ದುಬೈ: ಏಷ್ಯಾ ಕಪ್ 2025ರ ಪಂದ್ಯದಲ್ಲಿ ಟೀಂ ಇಂಡಿಯಾದ ಮಾರಕ ಬೌಲಿಂಗ್ ದಾಳಿಗೆ ಪತರುಗುಟ್ಟಿದ ಪಾಕಿಸ್ತಾನ 128 ರನ್‌ಗಳ ಟಾರ್ಗೆಟ್ ನೀಡಿದೆ.
ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಿಗದಿತ ಓವರ್‌ಗೆ 9 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿದೆ.
ಹಾರ್ದಿಕ್ ಪಾಂಡ್ಯ ಎಸೆದ ಮೊದಲ ಎಸೆತದಲ್ಲೇ ಸೈಮ್ ಅಯೂಬ್ ವಿಕೆಟ್ ಒಪ್ಪಿಸಿ ಹೊರ ನಡೆದರು. ತಂಡದ ಮೊತ್ತ 6 ರನ್ ಇರುವಾಗಲೇ ಮತ್ತೊಂದು ವಿಕೆಟ್ ಬಿತ್ತು. ಮೊದಲೆರಡು ಓವರ್‌ನಲ್ಲೇ 2 ವಿಕೆಟ್ ಕಳೆದುಕೊಂಡ ಪಾಕ್ ಆತಂಕಕ್ಕೀಡಾಯಿತು.
ಸಾಹಿಬ್‌ಜಾದಾ ಫರ್ಹಾನ್ ಏಕಾಂಗಿ ಹೋರಾಟ ನಡೆಸಿ 40 ರನ್ ಗಳಿಸಿದರು. ಉಳಿದಂತೆ ಬ್ಯಾಟರ್‌ಗಳು ಕಳಪೆ ಪ್ರದರ್ಶನ ನೀಡಿದರು. ಕೆಳ ಕ್ರಮಾಂಕದಲ್ಲಿ ಶಾಹಿನ್ ಶಾ ಅಫ್ರಿದಿ 16 ಬಾಲ್‌ಗೆ 33 ರನ್ ಗಳಿಸಿ ತಂಡದ ಮೊತ್ತ 100 ರನ್ ದಾಟುವಲ್ಲಿ ನೆರವಾದರು.
ಭಾರತ ತಂಡದ ಬೌಲರ್‌ಗಳ ದಾಳಿಗೆ ಪಾಕ್ ಬ್ಯಾಟರ್‌ಗಳು ತರಗೆಲೆಯಂತೆ ಉದುರಿ ಹೋದರು. ಸ್ಪಿನ್ ಜಾದು ಮಾಡಿದ ಕುಲ್ದೀಪ್ ಯಾದವ್ 3 ವಿಕೆಟ್ ಕಿತ್ತು ಮಿಂಚಿದರು. ಅಕ್ಷರ್ ಪಟೇಲ್ ಮತ್ತು ಬುಮ್ರಾ ತಲಾ 2, ಹಾರ್ದಿಕ್ ಪಾಂಡ್ಯ ಮತ್ತು ವರುಣ್ ಚಕ್ರವರ್ತಿ ತಲಾ 1 ವಿಕೆಟ್ ಪಡೆದರು.
ಅಂತಿಮವಾಗಿ ಪಾಕ್ 9 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿತು. ಟೀಂ ಇಂಡಿಯಾ ಗೆಲುವಿಗೆ 128 ರನ್ ಗುರಿ ನೀಡಿದೆ.