ಲಕ್ನೋ: ಮುಂಬೈನಲ್ಲಿ (Mumbai) ಬಾಂಬ್ ಸ್ಫೋಟಿಸುವುದಾಗಿ (Bomb Blast) ಬೆದರಿಕೆ ಹಾಕಿದ್ದ ಆರೋಪಿಯನ್ನು ಮುಂಬೈ ಪೊಲೀಸರು (Mumbai Police) ನೋಯ್ಡಾದಲ್ಲಿ (Noida) ಬಂಧಿಸಿದ್ದಾರೆ.
ಬಿಹಾರ ಮೂಲದ ಅಶ್ವಿನ್ ಕುಮಾರ್ ಸುಪ್ರಾ (50) ಬಂಧಿತ ವ್ಯಕ್ತಿ. ಆರೋಪಿ ಅಶ್ವಿನ್ ಕುಮಾರ್ ನೋಯ್ಡಾದ ಮೊಬೈಲ್ ಫೋನ್ ಮತ್ತು ಸಿಮ್ ಕಾರ್ಡ್ ಬಳಸಿ ಬಾಂಬ್ ಬೆದರಿಕೆ ಹಾಕಿದ್ದಾನೆ. ತನಿಖೆಯ ಸಮಯದಲ್ಲಿ, ಬೆದರಿಕೆ ಹಾಕಲು ಬಳಸಲಾದ ಫೋನ್ ಮತ್ತು ಸಿಮ್ ಅನ್ನು ಸಹ ಅಪರಾಧ ವಿಭಾಗ ವಶಪಡಿಸಿಕೊಂಡಿದೆ. ಸದ್ಯ ಆರೋಪಿಯನ್ನು ಮುಂಬೈಗೆ ಕರೆದೊಯ್ಯಲಾಗುತ್ತಿದೆ. ಮುಂಬೈ ತಲುಪಿದ ಬಳಿಕ ಹೆಚ್ಚಿನ ವಿಚಾರಣೆ ನಡೆಯಲಿದೆ. ಇದನ್ನೂ ಓದಿ: 14 ಪಾಕಿಸ್ತಾನಿ ಉಗ್ರರು, 400 ಕೆಜಿ RDX, 34 ಮಾನವ ಬಾಂಬ್ ಸ್ಫೋಟ ನಡೆಯಲಿದೆ; ಮುಂಬೈಗೆ ಉಗ್ರ ಬೆದರಿಕೆ
ಪಾಕಿಸ್ತಾನ ಲಷ್ಕರ್-ಎ-ಜಿಹಾದಿ ಸಂಘಟನೆಯ 14 ಉಗ್ರರು ಭಾರತ ಪ್ರವೇಶಿಸಿದ್ದಾರೆ. 400 ಕೆಜಿ ಆರ್‌ಡಿಎಕ್ಸ್ ಸ್ಫೋಟಿಸಿ ಜನರನ್ನ ಕೊಲ್ಲಲಿದ್ದಾರೆ. ಅಲ್ಲದೇ ನಗರಾದ್ಯಂತ 34 ವಾಹನಗಳಲ್ಲಿ ಮಾನವ ಬಾಂಬ್ ಸ್ಫೋಟಿಸಲಾಗುವುದು ಎಂದು ಆರೋಪಿ ಅಶ್ವಿನ್ ಕುಮಾರ್ ಮುಂಬೈ ಸಂಚಾರ ಪೊಲೀಸ್ ಠಾಣೆಗೆ ಸಂದೇಶ ಕಳುಹಿಸಿದ್ದ.
ತನಿಖೆ ವೇಳೆ ಮೂರು ತಿಂಗಳು ಜೈಲಿಗೆ ಹೋಗಿದ್ದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಪ್ರತಿಕಾರ ತೀರಿಸಿಕೊಳ್ಳಲು ಆರೋಪಿ ಹೀಗೆ ಬೆದರಿಕೆ ಹಾಕಿದ್ದಾನೆ. ಅಶ್ವಿನ್ ಕುಮಾರ್ ಮುಂಬೈ ಸಂಚಾರ ಪೊಲೀಸರಿಗೆ ಫಿರೋಜ್ ಎಂಬ ಮುಸ್ಲಿಂ ವ್ಯಕ್ತಿಯಂತೆ ನಟಿಸಿ ಬಾಂಬ್ ಬೆದರಿಕೆ ಕಳುಹಿಸಿದ್ದಾನೆ. ಫಿರೋಜ್ ಹೆಸರಿನ ಸ್ನೇಹಿತನ ಹೊಂದಿದ್ದ ಅಶ್ವಿನ್ ಕುಮಾರ್, ಹಣಕಾಸಿನ ವಿಚಾರಕ್ಕೆ ಫಿರೋಜ್ ಜೊತೆಗೆ ಜಗಳವಾಗಿತ್ತು ಈ ಹಿನ್ನಲೆ ಪೊಲೀಸರು, ಸ್ನೇಹಿತನ ಮೇಲೆ ಪ್ರತಿಕಾರ ತೀರಿಸಿಕೊಳ್ಳಲು ಫಿರೋಜ್ ಹೆಸರಿನಲ್ಲಿ ಸಂದೇಶ ಕಳುಹಿಸಿದ್ದ ಎಂದು ಪೊಲೀಸ್ ಮೂಲಗಳು ಹೇಳಿವೆ. ಇದನ್ನೂ ಓದಿ: ಮದುವೆ ಆಗೋದಾಗಿ ನಂಬಿಸಿ ಅತ್ಯಾಚಾರ ಆರೋಪ – ಎಸ್‌ಎಎಫ್ ಪೊಲೀಸ್ ಕಾನ್‌ಸ್ಟೆಬಲ್ ಅರೆಸ್ಟ್