ಬೆಂಗಳೂರು: ಬೇರೆ ಧರ್ಮಕ್ಕೆ ಮತಾಂತರವಾದ್ರೆ ಮುಗೀತು. ಆ ಧರ್ಮದ ಜೊತೆ ಜಾತಿ ಸೇರಿಸುವಂತಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಸ್ಪಷ್ಟನೆ ನೀಡಿದ್ದಾರೆ.
‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಜಾತಿಗಣತಿ ವಿಚಾರಕ್ಕೆ ಸದ್ಯ ಯಾವುದೇ ಗೊಂದಲಗಳಿಲ್ಲ. ಎಕ್ಸ್ಟ್ರಾ ಜಾತಿ ಸೇರಿಸಿದ್ದು ಗೊಂದಲವಾಗಿತ್ತು. ಸ್ಕೆಡ್ಯುಲ್ ಲಿಸ್ಟಲ್ಲಿ ಇರುವ ಜಾತಿಗಳನ್ನ ಮಾತ್ರ ಬರೆಸಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸೆ.22ರಿಂದ ನಡೆಯಬೇಕಿದ್ದ ಜಾತಿ ಜನಗಣತಿ ಮರುಸಮೀಕ್ಷೆ ಮುಂದೂಡಿಕೆ?
ಕ್ರಿಶ್ಚಿಯನ್ ಅಥವಾ ಬೇರೆ ಧರ್ಮಕ್ಕೆ ಮತಾಂತರವಾದ್ರೆ ಮುಗೀತು. ಆ ಧರ್ಮವನ್ನಷ್ಟೇ ಗಣತಿಯಲ್ಲಿ ಬರೆಸಬೇಕು. ಕ್ರಿಶ್ಚಿಯನ್ ಜೊತೆಗೆ ಜಾತಿ ಸೇರಿಸುವಂತಿಲ್ಲ. ಸೆ.22 ಕ್ಕೆ ಜಾತಿಗಣತಿ ಶುರುವಾಗುತ್ತೆ. ಜಾತಿಗಣತಿ ಮುಂದೂಡಿಕೆಯಾಗಲ್ಲ ಎಂದು ಹೇಳಿದ್ದಾರೆ.
ಎಕ್ಸ್ಟ್ರಾ ಜಾತಿಗಳನ್ನ ಕೈಬಿಡಲು ಶಿವರಾಜ್ ತಂಗಡಗಿ ಒಪ್ಪಿದ್ದಾರೆ. ಏಳೆಂಟು ಸಚಿವರಿಗೆ ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಸಿಎಂ ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.