– ಇಂಜಿನಿಯರಿಂಗ್ ಕಾಲೇಜು ಸೇರಬೇಕಿದ್ದ ಯುವತಿಯ ಬದುಕು ದುರಂತ ಅಂತ್ಯ
ಕಲಬುರಗಿ: ಆಸ್ತಿ, ಕೌಟುಂಬಿಕ ಕಲಹ ಹಾಗೂ ದ್ವೇಷದಿಂದ ಕೊಲೆ ಮಾಡಿರುವದನ್ನ ನಾವು ನೋಡಿದ್ದೇವೆ. ಆದ್ರೆ ಕಲಬುರಗಿಯಲ್ಲಿ (Kalaburagi) ಓರ್ವ ಯುವಕನ ಆತ್ಮಹತ್ಯೆಗೆ ಪ್ರತೀಕಾರವಾಗಿ, ಏನೂ ಅರಿಯದ, ಜೀವನದಲ್ಲಿ ಬಾಳಿ ಬದುಕಬೇಕಾದ ಯುವತಿಯನ್ನು ಬರ್ಬರ ಕೊಲೆ ಮಾಡಿದ್ದಾನೆ.
ಹೌದು. ಕಬ್ಬಿಣದ ರಾಡ್‌ನಿಂದ ಯುವತಿಯ ತಲೆಗೆ ಹೊಡೆದು ಬರ್ಬರ ಹತ್ಯೆ ಮಾಡಿರುವ ಘಟನೆ, ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮದಲ್ಲಿ ನಡೆದಿದೆ. ಮೃತ ಯುವತಿ ಅದೇ ಗ್ರಾಮದ ಭಾಗ್ಯಶ್ರೀ ಸುಲಹಳ್ಳಿ. ಇದನ್ನೂ ಓದಿ: ವಿಜಯಪುರ| ಎಸ್‌ಬಿಐ ಬ್ಯಾಂಕ್‌ನಲ್ಲಿ ದರೋಡೆಯಾಗಿದ್ದ ಚಿನ್ನಾಭರಣ, ನಗದು ಮಹಾರಾಷ್ಟ್ರದಲ್ಲಿ ಪತ್ತೆ
ಹತ್ಯೆಯಾದ ಭಾಗ್ಯಶ್ರೀ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮದ ನಿವಾಸಿಯಾಗಿದ್ದು, ಸೆಪ್ಟೆಂಬರ್ 11 ರಂದು ತನ್ನ ಅಕ್ಕನ ಜೊತೆ ಪ್ರತಿನಿತ್ಯದಂತೆ ರಾತ್ರಿ 8 ಗಂಟೆಗೆ ವಾಕಿಂಗ್ ಹೋಗಿದ್ದಳು. ಈ ವೇಳೆ ಈಕೆಯ ಅಕ್ಕ ಕಿರಾಣಿ ಅಂಗಡಿಗೆ ದಿನಸಿ ತರಲು ಹೋಗಿ ಬರುವಷ್ಟರಲ್ಲಿ ಭಾಗ್ಯಶ್ರೀ ನಾಪತ್ತೆಯಾಗಿದ್ದಾಳೆ. ಅದಾದ ಬಳಿಕ ಈಕೆಯ ಕುಟುಂಬಸ್ಥರು ಮಳಖೇಡ ಪೊಲೀಸ್ ಠಾಣೆಗೆ ಹೋಗಿ ಭಾಗ್ಯಶ್ರೀ ಮಿಸ್ಸಿಂಗ್ ಕೇಸ್ ಸಹ ದಾಖಲಿಸಿದ್ದಾರೆ. ಪೊಲೀಸರು ಈಕೆಯ ಹುಡುಕಾಟ ನಡೆಸುತ್ತಿರುವಾಗಲೇ ಇಂದು ಬೆಳಗ್ಗೆ ಮಳಖೇಡದ ಸಿಮೆಂಟ್ ಕಾರ್ಖಾನೆ ಪಕ್ಕದಲ್ಲಿನ ನಾಲೆಯಲ್ಲಿ ಭಾಗ್ಯಶ್ರೀ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಬ್ಬಿಣದ ರಾಡ್‌ನಿಂದ ಭೀಕರವಾಗಿ ಹೊಡೆದು ಕೊಲೆ ಮಾಡಿರುವ ಅಂಶ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಇನ್ನೂ ಪ್ರಕರಣ ಸಂಬಂಧ ಮಂಜುನಾಥ್ ಎಂಬ ಆರೋಪಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಕಳ್ಳತನ ಮಾಡೋರಿಗೆ ಅದ್ರ ಬಗ್ಗೆ ಗೊತ್ತಿರುತ್ತೆ, ರಾಹುಲ್ ಗಾಂಧಿ ತಪಾಸಣೆ ಮಾಡಿದ್ರೆ ಎಲ್ಲ ತಿಳಿಯುತ್ತೆ – ಶೋಭಾ ಕರಂದ್ಲಾಜೆ
ಒಂದು ತಿಂಗಳ ಹಿಂದೆ ಕೊಲೆ ಆರೋಪಿಯ ಸಹೋದರ ವಿನೋದ್ ಸಿಮೆಂಟ್ ಕಾರ್ಖಾನೆಯಲ್ಲಿ ನೌಕರಿ ಖಾಯಂ ಆಗದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದ. ಇದೇ ಕಾರ್ಖಾನೆಯಲ್ಲಿ ಯೂನಿಯನ್ ಲೀಡರ್ ಆಗಿದ್ದ ಭಾಗ್ಯಶ್ರೀ ತಂದೆ ವಿನೋದ್ ನೌಕರಿ ಖಾಯಂ ಆಗದಂತೆ ಮಾಡಿದ್ದ. ಹೀಗಾಗಿ ವಿನೋದ್ ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಸಾವಿಗೆ ಪ್ರತೀಕಾರವಾಗಿ ಚೆನ್ಮಬಸಪ್ಪ ಅವರ ಮಗಳಾದ ಭಾಗ್ಯಶ್ರೀಯನ್ನ ಕೊಲೆ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಇನ್ನೂ ಕೊಲೆ ಆರೋಪಿ ಮಂಜುನಾಥ್ ಸಹ ಚೆನ್ನಬಸಪ್ಪ ಮನೆಯ ಓರ್ವ ಸದಸ್ಯರನ್ನ ಕೊಲೆ ಮಾಡುವುದಾಗಿ ಗ್ರಾಮಸ್ಥರ ಮುಂದೆ ಹೇಳಿದ್ದನಂತೆ. ಆಗ ಗ್ರಾಮಸ್ಥರು ಮಂಜುನಾಥ್‌ಗೆ ಬುದ್ಧಿ ಮಾತು ಹೇಳಿದ್ರೂ ಪ್ರಯೋಜನವಾಗಿಲ್ಲ.
ಇನ್ನೂ ಒಂದು ತಿಂಗಳು ಕಳೆದಿದ್ದರೆ ಬೆಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜು ಸೇರಬೇಕಿದ್ದ ಯುವತಿ, ಏನು ತಪ್ಪು ಮಾಡದಿದ್ರು ಮಸಣ ಸೇರಿರುವುದು ನಿಜಕ್ಕೂ ದುರಂತವೇ ಸರಿ. ಇದನ್ನೂ ಓದಿ: ನಟಿ ದಿಶಾ ಪಟಾನಿ ಮನೆ ಮೇಲೆ ಗುಂಡಿನ ದಾಳಿ; ಇಬ್ಬರು ಅಪ್ರಾಪ್ತರು ಅರೆಸ್ಟ್