ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಬಹುಭಾಷಾ ನಟಿ ವೇದಿಕಾ (Actress Vedhika) ಪಡ್ಡೆಗಳ ಮೈಬಿಸಿ ಹೆಚ್ಚಿಸುವಂತಹ ಫೋಟೋಗಳಿಗೆ (Bold Photos) ಪೋಸ್ ಕೊಟ್ಟಿದ್ದಾರೆ.
ಮೂಲತಃ ಕನ್ನಡತಿಯಾದ ಬಹುಭಾಷಾ ತಾರೆ ವೇದಿಕಾ ಅವರು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ಒಂದಷ್ಟು ಬಿಕಿನಿ ಫೋಟೋಗಳನ್ನು ಹಂಚಿಕೊಂಡಿದ್ದರು ವೇದಿಕಾ. ಆ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಏಜಿಯನ್ ಸಮುದ್ರದಲ್ಲಿ ಕಡುನೀಲಿ ಬಣ್ಣದ ಬಿಕಿನಿ ತೊಟ್ಟು ಫೋಟೋಗಳಿಗೆ ಪೋಸ್ ಕೊಟ್ಟಿರುವ ನಟಿ ಪಡ್ಡೆಗಳ ಎದೆಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೇ ಸೂರ್ಯ ನನ್ನ ಏಕೈಕ ಫಿಲ್ಟರ್ ಅಂತ ಬರೆದುಕೊಂಡಿದ್ದಾರೆ.
ಕೆಲ ನೆಟ್ಟಿಗರು ನಟಿಯ ಬೋಲ್ಡ್ ಅವತಾರಕ್ಕೆ ʻವಾವ್ ಎಷ್ಟು ಸೆಕ್ಸಿʼ ಅಂತಾ ಕಾಮೆಂಟ್ ಮಾಡಿದ್ರೆ ಇನ್ನೂ ಕೆಲವರು ಬೆಸ್ಟ್ ಬಿಕಿ ಶೋವರ್, ಏನ್ ಸ್ಟ್ರಕ್ಚರ್ ಗುರು? ವೇದಿಕಾ ಸೆಕ್ಸಿ, ಮಸ್ತ್ ಮಸ್ತ್ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಕೊತ್ತಲವಾಡಿ ನಿರ್ಮಾಪಕರಿಗೆ ಅನ್ಯಾಯವಾಗಿದೆ, ಗೊತ್ತಾಗ್ಲಿ ಅಂದೇ ಇಷ್ಟೆಲ್ಲಾ ಮಾಡಿದ್ದು: ನಟಿ ಸ್ವರ್ಣ
ಸದ್ಯ ವೇದಿಕಾ ಅವರಿಗೆ 37 ವರ್ಷ ಎನ್ನಲಾಗುತ್ತಿದೆ. ಇನ್ನೂ ಮದ್ವೆಯಾಗದ ನಟಿ ತನ್ನ ದೇಹ ಸೌಂದರ್ಯನ್ನು ಕಾಪಾಡಿಕೊಳ್ಳುವಲ್ಲಿ ಹೆಚ್ಚಿನ ಕಾಳಜಿ ವಹಿಸುತ್ತಾರೆ. ವೇದಿಕಾ ಅವರು ಹೀಗೆ ಬಿಕಿನಿ ಫೋಟೋಗಳನ್ನು ಹಂಚಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಆಗಾಗ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬಿಕಿನಿ ಧರಿಸಿ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
ಮೂಲತಃ ಕನ್ನಡ ನಟಿಯಾಗಿದ್ದರೂ ವೇದಿಕಾ 2006ರಲ್ಲಿ ವೃತ್ತಿ ಬದುಕು ಆರಂಭಿಸಿದ್ದು ತಮಿಳು ಚಿತ್ರರಂಗದಿಂದ. ಆನಂತರ ಕನ್ನಡಕ್ಕೆ ಬಂದರು. ವೇದಿಕಾ ಅವರು ಗಣೇಶ್ ಜೊತೆ ‘ಸಂಗಮ’ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡಕ್ಕೆ ಕಾಲಿಟ್ಟರು. ಇದನ್ನೂ ಓದಿ: ಬೆಡ್‌ರೂಮಲ್ಲಿ ಬಿಕಿನಿ ತೊಟ್ಟು ಸೆಲ್ಫಿ ಕ್ಲಿಕ್ಕಿಸಿದ ನಟಿ – ದಿಶಾ ಪಟಾನಿ ಮೈಮಾಟಕ್ಕೆ ಪಡ್ಡೆ ಹುಡುಗರು ಬೋಲ್ಡ್
ಆನಂತರ ಶಿವಲಿಂಗ, ಗೌಡ್ರು ಹೋಟೆಲ್, ಗಣ ಮುಂತಾ ಸಿನಿಮಾಗಳಲ್ಲಿ ನಟಿಸಿದ್ದಾರೆ. ವೇದಿಕಾ ನಟನೆಯ ಎರಡು ಸಿನಿಮಾಗಳು ಈ ವರ್ಷ ತೆರೆಕಂಡಿವೆ. ಒಂದು ಕನ್ನಡದ ‘ಗಣ’, ಮತ್ತೊಂದು ತಮಿಳಿನ ‘ಗಜಾನ’. ಇದನ್ನೂ ಓದಿ: ಬಿಕಿನಿ ಫೋಟೋ ಹಾಕಿ ಕಾಮೆಂಟ್ಸ್ ಆಫ್ ಮಾಡಿದ ಆಲಿಯಾ ಭಟ್!