ಸಿಸಿಟಿವಿಗಳನ್ನು ಮಾಲೀಕರು ಅಳವಡಿಸಿದ್ದರು. ಶುಕ್ರವಾರ ಮುಂಜಾನೆ 3:30ರ ಸುಮಾರಿಗೆ ಬಂದ ಕಳ್ಳ, ಸಿಸಿ ಕ್ಯಾಮೆರಾಗಳನ್ನು ಕದ್ದೊಯ್ದಿದ್ದಾನೆ. ಕಳ್ಳ ಸಿಸಿ ಕ್ಯಾಮೆರಾಗಳನ್ನು ಕೀಳುವ ದೃಶ್ಯ ಮತ್ತೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಕಲಬುರಗಿ | ತಂದೆ ಮೇಲಿನ ಸೇಡಿಗಾಗಿ ಮಗಳನ್ನ ಕೊಂದ ಪಾಪಿ
ಹೊಳೆನರಸೀಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕಳ್ಳತನ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಕೋ ಲಿವಿಂಗ್ ಪಿಜಿಯಲ್ಲಿ ಸೆಕ್ಸ್‌ಗೆ ಒಪ್ಪದ ಯುವತಿಗೆ ಚಾಕು ಇರಿದ ಟೆಕ್ಕಿ
