ಧಾರವಾಡ: ಅಂಬುಲೆನ್ಸ್‌ಗೆ (Ambulence) ಎಷ್ಟೋ ಜನ ಜಾಗಬಿಟ್ಟುಕೊಡುವುದೇ ಇಲ್ಲ. ಇನ್ನು, ಸಿಎಂ ಕಾನ್ವೆ ಕಾರು ಬರುವಾಗ ಅಂಬುಲೆನ್ಸ್‌ಗೆ ಜಾಗಬಿಟ್ಟುಕೊಡುವುದಿಲ್ಲ, ಟ್ರಾಫಿಕ್‌ನಲ್ಲೇ ಅಂಬುಲೆನ್ಸ್ ಸಿಲುಕುತ್ತೆ ಅಂತಾ ದೂರಿದ್ದವರೇ ಹೆಚ್ಚು. ಆದರೆ ಸಿಎಂ ಸಿದ್ದರಾಮಯ್ಯ (Siddaramaiah), ಅಂಬುಲೆನ್ಸ್‌ಗೆ ದಾರಿ ಮಾಡಿಕೊಡುವ ಮೂಲಕ ಅಪವಾದಿಂದ ಮುಕ್ತರಾಗಿದ್ದಾರೆ.
ಹೌದು, ಎದೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯನ್ನ ಅಂಬುಲೆನ್ಸ್‌ನಲ್ಲಿ ಕರೆದೊಯ್ಯುವಾಗ ದಾರಿ ಬಿಟ್ಟು ಕೊಟ್ಟಿದ್ದಾರೆ ಸಿಎಂ ಸಿದ್ದರಾಮಯ್ಯ. ಧಾರವಾಡ (Dharwad) ಕೃಷಿ ವಿವಿಯ ಕೃಷಿ ಮೇಳ ಉದ್ಘಾಟನೆ ಕಾರ್ಯಕ್ರಮ ಮುಗಿಸಿ ಹುಬ್ಬಳ್ಳಿಗೆ ವಾಪಸ್ ಆಗುತ್ತಿದ್ದ ವೇಳೆ ಧಾರವಾಡ ನಗರದ ಎನ್‌ಟಿಟಿಎಫ್ ಬಳಿ ಸಿಎಂ ಕಾರು ಇದ್ದಾಗಲೇ ಹಿಂದಿನಿಂದ ಅಂಬುಲೆನ್ಸ್ ಬಂದಿದೆ. ಇದನ್ನೂ ಓದಿ: ಮಡಿಕೇರಿ | ಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿ
ಇದು ಸಿಎಂ ಮತ್ತು ಕಾನ್ವೆ ಗಮನಕ್ಕೆ ಬರುತಿದ್ದಂತೆ ಅಂಬುಲೆನ್ಸ್‌ಗೆ ದಾರಿ ಮಾಡಿಕೊಡಲಾಗಿದೆ. ಧಾರವಾಡ ನಗರದ ಬಾಗಲಕೋಟ ಪೆಟ್ರೋಲ್ ಪಂಪ್ ಬಳಿಯೇ ನಿಂತು ಅಂಬುಲೆನ್ಸ್ ಹೋಗಲು ಅವಕಾಶ ಮಾಡಿಕೊಡಲಾಗಿದೆ. ಇದನ್ನೂ ಓದಿ: ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಉದ್ಘಾಟನೆ