– ಆರ್‌ಸಿಬಿಯ ಬೆಂಗಳೂರು ಪಂದ್ಯಗಳಿಗೆ ಅತಿ ಹೆಚ್ಚು ದರ
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(GST) ಸ್ಲ್ಯಾಬ್ ಪರಿಷ್ಕರಣೆ ಬೆನ್ನಲ್ಲೇ 2026ನೇ ಆವೃತ್ತಿಯ ಐಪಿಎಲ್ ಪಂದ್ಯಗಳ (IPL Match) ಟಿಕೆಟ್ ದರ ದುಬಾರಿಯಾಗಲಿದೆ.
ಇಲ್ಲಿಯವರೆಗೆ ಐಪಿಎಲ್ ಟಿಕೆಟ್‌ಗಳು 28% ರಷ್ಟು ತೆರಿಗೆ ಸ್ಲ್ಯಾಬ್ ಅಡಿಯಲ್ಲಿದ್ದವು. ಆದರೆ ಪರಿಷ್ಕರಣೆಯಾದ ಬಳಿಕ ಇವು 40% ರ ವಿಭಾಗದಲ್ಲಿ ಬರುವುದರಿಂದ ಟಿಕೆಟ್ ದರ (Ticket Price) ಏರಿಕೆಯಾಗಲಿದೆ.
ತಂಬಾಕು ಉತ್ಪನ್ನಗಳು ಹಾಗೂ ಕ್ಯಾಸಿನೊ, ರೇಸ್ ಕ್ಲಬ್‌ಗಳು ಮತ್ತು ಇತರ ಐಷಾರಾಮಿ ಖರ್ಚುಗಳಿಗೆ 40% ತೆರಿಗೆ ಹಾಕಲಾಗಿದೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಬೆಂಗಳೂರಿನ ಪಂದ್ಯದ ಟಿಕೆಟ್ ದರ ಭಾರೀ ಏರಿಕೆಯಾಗುವ ಸಾಧ್ಯತೆಯಿದೆ.
ಎಷ್ಟು ಏರಿಕೆಯಾಗಬಹುದು?
ಈ ಸೀಸನ್ ವರೆಗೆ 500 ರೂ. ಮೂಲ ಬೆಲೆ ಹೊಂದಿದ್ದ ಟಿಕೆಟ್ 28% ಜಿಎಸ್‌ಟಿ ಹಾಕಲಾಗುತ್ತಿತ್ತು. ಹೀಗಾಗಿ ಒಂದು ಟಿಕೆಟ್ ದರ 640 ರೂ. ಆಗುತ್ತಿತ್ತು. 2026 ರ ಆವೃತ್ತಿಯಲ್ಲಿ ಸರ್ಕಾರವು 40% ರಷ್ಟು ಜಿಎಸ್‌ಟಿ ವಿಧಿಸಿದ ನಂತರ ಅದೇ ಟಿಕೆಟ್ ದರ 700 ರೂ.ಗೆ ಏರಿಕೆಯಾಗಲಿದೆ. ಇದನ್ನೂ ಓದಿ: ಇನ್ಮುಂದೆ ಜಿಎಸ್‌ಟಿಯಲ್ಲಿ 2 ಸ್ಲ್ಯಾಬ್ – ಸೆ.22 ರಿಂದ ಜಾರಿ| ಯಾವ ವಸ್ತುಗಳ ಬೆಲೆ ಇಳಿಕೆ? ಯಾವುದು ಏರಿಕೆ? ಇಲ್ಲಿದೆ ಪಟ್ಟಿ
ಈ ವರ್ಷ ಆರ್‌ಸಿಬಿಯ ಬೆಂಗಳೂರು ಪಂದ್ಯದ ದುಬಾರಿ ಟಿಕೆಟ್ ಬೆಲೆ 42,350 ರೂ. ಇತ್ತು. ಈ ದರಕ್ಕೆ 40% ಜಿಎಸ್‌ಟಿ ಹಾಕಿದರೆ ಸುಮಾರು 4 ಸಾವಿರ ರೂ. ಏರಿಕೆ ಕಾಣಬಹುದು. ಚೆಪಾಕ್‌ನಲ್ಲಿ ಅತ್ಯಂತ ದುಬಾರಿ ಟಿಕೆಟ್ (7,000 ರೂ.) 7,656 ಕ್ಕೆ ಏರುವ ಸಾಧ್ಯತೆಯಿದೆ. ಆರ್‌ಸಿಬಿಯ ಬೆಂಗಳೂರು ಪಂದ್ಯದ ಕಡಿಮೆ ಬೆಲೆಯ ಟಿಕೆಟ್‌ಗೆ 2,300 ರೂ. ಇತ್ತು. ಇನ್ನು ಮುಂದೆ ಈ ದರ 2,515 ರೂ. ಆಗಬಹುದು.
ಐಪಿಎಲ್‌ನಲ್ಲಿ ಆರ್‌ಸಿಬಿ ಮತ್ತು ಚೆನ್ನೈ ತಂಡಕ್ಕೆ ಭಾರೀ ಅಭಿಮಾನಿಗಳಿದ್ದಾರೆ. ಬೇರೆ ತಂಡಗಳಿಗೆ ಹೋಲಿಸಿದರೆ ಈ ಎರಡು ತಂಡಗಳ ಟಿಕೆಟ್ ದರ ಜಾಸ್ತಿ ಇರುತ್ತದೆ. ಮನರಂಜನಾ ತೆರಿಗೆ ವಿಧಿಸುವುದರಿಂದ ಟಿಕೆಟ್ ದರ ಮತ್ತಷ್ಟು ಏರಿಕೆಯಾಗುತ್ತದೆ. ಆರ್‌ಸಿಬಿಯಲ್ಲಿ ವಿರಾಟ್ ಕೊಹ್ಲಿ ಸೇರಿದಂತೆ ಈ ಹಿಂದೆ ಹಲವು ಸ್ಟಾರ್ ಪ್ಲೇಯರ್‌ಗಳು ಹಿಂದೆ ಆಡಿದ್ದರಿಂದ ಬೆಲೆ ಜಾಸ್ತಿಯಿದೆ. ಆದರೆ ಬೆಂಗಳೂರು ಹೊರತುಪಡಿಸಿ ಬೇರೆ ಕಡೆ ನಡೆಯುವ ಆರ್‌ಸಿಬಿ ಪಂದ್ಯದ ಟಿಕೆಟ್ ದರ ಕಡಿಮೆ ಇರುತ್ತದೆ. ಇದನ್ನೂ ಓದಿ: ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣ – ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಶಿಖರ್ ಧವನ್‌ಗೆ ಇಡಿ ಸಮನ್ಸ್
ಟಿಕೆಟ್ ದರಗಳಿಗೆ ಸಂಬಂಧಿಸಿದಂತೆ ಐಪಿಎಲ್‌ನಲ್ಲಿ ಯಾವುದೇ ನಿಯಮಗಳು ಇಲ್ಲ. ಹೀಗಾಗಿ ಫ್ರಾಂಚೈಸಿಗಳು ಪಂದ್ಯದ ಟಿಕೆಟ್ ದರವನ್ನು ತಮಗೆ ಇಷ್ಟ ಬಂದಂತೆ ನಿಗದಿ ಮಾಡುತ್ತವೆ.
ಐಪಿಎಲ್ ಮಾತ್ರವಲ್ಲ, ಪ್ರೊ ಕಬಡ್ಡಿ ಲೀಗ್ ಮತ್ತು ಇಂಡಿಯನ್ ಸೂಪರ್ ಲೀಗ್ ಕೂಡ ಟಿಕೆಟ್ ಬೆಲೆಯಲ್ಲಿ ಹೆಚ್ಚಳವಾಗಬಹುದು. 500 ರೂ. ಗಿಂತ ಹೆಚ್ಚಿಲ್ಲದ ಮಾನ್ಯತೆ ಪಡೆದ ಕ್ರೀಡಾಕೂಟಗಳು ಸೇರಿದಂತೆ ಇತರ ಕ್ರೀಡಾಕೂಟಗಳಿಗೆ ಪ್ರವೇಶಕ್ಕೆ ವಿನಾಯಿತಿ ನೀಡಲಾಗಿದೆ. ಟಿಕೆಟ್ ದರ 500 ರೂ.ಗಿಂತ ಜಾಸ್ತಿ ಇದ್ದರೆ ಅದಕ್ಕೆ 18% ರ ಪ್ರಮಾಣಿತ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ.
ಈ ಬಾರಿ ಆರ್‌ಸಿಬಿ ಟಿಕೆಟ್ ದರ ಎಷ್ಟಿತ್ತು?
ಕೆಐಎ ವೈರ್ ಮತ್ತು ಕೇಬಲ್‌ಗಳು ಎ ಸ್ಟ್ಯಾಂಡ್: 2,300 ರೂ.
ಬೋಟ್ ಸಿ ಸ್ಟ್ಯಾಂಡ್ – 3,300
ಪೂಮಾ ಬಿ ಸ್ಟ್ಯಾಂಡ್ 3,300
ಟಿಕೆಟ್ ಜಿಟಿ ಅನೆಕ್ಸ್ – 4,000 ರೂ.
ಕತಾರ್ ಏರ್‌ವೇಸ್ ಜಾವಗಲ್ ಶ್ರೀನಾಥ್ ಸ್ಟ್ಯಾಂಡ್ – 10,000 ರೂ.
ಬಿರ್ಲಾ ಎಸ್ಟೇಟ್ ಬಿಎಸ್ ಚಂದ್ರಶೇಖರ್ ಸ್ಟ್ಯಾಂಡ್ – 15,000 ರೂ.