ಚಂಡೀಗಢ: ಹರಿಯಾಣದ (Haryana) ಫರಿದಾಬಾದ್‌ನ (Faridabad) ಕಟ್ಟಡ ಒಂದರಲ್ಲಿ ಎಸಿಯ ಕಂಪ್ರೆಸರ್ ಸ್ಫೋಟಗೊಂಡು (AC Blast) ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಈ ಅವಘಡದಲ್ಲಿ ಅವರ ಸಾಕು ನಾಯಿ ಕೂಡ ಸಾವಿಗೀಡಾಗಿದೆ.
ಮೃತರನ್ನು ಸಚಿನ್ ಕಪೂರ್, ಅವರ ಪತ್ನಿ ರಿಂಕು ಕಪೂರ್ ಮತ್ತು ಅವರ ಮಗಳು ಸುಜನ್ ಕಪೂರ್ ಎಂದು ಗುರುತಿಸಲಾಗಿದೆ. ನಾಲ್ಕು ಅಂತಸ್ತಿನ ಕಟ್ಟಡದ ಮೊದಲ ಮಹಡಿಯಲ್ಲಿ ಸೋಮವಾರ (ಸೆ.8) ಬೆಳಗಿನ ಜಾವ 1:30ರ ಸುಮಾರಿಗೆ ಈ ಸ್ಫೋಟ ಸಂಭವಿಸಿದೆ. ಈ ವೇಳೆ, ಅವರು ವಾಸವಾಗಿದ್ದ ಎರಡನೇ ಮಹಡಿಯಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ಇದರಿಂದ ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬಳ್ಳಾರಿಯ ಜ್ಯುವೆಲ್ಲರಿ ಅಂಗಡಿಯಲ್ಲಿ ಎಸಿ ಸ್ಫೋಟ – ಮೂವರಿಗೆ ಗಂಭೀರ ಗಾಯ
ಮತ್ತೊಂದು ಕೋಣೆಯಲ್ಲಿ ಸಚಿನ್ ಅವರ ಮಗ ಬಚಾವ್ ಆಗಲು ಕಿಟಕಿಯಿಂದ ಹಾರಿದ್ದಾನೆ. ಆತ ಗಂಭೀರವಾಗಿ ಗಾಯಗೊಂಡಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ. ಸ್ಫೋಟದ ಶಬ್ಧಕ್ಕೆ ಅಕ್ಕಪಕ್ಕದ ಜನ ಎದ್ದು ಕಟ್ಟಡದಲ್ಲಿದ್ದ ಇತರರನ್ನು ರಕ್ಷಿಸಿದ್ದಾರೆ.
ಆ ಕಟ್ಟಡದ ನಾಲ್ಕನೇ ಮಹಡಿಯಲ್ಲಿ 7 ಜನ ವಾಸವಾಗಿದ್ದರು. ಇನ್ನೂ ಮೊದಲನೇ ಮಹಡಿಯನ್ನು ಸಚಿನ್ ಕಪೂರ್ ಕಚೇರಿಯಾಗಿ ಮಾಡಿಕೊಂಡಿದ್ದರು. ಅಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಕಾರ್ ಡ್ರೈವರ್‌ನ ಭೀಕರ ಕೊಲೆ – ಸ್ನೇಹಿತರಿಂದಲೇ ಹತ್ಯೆ ಶಂಕೆ