ಬಾಗಲಕೋಟೆ: ಸತತವಾಗಿ ಎರಡು ದಿನಗಳಿಂದ ಸುರಿಯುತ್ತಿರುವ ಸತತ ಮಳೆಗೆ (Rain) ನೂರಾರು ಎಕರೆಯಲ್ಲಿ ಬೆಳೆದ ಬೆಳೆಗಳು ನಾಶವಾಗಿದ್ದರೆ ಇತ್ತ ಇಳಕಲ್ (Ilkal) ತಾಲೂಕಿನ ಗೋನಾಳ್ ಎಸ್ ಟಿ ಗ್ರಾಮದಲ್ಲಿ ಎರಡು ಮನೆಗಳ ಮೇಲ್ಚಾವಣಿ ಕುಸಿದಿವೆ.
ಗ್ರಾಮದ ಮಹಾಂತೇಶ ಗೌಡರ್ ಇವರ ಮನೆ ಸಂಪೂರ್ಣ ಕುಸಿದಿದ್ದು, ಮನೆಯ ಮೇಲ್ಛಾವಣಿಯೇ ನೆಲಕ್ಕೆ ಕುಸಿದು ಭಾರಿ ಅನಾಹುತ ಸೃಷ್ಟಿಸಿದೆ. ಇನ್ನು ಅದೇ ಗ್ರಾಮದ ಯಂಕಣ್ಣ ಹಾಳಕೇರಿ ಇವರ ಮನೆಯ ಗೋಡೆಯ ಭಾಗ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಇದನ್ನೂ ಓದಿ: ದಾವಣಗೆರೆ | ಡಿಸಿಯನ್ನೂ ಬಿಡದೆ ಅಟ್ಟಾಡಿಸಿದ ಬೀದಿ ನಾಯಿಗಳು!
ಮಳೆಗೆ ಗೋಡೆ ಬಿರುಕು ಬಿಟ್ಟಿದನ್ನು ನೋಡಿದ ಎರಡು ಮನೆಯವರು ಪಕ್ಕದ ಮನೆಗೆ ತೆರಳಿದಿದ್ದಾರೆ. ಅಷ್ಟರಲ್ಲೇ ಮನೆ ಮೇಲ್ಛಾವಣಿ ಕುಸಿದು ಅನಾಹುತ ಸೃಷ್ಟಿಸಿದೆ.

