– ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಚಿನ್ನ ಗೆದ್ದರೆ 7 ಲಕ್ಷ ರೂ. ಬಹುಮಾನ
ಬೆಂಗಳೂರು: ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದವರಿಗೆ 5 ಕೋಟಿ ರೂ. ನೀಡಲಾಗುವುದು. ಬೆಳ್ಳಿ ಗೆದ್ದರೆ 3 ಕೋಟಿ ಹಾಗೂ ಕಂಚು ಗೆದ್ದವರಿಗೆ 2 ಕೋಟಿ ಹಣ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಘೋಷಿಸಿದರು.
ಉತ್ತರಾಖಂಡದಲ್ಲಿ 38 ರಾಷ್ಟ್ರೀಯ ಕ್ರೀಡಾಕೂಟ ನೆರವೇರಿತ್ತು. ಈ ಕ್ರೀಡಾಕೂಟದಲ್ಲಿ ನಮ್ಮ ರಾಜ್ಯ ಐದನೇ ಸ್ಥಾನ ಗಳಿಸಿದೆ. 34 ಚಿನ್ನ, 18 ಬೆಳ್ಳಿ, 28 ಕಂಚಿನ ಪದಕಗಳು ಬಂದಿವೆ. ರಾಜ್ಯದ ವತಿಯಿಂದ ಸಿಎಂ ಆಗಿ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ಕ್ರೀಡಾಕೂಟದಲ್ಲಿ ನಮ್ಮ ರಾಜ್ಯ ಒಂದನೇ ಸ್ಥಾನಕ್ಕೆ ಬರಲಿ ಎಂದು ಆಶಿಸಿದರು. ಇದನ್ನೂ ಓದಿ: ಡಿಕೆಶಿ ಗಾಂಧಿ ಕುಟುಂಬವನ್ನ ಖುಷಿಪಡಿಸಲು ಹಿಂದೂಗಳಿಗೆ ಅಪಮಾನ ಮಾಡಿದ್ದಾರೆ: ಬಿವೈವಿ ಟಾಂಗ್
2015 ರಲ್ಲಿ ಸಿಎಂ ಆಗಿದ್ದಾಗ ಚಿನ್ನ ಪದಕ ವಿಜೇತರಿಗೆ 5 ಲಕ್ಷ, ಬೆಳ್ಳಿ ವಿಜೇತರಿಗೆ 3 ಲಕ್ಷ, ಕಂಚು ಪದಕ ವಿಜೇತರಿಗೆ 2 ಲಕ್ಷ ರೂಪಾಯಿ ಕೊಡಲು ಘೋಷಿಸಿದ್ದೆ. ಮುಂದಿನ ಬಾರಿಯಿಂದ ಚಿನ್ನ ಗೆದ್ದವರಿಗೆ 7 ಲಕ್ಷ ರೂಪಾಯಿ ಕೊಡ್ತೇವೆ. ಬೆಳ್ಳಿ ಗೆದ್ದವರಿಗೆ 5 ಲಕ್ಷ ರೂಪಾಯಿ ಕೊಡ್ತೇವೆ. ಕಂಚು ಗೆದ್ದವರಿಗೆ 3 ಲಕ್ಷ ರೂಪಾಯಿ ಕೊಡ್ತೇವೆ ಎಂದು ತಿಳಿಸಿದರು.
ಪ್ರತಿ ಮೆಡಲಿಸ್ಟ್, ಕೋಚ್, ಮ್ಯಾನೇಜರ್‌ಗೂ ನಗದು ಬಹುಮಾನ ಕೊಡ್ತೇನೆ. ಕ್ರೀಡಾ ಇಲಾಖೆ ಏನು ಕೇಳಿದ್ರೂ ಕೊಟ್ಟಿದ್ದೇನೆ. ಮುಂದೆಯೂ ಕೊಡ್ತೇನೆ. ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಜೊತೆಗೆ ಓದಲೂ ಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಚಾಮುಂಡೇಶ್ವರಿ ದೇವಸ್ಥಾನ ಎಲ್ಲರ ಆಸ್ತಿ ಅನ್ನೋದು ಸರಿ ಅಲ್ಲ, ಡಿಕೆಶಿ ಕ್ಷಮೆ ಕೇಳ್ಬೇಕು: ಆರ್.ಅಶೋಕ್
ಒಲಂಪಿಕ್ಸ್‌ನಲ್ಲಿ ಭಾಗವಹಿಸುವವರಿಗೆ ಟ್ರೇನಿಂಗ್ ಕೊಡ್ತೇವೆ. 60 ಕ್ರೀಡಾಪಟುಗಳಿಗೆ ತರಬೇತಿಗಾಗಿ 10 ಲಕ್ಷ ರೂಪಾಯಿ ಕೊಡ್ತೇವೆ. ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದವರಿಗೆ ಐದು ಕೋಟಿ, ಬೆಳ್ಳಿ ಗೆದ್ದರೆ ಮೂರು ಕೋಟಿ, ಕಂಚು ಗೆದ್ದರೆ ಎರಡು ಕೋಟಿ ಕೊಡ್ತೇವೆ. ಕ್ರೀಡಾಪಟುಗಳಿಗೆ ನೇರವಾಗಿ ಅವರ ಅಕೌಂಟ್‌ಗೆ ವರ್ಗಾವಣೆ ಮಾಡ್ತೇವೆ. ಗೆದ್ದ ಖುಷಿ ಮುಂದೆ ಯಾವುದೂ ಇಲ್ಲ. ನಾನು ಇವತ್ತಿನ ವರೆಗೂ ಕ್ರೀಡಾಪಟುಗಳಿಗೆ ಏನು ಕೇಳಿದ್ರೂ ಕೊಟ್ಟಿದ್ದೇನೆ. ಮುಂದೆಯೂ ಕೊಡ್ತೀನಿ ಎಂದು ತಿಳಿಸಿದರು.