ಬೀಜಿಂಗ್: ಉತ್ತರ ಕೊರಿಯಾದ (North Korea) ನಾಯಕ ಕಿಮ್ ಜಾಂಗ್-ಉನ್ (Kim Jong Un) ಮತ್ತು ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ (Vladimir Putin) ಭೇಟಿ ಬಳಿಕ ಒಂದು ಅಸಹಜ ಬೆಳವಣಿಗೆಯೊಂದು ನಡೆದಿದೆ.
ಬೀಜಿಂಗ್‌ನಲ್ಲಿ ಪುಟಿನ್ ಜೊತೆಗಿನ ದ್ವಿಪಕ್ಷೀಯ ಸಭೆಯ ಬಳಿಕ ಕಿಮ್ ಜಾಂಗ್-ಉನ್ ಅವರ ಭದ್ರತಾ ತಂಡ ಇಡೀ ಪ್ರದೇಶವನ್ನು ಸ್ವಚ್ಛಗೊಳಿಸಿದೆ. ಕಿಮ್ ಕುಡಿದ ಟೀ ಕಪ್, ಕುಳಿತ ಕುರ್ಚಿ, ಸ್ಪರ್ಶಿಸಿದ ಎಲ್ಲಾ ವಸ್ತುಗಳನ್ನು ಸ್ವಚ್ಛಗೊಳಿಸಿದೆ. ಇದನ್ನೂ ಓದಿ: ದೀಪಾವಳಿಗೆ ದೇಶವಾಸಿಗಳಿಗೆ ಗಿಫ್ಟ್ – ಯಾವ ವಸ್ತುಗಳ ಬೆಲೆ ಇಳಿಕೆ? ಯಾವುದು ಏರಿಕೆ?
The staff accompanying the North Korean leader meticulously erased all traces of Kim’s presence.
They took the glass he drank from, wiped down the chair’s upholstery, and cleaned the parts of the furniture the Korean leader had touched. pic.twitter.com/JOXVxg04Ym
— Russian Market (@runews) September 3, 2025
ಯಾವ ಕಾರಣಕ್ಕೆ ಸಚ್ಛಗೊಳಿಸಲಾಗಿದೆ ಎನ್ನುವುದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಡಿಎನ್‌ಎ ಸಂಗ್ರಹಣೆಯನ್ನು ತಡೆಗಟ್ಟಲು ಮತ್ತು ಭದ್ರತೆಯನ್ನು ಖಚಿತಪಡಿಸಲು ಸ್ವಚ್ಛಗೊಳಿಸಿರಬಹುದು ಎನ್ನಲಾಗುತ್ತಿದೆ. ಈ ಮೂಲಕ ಮೂಲಕ ಗೂಢಾಚಾರಿ ಚಟುವಟಿಕೆಗಳನ್ನು ತಡೆಗಟ್ಟಲು ಸಾಧ್ಯವಾದ ಎಲ್ಲ ಕ್ರಮಗಳನ್ನು ತೆಗೆದುಕೊಂಡಿರುವ ಸಾಧ್ಯತೆಯಿದೆ. ಈ ಘಟನೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಅಮೆರಿಕ ಒತ್ತಡದ ನಡುವೆ ಭಾರತಕ್ಕೆ ರಷ್ಯಾ ಗಿಫ್ಟ್; ಇನ್ನಷ್ಟು S-400 ವಾಯು ರಕ್ಷಣಾ ವ್ಯವಸ್ಥೆ ಪೂರೈಕೆಗೆ ನಿರ್ಧಾರ
ಕಿಮ್ ಜಾಗ್ ಉನ್ ಮಾತ್ರವಲ್ಲ ಪುಟಿನ್ ಅವರು ವಿದೇಶ ಪ್ರವಾಸ ಕೈಗೊಂಡಾಗ ವರ ಅಂಗರಕ್ಷಕರು ಅವರ ಮೂತ್ರ ಮತ್ತು ಮಲವನ್ನು ಮುಚ್ಚಿದ ಚೀಲಗಳಲ್ಲಿ ಸಂಗ್ರಹಿಸಿ, ನಂತರ ಅವುಗಳನ್ನು ವಿಶೇಷ ಸೂಟ್‌ಕೇಸ್‌ಗಳಲ್ಲಿ ಮಾಸ್ಕೋಗೆ ತೆಗೆದುಕೊಂಡು ಹೋಗುತ್ತಾರೆ ಎಂದು ವರದಿಗಳು ಹೇಳುತ್ತವೆ. ರಷ್ಯಾದ ಅಧ್ಯಕ್ಷರ ಆರೋಗ್ಯದ ಬಗ್ಗೆ ವಿರೋಧಿಗಳು ಮತ್ತು ಗುಪ್ತಚರ ಮಾಹಿತಿಯನ್ನು ಸಂಗ್ರಹಿಸುವುದನ್ನು ತಡೆಯಲು 2017 ರಿಂದ ಈ ಪದ್ದತಿಯನ್ನು ಜಾರಿಗೊಳಿಸಲಾಗಿದೆ.