ಬೆಳಗಾವಿ: ಬಡವರಿಗೆ ಉಪಯೋಗವಾಗಲಿ ಅಂತ ಸರ್ಕಾರ ಕೊಟ್ಯಂತರ ರೂ. ಆಸ್ಪತ್ರೆಗಳ ಮೇಲೆ ಖರ್ಚು ಮಾಡ್ತಿದೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಅಲ್ಲಿನ ಆಡಳಿತ ಮಂಡಳಿ ಹೇಗೆ ಕೆಲಸ ಮಾಡ್ತಿದೆ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಬಿಮ್ಸ್‌ನಲ್ಲಿ (BIMS Hospital) 3 ತಿಂಗಳು ಖಾಸಗಿ ಕಾಲೇಜಿನ ವೈದ್ಯ ವಿದ್ಯಾರ್ಥಿನಿಯೊಬ್ಬಳು ಯಾರಿಗೂ ಅನುಮಾನ ಬರದಂತೆ ಕೆಲಸ ಮಾಡಿದ್ದಾಳೆ.
ಕಾರವಾರ (Karwar) ಮೂಲದ ಯುವತಿ ವೈದ್ಯರಿಗೆ ಗೊತ್ತಾಗದಂತೆ ಕಳೆದ ಮೂರು ತಿಂಗಳಿನಿಂದ ಇದೇ ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದಾಳೆ. ಇದಕ್ಕೆ ಯಾರು ಅವಕಾಶ ಕೊಟ್ರು? ಬರೊಬ್ಬರಿ ಈಕೆ ಮೂರು ತಿಂಗಳು ಕೆಲಸ ಮಾಡಿದ್ರೂ ಸಹ ಆಸ್ಪತ್ರೆ ವೈದ್ಯರಾಗಲಿ ಅಥವಾ ಆಡಳಿತ ಮಂಡಳಿಯಾಗಲಿ ಈಕೆ ಯಾರು ಎಲ್ಲಿಂದ ಬಂದಿದ್ದಾಳೆ, ಎಂದು ಪರಿಶೀಲನೆ ನಡೆಸದೆ ಅಸಡ್ಡೆ ತೋರಿಸಿದ್ದಾರೆ. ಬಡವರ ಆಸ್ಪತ್ರೆಗೆ ವೈಟ್ ಎಪ್ರಾನ್ ಹಾಕಿಕೊಂಡು ಬರೋರೆಲ್ಲ ವೈದ್ಯರಾಗಿ ಬಿಡಬಹುದು ಎಂದು ಜನ ಮಾತನಾಡಿಕೊಳ್ತಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶ | ನಕಲಿ ಐಎಎಸ್ ಅಧಿಕಾರಿ ಅರೆಸ್ಟ್ – ಐಷಾರಾಮಿ ಕಾರುಗಳು ಸೀಜ್
ವೈದ್ಯ ವಿದ್ಯಾರ್ಥಿನಿಗೆ ಆಸ್ಪತ್ರೆ ಸಿಬ್ಬಂದಿ ಹಲವು ಬಾರಿ ಪ್ರಶ್ನಿಸಲು ಮುಂದಾಗಿದ್ದರಂತೆ. ಆಗೆಲ್ಲ ಆಕೆ ಬಿಮ್ಸ್ ನಿರ್ದೇಶಕ ಅಶೋಕ್ ಶೆಟ್ಟಿಯವರ ಹೆಸರು ಹೇಳಿ ಹೆದರಿಸುತ್ತಿದ್ದಳಂತೆ. ಗುರುವಾರ (ಸೆ.4) ಚಿಕಿತ್ಸೆ ನೀಡುವಾಗಲೇ ಭದ್ರತಾ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಳು. ಈ ಮಾಹಿತಿಯನ್ನು ವೈದ್ಯರಿಗೆ ತಿಳಿಸಿದ್ದರು. ಬಳಿಕ ವಿಚಾರಿಸಿದಾಗ ಆಕೆಯೊಬ್ಬ ವಿದ್ಯಾರ್ಥಿನಿ ಎಂಬುದು ತಿಳಿದುಬಂದಿದೆ.
ಈ ಬಗ್ಗೆ ಬಿಮ್ಸ್ ನಿರ್ದೇಶಕ ಅಶೋಕ್ ಶೆಟ್ಟಿಯಾಗಲಿ, ಆಸ್ಪತ್ರೆಯ ಆರ್‌ಎಂಒ ಆಗಲಿ ಈವರೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯೇ ನೀಡಿಲ್ಲ. ಪ್ರತಿಕ್ರಿಯಿಸಿಸಲು ನಿರಾಕರಿಸಿದ್ದಾರೆ. ಈ ಕುರಿತು ಸಂಬಂಧಪಟ್ಟವರು ಮೇಲೆ ಕ್ರಮ ಆಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಸಂಬಂಧ `ಪಬ್ಲಿಕ್ ಟಿವಿ’ ವರದಿ ಬಳಿಕ ಆಡಳಿತ ಮಂಡಳಿ ಮೂವರ ಸಮಿತಿ ರಚಿಸಿ ತನಿಖೆಗೆ ಸೂಚಿಸಿದೆ. ಇದನ್ನೂ ಓದಿ: ಹೈದರಾಬಾದ್ | ಬೃಹತ್ ಮಾದಕ ವಸ್ತು ಜಾಲ ಪತ್ತೆ – ಬೆಂಗ್ಳೂರಲ್ಲಿ ಖರೀದಿಸಿ ಡೇಟಿಂಗ್ ಆ್ಯಪ್‌ನಲ್ಲಿ ಸೇಲ್ ಮಾಡ್ತಿದ್ದ ಆರೋಪಿ