ಬಿಗ್ ಬಾಸ್ ಖ್ಯಾತಿಯ ವೈಷ್ಣವಿಗೌಡ (Vaishnavi Gowda) ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಫುಲ್ ಆ್ಯಕ್ಟಿವ್ ಆಗಿರ್ತಾರೆ. ಮದುವೆಯ ಬಳಿಕ ಪತಿ ಜೊತೆಗೆ ರೀಲ್ಸ್ ಮಾಡಿ ಆಗಾಗ ಹಂಚಿಕೊಳ್ತಿರ್ತಾರೆ. ಅವರ ವಿಡಿಯೋಗಳಿಗೆ ಸಾಕಷ್ಟು ಮೆಚ್ಚುಗೆ ಕೂಡಾ ವ್ಯಕ್ತವಾಗುತ್ತವೆ. ಇದೀಗ ಡೆವಿಲ್ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದ್ರೆ ನೆಮ್ಮದಿಯಾಗ್ ಇರ್ಬೇಕು ಎಂದು ಮಸ್ತ್ ಸ್ಟೆಪ್ ಹಾಕಿದ್ದಾರೆ ವೈಷ್ಣವಿಗೌಡ.
View this post on Instagram
ವೈಷ್ಣವಿಗೌಡ ಡೆವಿಲ್ ಹಾಡಿನ ಹುಕ್ ಸ್ಟೆಪ್ ಹಾಕಿರುವ ವಿಡಿಯೋ ಜಾಲತಾಣದಲ್ಲಿ ಸಖತ್ ಅಟ್ರ್ಯಾಕ್ಟ್ ಮಾಡ್ತಿದೆ. ಈ ವಿಡಿಯೋಗೆ ತಹರೇವಾರಿ ಕಮೆಂಟ್ಸ್ ಬರುತ್ತಿವೆ. ಬಹುತೇಕರು ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನುಳಿದಂತೆ ಕೆಲವರು ವೈಷ್ಣವಿ ಅವರ ಕಾಲೆಳೆದಿದ್ದಾರೆ. ಕೆಲವರು ವೈಷ್ಣವಿ ಅವರು ಮದುವೆ ಆದ್ಮೇಲೆ ದಪ್ಪ ಆಗಿದ್ದಾರೆ ಅಂತಾ ಕಮೆಂಟ್ಸ್ ಮಾಡಿದ್ದಾರೆ. ಇದನ್ನೂ ಓದಿ: ಕಲಾವಿದ ಅಂತ ಲೋನ್ ಸಿಗ್ಲಿಲ್ಲ, ಅಕ್ಕನ ಸ್ಯಾಲರಿ ಮೇಲೆ ಸಾಲ ಪಡೆದು ಫ್ಲಾಟ್ ಖರೀದಿಸಿದ್ದೆ: ರಂಜಿತ್
ಸದ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ವೈಷ್ಣವಿಗೌಡ ಜಾಲತಾಣದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಕಿರುತೆರೆ ಜಗತ್ತಿನಿಂದ ಅಂತರ ಕಾಯ್ದುಕೊಂಡು ಪತಿಯ ಜೊತೆಗೆ ಸುಖಿ ಜೀವನ ನಡೆಸುತ್ತಿದ್ದಾರೆ. ಡೆವಿಲ್ ಚಿತ್ರದ ಟ್ರೆಂಡಿಂಗ್ ಸಾಂಗ್‌ಗೆ ಮೈ ಬಳುಕಿಸಿದ್ದಾರೆ.