ನವದೆಹಲಿ: 232 ಕೋಟಿ ರೂ. ವಂಚನೆ ಪ್ರಕರಣದಲ್ಲಿ (Fraud Case) ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (Airport Authority) ಹಿರಿಯ ಮ್ಯಾನೇಜರ್ ರಾಹುಲ್ ವಿಜಯ್ ಅವರನ್ನು ಸಿಬಿಐ (CBI) ಬಂಧಿಸಿದೆ.
ರಾಹುಲ್ ವಿಜಯ್ ಸುಮಾರು 232 ಕೋಟಿ ರೂ. ಸರ್ಕಾರದ ಹಣವನ್ನು ನೇರವಾಗಿ ತನ್ನ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ನಂತರ ಆ ಹಣವನ್ನು ಬ್ಯುಸಿನೆಸ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ತನಿಖಾಧಿಕಾರಿಗಳು ಈ ಪ್ರಕರಣವನ್ನು ವರ್ಷದ ಅತಿದೊಡ್ಡ ಹಣಕಾಸು ಹಗರಣಗಳಲ್ಲಿ ಒಂದು ಎಂದು ಹೇಳಿದ್ದಾರೆ. ಇದನ್ನೂ ಓದಿ: Ramanagara | ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಮಾರಾಮಾರಿ – 23 ಮಂದಿಯ ವಿರುದ್ಧ ಎಫ್‌ಐಆರ್
2019 ಮತ್ತು 2023ರ ನಡುವೆ ಡೆಹ್ರಾಡೂನ್ ವಿಮಾನ ನಿಲ್ದಾಣದಲ್ಲಿ ವಿಜಯ್ ಅವರು ಕಾರ್ಯನಿರ್ವಹಿಸುತ್ತಿದ್ದಾಗ ನಡೆದ ಅಕ್ರಮಗಳ ಬಗ್ಗೆ ಎಎಐ ದೂರು ನೀಡಿತ್ತು. ಬಳಿಕ ತನಿಖೆ ಆರಂಭಿಸಲಾಗಿತ್ತು. ಅವರು ಡಿಜಿಟಲ್ ದಾಖಲೆಗಳನ್ನು ವ್ಯವಸ್ಥಿತವಾಗಿ ಚಾಣಾಕ್ಷತನದಿಂದ ನಿರ್ವಹಿಸಿದ್ದಾರೆ. ಬಿಲ್‌ಗಳನ್ನು ನಕಲು ಮಾಡುವುದು ಮತ್ತು ಆಕಸ್ಮಿಕವಾಗಿ ಹೆಚ್ಚುವರಿ ಸೊನ್ನೆಗಳನ್ನು ಸೇರಿಸುವ ಮೂಲಕ ಭಾರೀ ಅವ್ಯವಹಾರ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆ.28 ರಂದು ಜೈಪುರದಲ್ಲಿರುವ ವಿಜಯ್ ಅವರ ನಿವಾಸ ಮತ್ತು ಕಚೇರಿಯ ಮೇಲೆ ಸಿಬಿಐ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಇನ್ನೂ ಆರೋಪಿಯನ್ನು ಈಗ ಬಂಧಿಸಲಾಗಿದೆ. ತನಿಖೆ ಬಳಿಕ ಮತ್ತಷ್ಟು ವಿಚಾರಗಳು ತಿಳಿದುಬರಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ದಾವಣಗೆರೆ | ಕತ್ತು ಕೊಯ್ದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ – ಪತಿ ವಶಕ್ಕೆ