ಬೆಂಗಳೂರು: ವೀರಶೈವ ಲಿಂಗಾಯತ ಮಹಾಸಭೆ (Veerashaiva Lingayat Mahasabha) ಸಂಪೂರ್ಣವಾಗಿ ಕಾಂಗ್ರೆಸ್‌ಮಯ ಆಗಿದೆ. ಮಹಾಸಭೆಗೆ ನನ್ನ ವಿನಂತಿ, ಕಾನೂನು, ಸಂವಿಧಾನ ಪ್ರಕಾರ ಸಲಹೆ ಮಾಡಬೇಕು. ಮಹಾಸಭೆ ಗೊಂದಲ ಸೃಷ್ಟಿಸಬಾರದು. ಗೊಂದಲ ಸೃಷ್ಟಿಸದೇ ಸೂಕ್ತ ಸಲಹೆ ಕೊಡಬೇಕೆಂದು ಬೊಮ್ಮಾಯಿ (Basavaraj Bommai) ಆಗ್ರಹಿಸಿದರು.
ಒಂದು ಕಡೆ ಹೊಸ ಧರ್ಮ ಅಂತಾರೆ, ಇನ್ನೊಂದು ಕಡೆ ವೀರಶೈವ ಅಂತಾರೆ, ಲಿಂಗಾಯತ ಅಂತಾರೆ, ವೀರಶೈವ ಲಿಂಗಾಯತ ಅಂತಾರೆ. ಈ ಗೊಂದಲ ನಿವಾರಣೆ ಆಗಬೇಕು. ಇಲ್ಲದಿದ್ದರೆ ಜನ ತಮ್ಮ ತೀರ್ಮಾನ ಮಾಡುತ್ತಾರೆ. ನಾವೂ ಕೂಡಾ ಈ ವಿಚಾರದಲ್ಲಿ ಪಕ್ಷದ ಹಿರಿಯರು ಚರ್ಚೆ ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ‘ಮತಾಂತರ ಅವರ ಹಕ್ಕು’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಕಿಡಿ – ಜಾತಿಗಣತಿ ಮತಾಂತರ ಕಾಲಂಗೆ ಆಕ್ಷೇಪ
ಜಾತಿ ಜನಗಣತಿ ಸಮೀಕ್ಷೆಯಲ್ಲಿ ನಾಸ್ತಿಕ ಕಾಲಂ ಸೇರಿಸಿರುವ ಕುರಿತು ಕೇಳಿದ ಪ್ರಶ್ನೆಗೆ, ಈ ಕಾಲಂ ಅನ್ನು ಸಿದ್ದರಾಮಯ್ಯಗಾಗಿ ಮಾಡಿದ್ದಾರೆ ಎಂದು ಬೊಮ್ಮಾಯಿ ವ್ಯಂಗ್ಯವಾಡಿದರು. ಇದನ್ನೂ ಓದಿ: ಅದೊಂದು ಹಾಡಿನಿಂದ ದಿಢೀರ್ ಫೇಮಸ್ ಆದ ಯುವತಿ – ಇನ್ಸ್ಟಾದಲ್ಲಿ 150 ಇದ್ದ ಫಾಲೋವರ್ಸ್ ಈಗ 40,000
ಜನರ ಭಾವನೆ ಮುಖ್ಯ:
ಭಾರತ – ಪಾಕ್ ನಡುವೆ ಇಂದು ಕ್ರಿಕೆಟ್ ಮ್ಯಾಚ್ ನಡೆಯುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಹಲ್ಗಾಂ ಹತ್ಯಾಕಾಂಡ, ಆಪರೇಷನ್ ಸಿಂಧೂರ, ಭಾರತ ಬಗ್ಗೆ ಪಾಕ್ ಹೇಳಿಕೆಗಳನ್ನು ಪರಿಗಣಿಸಬೇಕು. ಇದೆಲ್ಲದರ ಹಿನ್ನೆಲೆಯಲ್ಲಿ ಈ ಮ್ಯಾಚ್ ಅನ್ನು ನಡೆಸದಿದ್ದರೆ ಚೆನ್ನಾಗಿತ್ತು. ಕ್ರೀಡೆ ಇರಬೇಕು, ಆದರೆ ದೇಶ, ದೇಶದ ಜನರ ಭಾವನೆ ಬಹಳ ಮುಖ್ಯ, ಬಿಸಿಸಿಐ ದೇಶದ ಜನರ ಭಾವನೆಗಳಿಗೆ ತಕ್ಕ ನಿರ್ಧಾರ ತೆಗೆದುಕೊಂಡಿಲ್ಲ ಎಂದರು. ಇದನ್ನೂ ಓದಿ: ಪಾಕ್ ವಿರುದ್ಧ ಟೀಂ ಇಂಡಿಯಾ ಗೆಲುವಿಗೆ ವಿಶ್ವ ಹಿಂದೂ ರಕ್ಷಾ ಪರಿಷತ್‌ನಿಂದ ಹೋಮ-ಹವನ
ಹೆಚ್ಚಿನ ಪರಿಹಾರ ಕೊಡಲಿ:
ಹಾಸನ ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಬೊಮ್ಮಾಯಿ ಆಗ್ರಹಿಸಿದರು. ಹಿಂದೆ ನಡೆದ ಹಲವು ಪ್ರಕರಣಗಳಲ್ಲಿ ಇದೇ ಸಿಎಂ ಹೆಚ್ಚು ಪರಿಹಾರ ಕೊಟ್ಟಿದ್ದಾರೆ. ಹಾಸನದಲ್ಲಿ ಸತ್ತವರು ಅಮಾಯಕರು, ಯುವಕರು ಅವರ ಕುಟುಂಬಗಳು ಕಷ್ಟದಲ್ಲಿದ್ದಾರೆ, ಇದೆಲ್ಲ ನೋಡಿಕೊಂಡು ಹೆಚ್ಚು ಪರಿಹಾರ ಕೊಡಲಿ. ದಾಖಲೆ ಪ್ರಮಾಣದ ಪರಿಹಾರವನ್ನು ಸಿಎಂ ಕೊಡಬೇಕು ಎಂದು ಬೊಮ್ಮಾಯಿ ಆಗ್ರಹಿಸಿದರು. ಇದನ್ನೂ ಓದಿ: ತಮಾಷೆಗಾಗಿ ಹಾಸ್ಟೆಲ್‌ನಲ್ಲಿ ಸ್ನೇಹಿತರಿಂದ ವಿದ್ಯಾರ್ಥಿಗಳ ಕಣ್ಣಿಗೆ ಫೆವಿಕ್ವಿಕ್ ಗಮ್ – 7 ಮಕ್ಕಳಿಗೆ ಮುಂದುವರಿದ ಚಿಕಿತ್ಸೆ