ನವದೆಹಲಿ: ಕಾಂಗ್ರೆಸ್‌ನವರಿಗೆ (Congress) ದೇಶದ ಚುನಾವಣೆ ಆಯೋಗದ ಮೇಲೆ ನಂಬಿಕೆ ಹೊರಟು ಹೋಗಿದೆ. ಮತಗಳ್ಳತನ (Vote Theft) ಆಗಿದ್ರೆ ಕರ್ನಾಟಕದಲ್ಲಿ 136 ಸೀಟ್ ಹೇಗೆ ಬಂತು? ಅವರು ಮೊದಲು ರಾಜೀನಾಮೆ ನೀಡಲಿ. ಬ್ಯಾಲೆಟ್ ಪೇಪರ್‌ನಿಂದ (Ballot Paper) ಚುನಾವಣೆ ನಡೆಸಿ ಅಧಿಕಾರಕ್ಕೆ ಬರಲಿ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರು ಗೆದ್ದಲ್ಲಿ ಚುನಾವಣಾ ಆಯೋಗ ಇವಿಎಂ (EVM) ಸರಿಯಿದೆ ಅಂತಾರೆ ಇಲ್ಲಾಂದ್ರೆ ಇಲ್ಲಾ. ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಹೆಸರು ಹಾಳು ಮಾಡುತ್ತಿದ್ದಾರೆ. ಇವಿಎಂ ಬೇಡ ಬ್ಯಾಲೆಟ್ ಬೇಕು ಅಂತಾರೆ. ಅಧಿಕಾರ ಸಿಗದಿದ್ದಕ್ಕೆ ಹತಾಶರಾಗಿ ಹೀಗೆ ಹೇಳುತ್ತಿದ್ದಾರೆ ಎಂದರು. ಇದನ್ನೂ ಓದಿ: 38 ಗಂಟೆಗಳ ಕಾಲ ನಡೆಯಿತು ಗಣೇಶ ವಿಸರ್ಜನೆ ಮೆರವಣಿಗೆ- ಬೆಳಗಾವಿಯಲ್ಲಿ ದಾಖಲೆ ನಿರ್ಮಾಣ
ನಾಳೆ ಚುನಾವಣೆ ಇದೆ. ಭಾನುವಾರ ಹಲವು ಹೊಸ ಸದಸ್ಯರಿಗೆ ವಿವಿಧ ರಾಜ್ಯಗಳ ಆಡಳಿತ ವ್ಯವಸ್ಥೆ ಕೆಲಸ ಕಾಮಗಾರಿ ಬಗ್ಗೆ ಅನುಭವ ಹಂಚಿಕೆ ಬಗ್ಗೆ ಕಾರ್ಯಾಗಾರ ಮಾಡಲಾಗಿದೆ. ಸಭೆ ಸಮಾರಂಭಗಳಲ್ಲಿ ಭಾಗಿಯಾಗುವ ಬಗ್ಗೆ, ಸ್ಥಳೀಯ ಸಂಸ್ಥೆಗಳ ಸಮಸ್ಯೆ ಬಗ್ಗೆ ಅರಿವು ಮೂಡಿಸಿದೆ. ನಡ್ಡಾ ಮೋದಿ ಯವರು ಮಾರ್ಗದರ್ಶನ ಮಾಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಮತಗಳ್ಳತನ ಮೂಲಕ ನನ್ನ ಸೋಲಿಸಲು ಸಂಚು ಮಾಡಲಾಗಿತ್ತು: ಬಿ.ಆರ್.ಪಾಟೀಲ್
ಮದ್ದೂರಿನಲ್ಲಿ ಲಾಠಿ ಚಾರ್ಜ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕರ್ನಾಟಕ ಅಂದರೆ ಜಾತಿ ಧರ್ಮದ ಹೆಸರಿನಲ್ಲಿ ಬಡಿದಾಡುವ ರಾಜ್ಯ ಅಲ್ಲ. ಪ್ರಾಚೀನ ಕಾಲದಿಂದಲೂ ಒಟ್ಟಾಗಿ ಬದುಕಿದ ರಾಜ್ಯ. ಶಾಂತಿ ಸೌಹಾರ್ದತೆಗೆ ಹೆಚ್ಚು ಮಹತ್ವ ನೀಡಬೇಕು. ಕರ್ನಾಟಕಕ್ಕೆ ಉತ್ತಮ ಹೆಸರು ಇದೆ. ಮುಸ್ಲಿಂ ಬಾಂಧವರು ಹಿಂದೂಗಳ ಹಲವು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದರು. ಹಿಂದೂಗಳು ಮುಸ್ಲಿಮರ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಕರ್ನಾಟಕ ಸೌಹಾರ್ದತೆಯ ರಾಜ್ಯ. ಧರ್ಮದ ಹೆಸರಿನಲ್ಲಿ ಹೀಗೆ ಮಾಡೋದು ತಪ್ಪು ಎಂದು ಕಿಡಿಕಾರಿದರು. ಇದನ್ನೂ ಓದಿ: ಮದ್ದೂರು ಘಟನೆ ನೋಡಿದ್ರೆ ರಾಜ್ಯದಲ್ಲಿ `ಮೊಘಲ್ ಪ್ರೇರಣೆಯ’ ಆಡಳಿತದಂತೆ ಭಾಸವಾಗುತ್ತಿದೆ – ಬಿವೈವಿ ಕಿಡಿ
ಆಲಮಟ್ಟಿ ಭಾಗದ ರೈತರಿಗೆ ಪರಿಹಾರ ವಿಚಾರವಾಗಿ ಮಾತನಾಡಿ, ಆಲಮಟ್ಟಿ ವಿಚಾರದಲ್ಲಿ ನಾವು ಪರಿಹಾರ ನೀಡಿದ್ದೆವು. ಭೂಮಿಯ ಮಾರುಕಟ್ಟೆ ಬೆಲೆ ಹೆಚ್ಚಿದೆ. ರೈತರಿಗೆ 50 ಲಕ್ಷ ರೂ. ಪರಿಹಾರ ನೀಡಬೇಕು. ರೈತರಿಗೆ ಅನುಕೂಲ ಮಾಡಬೇಕೆಂದು ಒತ್ತಾಯಿಸಿದರು. ಇದನ್ನೂ ಓದಿ: ನಾಳೆ ಮದ್ದೂರು ಸ್ವಯಂ ಪ್ರೇರಿತ ಬಂದ್‌ಗೆ ಕರೆ – ಹಿಂದೂ ಮುಖಂಡರ ತೀರ್ಮಾನ