ಬೆಂಗಳೂರು: ಜಾತಿಗಣತಿ (Caste Census) ವೇಳೆ 52 ಜಾತಿಗಳಿಗೆ ಮತಾಂತರ ಕಾಲಂನಲ್ಲಿ (Religious Conversion) ಮತಾಂತರ ಒಳಗೊಂಡ ಜಾತಿ ಬರೆಸಲು ಅವಕಾಶ ನೀಡುವ ಸರ್ಕಾರದ ಕ್ರಮಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಜಾತಿ ಪಟ್ಟಿಯಲ್ಲಿ ಕ್ರಿಶ್ಚಿಯನ್‌ಗೆ ಮತಾಂತರವಾದ ಹಿಂದುಳಿದ ವರ್ಗದವರಿಗೆ ಪ್ರತ್ಯೇಕ ಕಾಲಂ ನೀಡಲಾಗಿದೆ. 52 ಜಾತಿ ಹೆಸರಿನ ಬಗ್ಗೆ ಆಕ್ಷೇಪ ಇದೆ. ಆಕ್ಷೇಪಾರ್ಹ ಜಾತಿಗಳ ಹೆಸರು ಕೈಬಿಟ್ಟು ಸಮೀಕ್ಷೆ ನಡೆಸಬೇಕೆಂದು ಒತ್ತಾಯ ಕೇಳಿಬಂದಿದೆ. ಲಿಂಗಾಯತ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಮರಾಠ ಕ್ರಿಶ್ಚಿಯನ್, ಬಲಿಜ ಕ್ರಿಶ್ಚಿಯನ್, ಮಾದಾರ ಕ್ರಿಶ್ಚಿಯನ್, ಬಂಜಾರ ಕ್ರಿಶ್ಚಿಯನ್, ಭೋವಿ ಕ್ರಿಶ್ಚಿಯನ್ ಹೀಗೆ 52 ಜಾತಿಗಳಿಗೆ ಮತಾಂತರ ಹೊಂದಿದ ಜಾತಿಗಳ ಕಾಲಂ ಕೊಟ್ಟಿದ್ದಾರೆ. ಹಾಗಾಗಿ ಮತಾಂತರ ಹೊಂದಿದ ಜಾತಿಗಳ ಕಾಲಂ ವಿರುದ್ಧ ಹೋರಾಟಕ್ಕೆ ಬಿಜೆಪಿ ಮುಂದಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯುವ ಸುಳಿವು ನೀಡಿದ್ರಾ ಸಿಎಂ?
ಇದೇ ಸೆಪ್ಟೆಂಬರ್ 16ರಂದು ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ಮೂಲಕ ಮೊದಲ ಸಭೆ ನಡೆಯಲಿದ್ದು, ಹಿಂದುಳಿದ ವರ್ಗಗಳ ಸ್ವಾಮೀಜಿಗಳು, ರಾಜಕೀಯ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಂಗಳೂರು ಸಭೆ ಬಳಿಕ ರಾಜ್ಯದ 10 ಕಡೆಗಳಲ್ಲೂ ವಿವಿಧ ಸ್ವಾಮೀಜಿಗಳು, ರಾಜಕೀಯ, ಸಾಮಾಜಿಕ ನಾಯಕರ ಸಭೆಗೆ ಪ್ಲ್ಯಾನ್ ಮಾಡಿದ್ದಾರೆ. ಇದನ್ನೂ ಓದಿ: ಮಹಾಸಭೆಯಿಂದ ಗೊಂದಲ ಸೃಷ್ಟಿ: ಬೊಮ್ಮಾಯಿ
ಇನ್ನು ಕುರುಬ ಕ್ರಿಶ್ಚಿಯನ್ ಜಾತಿ ಕಾಲಂ ಕೈಬಿಡುವಂತೆ ದೇವದುರ್ಗದ ತಿಂಥಣಿ ಬ್ರಿಡ್ಜ್‌ನ ಕನಕ ಗುರುಪೀಠದ ಸಿದ್ದರಾಮಾನಂದ ಸ್ವಾಮೀಜಿ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಅಲ್ಲದೆ, ಜಾತಿ ಕಾಲಂನಲ್ಲಿ ಕುರುಬ ಎಂದೇ ಬರೆಸಬೇಕು ಅಂದಿದ್ದಾರೆ. ಹಿಂದುಳಿದ ಆಯೋಗ ಬಿಡುಗಡೆ ಮಾಡಿದ ಜಾತಿ ಪಟ್ಟಿಯಲ್ಲಿ ಅನ್ಯ ಜಾತಿಗಳ ಜೊತೆಗೆ ಹಲವಾರು ಜಾತಿಗಳನ್ನು ಸೇರಿಸಿ ಹೊಸ ಜಾತಿಗಳನ್ನ ಸೃಷ್ಟಿ ಮಾಡಿ ಸಮಾಜದಲ್ಲಿ ಗೊಂದಲವನ್ನ ಉಂಟು ಮಾಡಿದೆ. ಈ ಕೃತ್ಯದಲ್ಲಿ ಯಾರ ಕೈವಾಡ ಇದೆಯೋ ಗೊತ್ತಿಲ್ಲ. ಆದರೆ ಮತಾಂತರಕ್ಕೆ ಪ್ರೇರಣೆ ನೀಡುವಂತಹ ಕೆಲಸ ಮಾಡುತ್ತಿದ್ದಾರೆ. ಇದನ್ನ ನಾವು ಖಂಡಿಸಬೇಕು. ಮತಾಂತರಗೊಂಡ ಜನರು ತಮ್ಮ ಧರ್ಮದ ಹೆಸರನ್ನು ಬರೆಸುವ ಬಗ್ಗೆ ನಮ್ಮ ಅಭ್ಯಂತರವಿಲ್ಲ. ಆದರೆ ಜಾತಿ ಕಾಲಂನಲ್ಲಿ ಅನ್ಯಧರ್ಮದ ಹೆಸರು ಬರೆಯುವುದಕ್ಕೆ ನಮ್ಮ ಆಕ್ಷೇಪವಿದೆ ಎಂದು ಸಿದ್ದರಾಮಾನಂದ ಸ್ವಾಮೀಜಿ ಹೇಳಿದ್ದಾರೆ. ಇದನ್ನೂ ಓದಿ: ‘ಮತಾಂತರ ಅವರ ಹಕ್ಕು’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಕಿಡಿ – ಜಾತಿಗಣತಿ ಮತಾಂತರ ಕಾಲಂಗೆ ಆಕ್ಷೇಪ
ಯಾವುದೆಲ್ಲ ಜಾತಿಗಳಿಗೆ ಕ್ರಿಶ್ಚಿಯನ್ ಹೆಸರಿನ ಲಿಂಕ್?
ಲಿಂಗಾಯತ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಮರಾಠ ಕ್ರಿಶ್ಚಿಯನ್, ಬಲಿಜ ಕ್ರಿಶ್ಚಿಯನ್, ಮಾದಾರ ಕ್ರಿಶ್ಚಿಯನ್, ಬಂಜಾರ ಕ್ರಿಶ್ಚಿಯನ್, ಭೋವಿ ಕ್ರಿಶ್ಚಿಯನ್ ಇತ್ಯಾದಿ.. ಇದನ್ನೂ ಓದಿ: ಕೇಂದ್ರದಲ್ಲಿ ನಮ್ಮ ಸರ್ಕಾರ ಇದ್ದಿದ್ರೆ ಭಾರತ-ಪಾಕ್ ಮ್ಯಾಚ್ ರದ್ದು ಮಾಡಿಸ್ತಿದ್ವಿ: ಪ್ರದೀಪ್ ಈಶ್ವರ್