– ಭಾರತ-ಪಾಕ್ ಮತ್ತೆ ಟೆಸ್ಟ್ ಸರಣಿ ಆರಂಭಿಸಲಿ
ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನ (India – Pakistan) ನಡುವಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲುವ ಫೆವರೆಟ್ ಆಗಿದೆ. ಆದ್ರೆ ಆ ಸಂರ್ಭದಲ್ಲಿ ಯಾರು ಒತ್ತಡವನ್ನು ನಿಭಾಯಿಸಬಲ್ಲದೋ ಆ ತಂಡ ವಿಜಯಶಾಲಿಯಾಗಲಿದೆ ಎಂದು ಪಾಕಿಸ್ತಾನದ ತಂಡದ ಕ್ರಿಕೆಟ್ ಕೋಚ್ ವಾಸಿಮ್ ಅಕ್ರಮ್ (Wasim Akram) ಹೇಳಿದ್ದಾರೆ.
ಬಹುನಿರೀಕ್ಷಿತ ಏಷ್ಯಾಕಪ್ (Asia Cup 2025) ಟೂರ್ನಿ ಸೆಪ್ಟೆಂಬರ್ 9 ರಿಂದ ಪ್ರಾರಂಭವಾಗಲಿದ್ದು, ಸೆ.10 ರಂದು ಭಾರತ ತನ್ನ ಮೊದಲ ಪಂದ್ಯವನ್ನಾಡಲಿದೆ. ಹೈವೋಲ್ಟೇಜ್ ಪಂದ್ಯವಾದ ಇಂಡೋ ಪಾಕ್ ಕದನ ಸೆ.14ರಂದು ನಡೆಯಲಿದ್ದು, ಈ ಕುರಿತು ವಾಸಿಂ ಅಕ್ರಮ್ ಮಾತನಾಡಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಸರಣಿ ಆಡಲ್ಲ: ಸಚಿವ ಮನ್ಸುಖ್ ಮಾಂಡವಿಯಾ
ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿ, ಪ್ರಸಕ್ತ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ರೋಮಾಂಚನಕಾರಿಯಾಗಿ ಇರಲಿದೆ. ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಲಿದೆ ಅನ್ನಿಸುತ್ತೆ ಎಂದಿದ್ದಾರೆ. ಇದನ್ನೂ ಓದಿ: ಕೊಹ್ಲಿಯಿಂದ ಫೋಟೋಗೆ ಲೈಕ್ ಗಿಟ್ಟಿಸಿಕೊಂಡ ಹಾಲ್ಗೆನ್ನೆ ಬ್ಯೂಟಿಯ ಫಸ್ಟ್ ರಿಯಾಕ್ಷನ್
ಭಾರತ-ಪಾಕ್ ಪಂದ್ಯ ಇತರ ಎಲ್ಲಾ ಪಂದ್ಯಗಳಂತಲ್ಲ, ಅತ್ಯಂತ ರೋಮಾಂಚನಕಾರಿಯಾಗಿರುತ್ತೆ, ಹೆಚ್ಚು ಮನರಂಜನೆಯನ್ನೂ ನೀಡುತ್ತೆ. ಈ ಪಂದ್ಯದಲ್ಲಿ ಆಟಗಾರರು ಕ್ರೀಡಾ ಮನೋಭಾವ ತೋರಿಸಬೇಕು. ಜೊತೆಗೆ ಅಭಿಮಾನಿಗಳು ಶಿಸ್ತಿನಿಂದ ವರ್ತಿಸಬೇಕು ಎಂದರಲ್ಲದೇ, ಇತ್ತೀಚೆಗೆ ಭಾರತ ತಂಡ ಉತ್ತಮ ಫಾರ್ಮ್‌ನಲ್ಲಿದೆ, ಗೆಲ್ಲುವ ಫೇವರೆಟ್ ಕೂಡ ಆಗಿದೆ. ಆದ್ರೆ ಪಂದ್ಯದ ದಿನದಂದು ಒತ್ತಡವನ್ನು ನಿಭಾಯಿಸಿದ ತಂಡವು ಗೆಲ್ಲಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಐಪಿಎಲ್‌ಗೆ ಗುಡ್‌ಬೈ ಹೇಳಿದ ಅಶ್ವಿನ್
ಮತ್ತೆ ಟೆಸ್ಟ್ ಸರಣಿ ಆಡಲಿ
ಮುಂದುವರಿದು ಮಾತನಾಡಿದ ವಾಸಿಮ್, ಟಿ20 ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಮೂರು ಪಂದ್ಯಗಳಲ್ಲಿ ಎದುರಾಗುವ ಸಾಧ್ಯತೆಯಿದೆ. ಇದು ವಿಶ್ವದಾದ್ಯಂತ ಇರುವ ಅಭಿಮಾನಿಗಳಿಗೆ ಹಬ್ಬವಾಗಲಿದೆ. ಇದಲ್ಲದೇ ಉಭತ ತಂಡಗಳು ಮತ್ತೆ ಟೆಸ್ಟ್ ಸರಣಿಯನ್ನು ಪುನರಾರಂಭಿಸಲಿ ಅನ್ನೋದು ನನ್ನ ಆಶಯ.