– ಆಳಂದ ಆರೋಪಕ್ಕೆ ಛಲವಾದಿ ನಾರಾಯಣಸ್ವಾಮಿ ಟಕ್ಕರ್
ಬೆಂಗಳೂರು: ಹಿಂದೆ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರ (Indira Gandhi) ಮತಗಳ್ಳತನ ಸಂಬಂಧ ಅಲಹಾಬಾದ್ ಹೈಕೋರ್ಟ್ ತೀರ್ಪು ಕೊಟ್ಟ ಬಳಿಕವೇ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಲಾಗಿತ್ತು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಹೇಳಿದರು.
ಆಳಂದದಲ್ಲಿ (Alanda) ಮತದಾರರ ಪಟ್ಟಿಯಿಂದ ಹೆಸರು ತೆಗೆದ ವಿಷಯದಲ್ಲಿ ರಾಹುಲ್ ಗಾಂಧಿ ಮತ್ತು ಬಿ.ಆರ್.ಪಾಟೀಲರ ಆರೋಪಕ್ಕೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 1975-76ರಲ್ಲಿ ಈ ದೇಶದಲ್ಲೇ ಒಂದು ದೊಡ್ಡ ಆಂದೋಲನ ಆಗಿತ್ತು. ಆಗಿನ ರಾಷ್ಟ್ರೀಯ ನಾಯಕ ಜಯಪ್ರಕಾಶ್ ನಾರಾಯಣ್ ಅವರು ಅದರ ನೇತೃತ್ವ ವಹಿಸಿದ್ದರು. ದೇಶದಲ್ಲಿ ಮತಚೋರಿ ವಿರುದ್ಧ ಅವರು ಆಕ್ಷೇಪಿಸಿ ಆಂದೋಲನ ಮಾಡಿದ್ದರು ಎಂದು ವಿವರಿಸಿದರು. ಆಗ ಇಂದಿರಾ ಗಾಂಧಿ ಹಠಾವೋ ಕಾರ್ಯಕ್ರಮ ನಡೆದಿತ್ತು ಎಂದರು. ಇದನ್ನೂ ಓದಿ: ಆಳಂದ ಫೈಲ್ಸ್ ಕೇಸ್ ತನಿಖೆಗೆ ಎಸ್‌ಐಟಿ ರಚನೆಗೆ ಕ್ಯಾಬಿನೆಟ್ ಒಲವು
ಕಳ್ಳ ಮತ್ತೊಬ್ಬನನ್ನು ಕಳ್ಳ ಎನ್ನಲು ಶುರು ಮಾಡಿದ್ದಾನೆ. ಕಳ್ಳ ತಪ್ಪಿಸಿಕೊಳ್ಳಲು ಬೇರೆಯವರನ್ನು ಕಳ್ಳ ಮಾಡಲು ಹೊರಟಿದ್ದಾನೆ ಎಂದು ಟೀಕಿಸಿದರು. ಇದು ರಾಹುಲ್ ಗಾಂಧಿಯವರ ಕೆಲಸ ಎಂದು ದೂರಿದರು. ಇವರು ಮತಪತ್ರ ಬೇಕು ಎನ್ನುತ್ತಾರಲ್ಲವೇ? ಯಾಕೆ? ಬೂತಿನಲ್ಲಿ ಬ್ಯಾಲೆಟ್ ಪೇಪರ್ ಇದ್ದಾಗ ಬೂತನ್ನೇ ಕಳವು ಮಾಡಿದ ಕಾಂಗ್ರೆಸ್ಸಿನವರಿದ್ದಾರೆ. ಅವರ ಮೇಲೆ ಕೋರ್ಟುಗಳಲ್ಲಿ ಇನ್ನೂ ಕೂಡ ಕೆಲವು ಕೇಸುಗಳು ಬಾಕಿ ಇವೆ ಎಂದು ವಿವರಿಸಿದರು. ಇದನ್ನೂ ಓದಿ: ನ.30 ರ ನಂತರ ಭಾರತದ ಮೇಲಿನ ಶೇ.25 ರಷ್ಟು ದಂಡ ಸುಂಕವನ್ನು ಅಮೆರಿಕ ತೆಗೆಯಬಹುದು: CEA
ರಾಜ್ಯದಲ್ಲೂ ಕಾಂಗ್ರೆಸ್ಸಿನವರು ಬೂತ್‌ಗಳನ್ನು ಹೊತ್ತುಕೊಂಡು ಹೋಗಿ ಕೇಸಾದುದು ನಮಗೆ ನೆನಪಿದೆ. ಬೂತ್ ಒಳಗೆ ಹೋಗಿ ಬ್ಯಾಲೆಟ್ ಪೇಪರ್‌ಗೆ ಶಾಯಿ ಹಾಕಿದ್ದೂ ಇದೆ. ಇವಿಎಂಗಳ ಮೂಲಕ ಪಾರದರ್ಶಕ ಮತದಾನ ನಡೆಯುತ್ತಿದೆ ಎಂದು ನುಡಿದರು. ಇದನ್ನೂ ಓದಿ: ಲಿಂಗಾಯತರನ್ನು ತುಂಡು ತುಂಡು ಮಾಡಲು ಹೇಳಿದ್ಯಾರು- ಪೇಪರ್ ಎಸೆದು ಕ್ಯಾಬಿನೆಟ್ ಸಭೆಯಲ್ಲಿ ಎಂಬಿಪಿ ರೋಷಾವೇಶ