ಬೆಂಗಳೂರು: ಮದ್ದೂರು (Maddur) ಈಗ ಶಾಂತವಾಗಿದೆ. ಬಿಜೆಪಿ (BJP) ಅವರು ಬಂದ್ ಮಾಡಿದ್ದೇ ಶಾಂತಿ ಕದಡೋಕೆ ಎಂದು ಸಚಿವ ಚಲುವರಾಯಸ್ವಾಮಿ (Chaluvarayaswamy) ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಮದ್ದೂರು ಗಲಾಟೆ (Maddur Stone Pelting) ವಿಚಾರಕ್ಕೆ ವಿಧಾನಸೌಧದದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಈಗ ಎಲ್ಲವೂ ಶಾಂತವಾಗಿದೆ. ಆರಂಭದಲ್ಲಿ ಆದ ಘಟನೆ ಬಗ್ಗೆ ನಾವು ಕ್ರಮ ತೆಗೆದುಕೊಂಡಿದ್ದೇವೆ. ಘಟನೆಗೆ ಕಾರಣರಾದವರನ್ನು ಬಂಧಿಸಲಾಗಿದೆ. ಯಾವುದೇ ಮುಲಾಜಿಲ್ಲದೇ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಆದರೂ ಬಿಜೆಪಿಯವರು ಬಂದ್ ಮಾಡಿದ್ದಾರೆ. ಅವರು ವಾತಾವರಣವನ್ನು ಕಲುಷಿತ ಮಾಡಲು ಹೀಗೆ ಮಾಡಿದ್ರಾ? ಇವರ ಉದ್ದೇಶ ಕೋಮು ಸಂಘರ್ಷ ಸೃಷ್ಟಿ ಮಾಡೋಕೆ ಮಾಡಿದ್ರಾ ಅಂತಾ ಅವರೇ ಯೋಚನೆ ಮಾಡಲಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಂಗಮೇಶ್ ಈ ಜನ್ಮದಲ್ಲೇ ಇಸ್ಲಾಂಗೆ ಹೋಗಿಬಿಡಲಿ: ಯತ್ನಾಳ್ ತರಾಟೆ
ನಾವು ಕ್ರಮ ತೆಗೆದುಕೊಳ್ಳಲು ನಿಧಾನ ಮಾಡಿದ್ರೆ ಅವರು ಮಾಡಿದ್ದರಲ್ಲಿ ಅರ್ಥ ಇದೆ. ಕ್ರಮ ತೆಗೆದುಕೊಂಡ ಮೇಲೂ ಬಾಯಿಗೆ ಬಂದ ಹಾಗೆ ವೇದಿಕೆಯಲ್ಲಿ ನಿಂತು ಮಾತನಾಡುತ್ತಿದಾರೆ ಅಂದ್ರೆ ಮಂಡ್ಯ ಜಿಲ್ಲೆಯ ಶಾಂತಿ ಕದಡಲು ತಾನೇ?ಮಳವಳ್ಳಿ ಬಂದ್ ಏನಾಗಿದೆ? ಒಂದು ಅಂಗಡಿ ಮುಚ್ಚಿಲ್ಲ. ಬಿಜೆಪಿ ಅವರು ಮಂಡ್ಯಗೆ ಇಂತಹ ವಿಷಯಕ್ಕೆ ಬರಬೇಡಿ. ಇಂತಹ ವಿಷಯಗಳನ್ನ ಇಟ್ಟುಕೊಂಡು ಅಶಾಂತಿ ನಿರ್ಮಾಣ ಮಾಡೋಕೆ ಬರಬೇಡಿ ಎಂದು ಹರಿಹಾಯ್ದರು. ಇದನ್ನೂ ಓದಿ: ಸಿ.ಟಿ ರವಿ ದ್ವೇಷ ಭಾಷಣ ಮಾಡಿದ್ದಕ್ಕೆ FIR ದಾಖಲು – ರಾಮಲಿಂಗಾರೆಡ್ಡಿ ಸಮರ್ಥನೆ
ಸಿ.ಟಿ ರವಿ ಮೇಲೆ ಎಫ್‌ಐಆರ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿ.ಟಿ ರವಿ ಮಂತ್ರಿ ಆಗಿದ್ದವರು. ಕಾಲು ಮುರಿಯುತ್ತೀವಿ, ಕೈ ಮುರಿತೀವಿ ಅಂದರೆ ಹೇಗೆ? ಸಿ.ಟಿ ರವಿ ಇನ್ನು ಕಲಿಯೋ ಹಾಗೇ ಕಾಣುತ್ತಿಲ್ಲ. ಕಾನೂನು ಇರೋದು ಕ್ರಮ ತೆಗೆದುಕೊಳ್ಳೋಕೆ. ಘಟನೆ ಆಗಿರೋದು ಸತ್ಯ, ಕ್ರಮ ಆಗಿದೆ. ಇದು ಪೂರ್ವ ನಿಯೋಜನೆನಾ ಅಲ್ಲವಾ ಎಂದು ತನಿಖೆ ಆಗಬೇಕು. ನಮ್ಮ ಹುಡುಗರ ಮೇಲೆ ಕ್ರಮ ಆಗಲಿ ಅಂತ ಆ ಸಮುದಾಯದವರು ಹೇಳಿದ್ದಾರೆ. ಬುಧವಾರ ಗಣೇಶ ವಿಸರ್ಜನೆಯಲ್ಲಿ ಎಲ್ಲರೂ ಸಹಕಾರ ಕೊಟ್ಟಿದ್ದಾರೆ. ಮಸೀದಿ ಮುಂದೆಯೇ ಹೋಗಿದ್ದಾರೆ ಎಂದರು. ಇದನ್ನೂ ಓದಿ: Forest Martyrs Day | ಹುತಾತ್ಮರಿಗೆ 50 ಲಕ್ಷ ರೂ. ಪರಿಹಾರ: ಈಶ್ವರ್ ಖಂಡ್ರೆ