ಮೂರು ಬಾರಿ ಪ್ರತಿಷ್ಟಿತ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್ (Ricky Kej) ಅವರ ಸಂಗೀತ ನಿರ್ದೇಶನದ ಸಿನಿಮಾ ಅಧಿಕೃತವಾಗಿ ಆಸ್ಕರ್ ಪ್ರಶಸ್ತಿ ಅಂಗಳಕ್ಕೆ ಪ್ರವೇಶ ಪಡೆದಿದೆ. ಈ ಖುಷಿಯನ್ನ ಖುದ್ದು ರಿಕ್ಕಿ ಕೇಜ್ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
“ಪಾಪಾ ಬುಕಾ” ಇದು ಪಪುವಾ ನ್ಯೂಗಿನಿಯಾದ ಮೊದಲ ಅಧಿಕೃತ ಆಸ್ಕರ್ ಪ್ರವೇಶ ಪಡೆದ ಚಿತ್ರವಾಗಿದೆ. ಈ ಚಿತ್ರಕ್ಕೆ ರಿಕ್ಕಿ ಕೇಜ್ ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ. ಮೂರು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ಡಾ.ಬಿಜು ನಿರ್ದೇಶಿಸಿದ `ಪಾಪಾ ಬುಕಾ’ ಚಿತ್ರವು ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಆಸ್ಕರ್‌ಗೆ ಆಯ್ಕೆಯಾಗಿದೆ.ಇದನ್ನೂ ಓದಿ: ಸಿನಿಮಾ ಆಯ್ತು ವೈರಲ್ ಆಗಿದ್ದ `ಅಮೃತಾಂಜನ್’ ಶಾರ್ಟ್ ಫಿಲ್ಮ್
ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಭಾರತ ಹಾಗೂ ಪಪುವಾ ನ್ಯೂಗಿನಿಯಾ ಮಧ್ಯದ ತ್ಯಾಗ ಮತ್ತು ಮಾನವೀಯತೆಯನ್ನು ವೃದ್ಧ ಯೋಧ ಪಾಪಾ ಬುಕಾ ಎಂಬ ಹೆಸರಿನ ವ್ಯಕ್ತಿ ಹೇಳುವ ಕಥೆ ಇದಾಗಿದೆ. ಇಬ್ಬರು ಭಾರತೀಯ ಇತಿಹಾಸಕಾರರಿಗೆ ಪಾಪಾ ಬುಕಾ ಮಾರ್ಗದರ್ಶನ ನೀಡುವ ಕಥೆಯನ್ನು ಹೊಂದಿದೆ. ಹೀಗಾಗಿ ಇದು ಭಾರತಕ್ಕೂ ಕನೆಕ್ಟ್ ಆಗುತ್ತದೆ. ಹಿಂದಿ, ಇಂಗ್ಲೀಷ್‌ನಲ್ಲಿ ಚಿತ್ರ ತಯಾರಾಗಿದೆ.
ಕರ್ನಾಟಕದ ಮೂಲದ ರಿಕ್ಕಿ ಕೇಜ್ ತಮ್ಮ ಚಿತ್ರ ಅಧಿಕೃತವಾಗಿ ಆಸ್ಕರ್ ಪ್ರವೇಶ ಪಡೆದಿರುವ ವಿಚಾರ ಹಂಚಿಕೊಂಡು ಹೆಮ್ಮೆಪಟ್ಟಿದ್ದಾರೆ. “ಇದು ಆಸ್ಕರ್ ಸ್ಪರ್ಧೆಯಲ್ಲಿ ಮೊದಲ ಹೆಜ್ಜೆ, ಆದರೆ ನನಗೆ 3000 ವರ್ಷಗಳ ಹಿಂದಿನ ಇತಿಹಾಸದಲ್ಲಿ ಬೇರೂರಿರುವ ಸಂಗೀತವನ್ನು ರಚಿಸುವುದರಲ್ಲಿ ಸಂತೋಷವಿದೆ” ಎಂದು ತಮಗಾದ ಸಂತಸ ಹಂಚಿಕೊಂಡಿದ್ದಾರೆ ಪದ್ಮಶ್ರೀ ಪುರಸ್ಕೃತ ಸಂಗೀತ ನಿರ್ದೇಶಕ.ಇದನ್ನೂ ಓದಿ: ಹಿಂದಿ ಕಿರುತೆರೆ ನಟ ಆಶಿಶ್ ಕಪೂರ್ ಅತ್ಯಾಚಾರ ಪ್ರಕರಣದಲ್ಲಿ ಅರೆಸ್ಟ್