ಕಳೆದ ಕೆಲವು ವರ್ಷಗಳಿಂದ ಗಣೇಶೋತ್ಸವಕ್ಕೆ ಮಣ್ಣಿನ ಗಣಪತಿಯನ್ನೇ ಪೂಜಿಸುತ್ತಾರೆ. ಅದರಲ್ಲೂ ಕೆಲವರು ಪಿಒಪಿ ಬಳಸಿ ಬಳಸಿ ತಯಾರಿಸಿರುವ ಗಣೇಶನನ್ನು ಪೂಜಿಸುತ್ತಾರೆ. ಆದರೆ ಇತ್ತೀಚಿನ ಕೆಲವು ದಿನಗಳಲ್ಲಿ ಮಣ್ಣಿನ ಗಣಪತಿಯನ್ನೇ ಪೂಜಿಸಬೇಕೆಂದು ಕಡ್ಡಾಯ ಸೂಚನೆಯೂ ಇದೆ.
ಅದರಂತೆ ಬಾಲ್ಯದಲ್ಲಿ ಗಣೇಶನ ಮೂರ್ತಿಯನ್ನು ಮಣ್ಣಿನಲ್ಲಿ ತಯಾರಿಸುವುದೆಂದರೆ ಒಂದು ಖುಷಿ. ಆದರೆ ಈಗ ಮಣ್ಣಿನ ಗಣೇಶನ್ ವಿಗ್ರಹವನ್ನು ದುಡ್ಡು ಕೊಟ್ಟು ತಂದು ನಾವೆಲ್ಲ ಪೂಜಿಸುತ್ತಿದ್ದೇವೆ. ತಪ್ಪೇನಿಲ್ಲ ಆದರೆ ಎಲ್ಲರಲ್ಲಿಯೂ ಒಂದು ಕಲೆ ಇರುತ್ತದೆ. ಅದಕ್ಕೆ ಈ ಬಾರಿ ಗಣೇಶೋತ್ಸವಕ್ಕೆ ನಿಮ್ಮ ಕೈಯಿಂದಲೇ ಗಣೇಶ ವಿಗ್ರಹವನ್ನು ಮಾಡಿ, ಪೂಜಿಸಿ ಮಾಡೋದು ಸುಲಭವೇನಲ್ಲ, ಆದರೆ ಪ್ರಯತ್ನ ಪಡಬಹುದು. ಅದಕ್ಕೆ ಇಲ್ಲಿ ಸರಳವಾಗಿ, ಸುಲಭವಾಗಿ ಗಣಪತಿ ವಿಗ್ರಹವನ್ನು ತಯಾರಿಸುವ ವಿಧಾನವನ್ನು ತಿಳಿಸಿಕೊಡಲಾಗುತ್ತಿದೆ.
ನಿಮ್ಮ ಅಗತ್ಯಕ್ಕೆ ಅನುಸಾರವಾಗಿ ಗಣೇಶನ ಮೂರ್ತಿಯ ಅಳತೆಯನ್ನು ನಿರ್ಧರಿಸಿಕೊಳ್ಳಿ. ಇಲ್ಲಿ ಚಿಕ್ಕ ಗಣೇಶನ ಮೂರ್ತಿಯನ್ನು ಮಾಡುವ ವಿಧಾನವನ್ನು ವಿವರಿಸಲಾಗಿದೆ.
ಮೊದಲಿಗೆ ಗಣೇಶನ ವಿಗ್ರಹವನ್ನು ತಯಾರಿಸಲು ಮಣ್ಣನ್ನು ತೆಗೆದುಕೊಳ್ಳಿ, ನೀರು ಹಾಗೂ ಒಂದು ರಟ್ಟಿನ ಬೋರ್ಡ್ ಅನ್ನು ತೆಗೆದುಕೊಳ್ಳಿ. ಮೂರ್ತಿ ಮಾಡುವ ಹದಕ್ಕೆ ತಕ್ಕಂತೆ ಮಣ್ಣನ್ನು ಚೆನ್ನಾಗಿ ಕಲಸಿಕೊಳ್ಳಿ.
– ಪ್ರಾರಂಭದಲ್ಲಿ ಗಣೇಶನ ಕೆಳಗಡೆ ಆಧಾರಕ್ಕಾಗಿ ವೃತ್ತಾಕಾರದ ಒಂದು ಅಗಲವಾದ ತಟ್ಟೆಯ ರೀತಿಯಲ್ಲಿ ತಯಾರಿಸಿಕೊಳ್ಳಿ.
– ಅದರ ಮೇಲೆ ಚಿತ್ರದಲ್ಲಿ ತೋರಿಸಿರುವಂತೆ ಮಾಡಿಕೊಂಡು ತಯಾರಿಸಿದ ತಟ್ಟೆಯ ಮೇಲೆ ನಿಲ್ಲಿಸಿ. (ಚೂಪಾಕಾರದ ಕಂಬ ಎನ್ನಬಹುದು)
– ಉದ್ದದ ಕೊಳವೆಯ ರೀತಿಯಲ್ಲಿ ಸೊಂಡಿಲಿನ ಆಕಾರಕ್ಕೆ ಬರುವಂತೆ ತಯಾರಿಸಿ. ಅದನ್ನು ಸೂಪರದ ಕಂಬಕ್ಕೆ ಮಧ್ಯಭಾಗದಲ್ಲಿ ಅಂಟಿಸಿಕೊಳ್ಳಿ. ನಂತರ ಸ್ವಲ್ಪ ಮಣ್ಣನ್ನು ತೆಗೆದುಕೊಂಡು ಕಿವಿಯ ರೀತಿಯಲ್ಲಿ ತಯಾರಿಸಿ ಎರಡು ಬದಿಗೆ ಅಂಟಿಸಿಕೊಳ್ಳಿ. ಚಿತ್ರದಲ್ಲಿ ತೋರಿಸಿರುವಂತೆ ಮೂರ್ತಿಯನ್ನು ಸರಿಪಡಿಸಿಕೊಳ್ಳಿ.
– ನಂತರ ಚಿಕ್ಕ ಚಿಕ್ಕ 4 ಕಡಲೆಕಾಳಿನಂತೆ ಅಥವಾ ಅದೇ ಆಕಾರದಲ್ಲಿ ದೊಡ್ಡ ಗಾತ್ರದಲ್ಲಿ ನಾಲ್ಕು ಬೇರೆಬೇರೆ ಭಾಗಗಳನ್ನು ತಯಾರಿಸಿ. ಅದನ್ನು ಚಿತ್ರದಲ್ಲಿ ತೋರಿಸುವಂತೆ ಅಂಟಿಸಿಕೊಳ್ಳಿ.
– ಕೊನೆಗೆ ಟೂತ್ ಪಿಕ್ ನಿಂದ ಕಣ್ಣು, ಹುಬ್ಬು ಹಾಗೂ ಗಂಧವನ್ನು ಬರೆದುಕೊಳ್ಳಿ.
ಇದೇ ರೀತಿ ಹಂತಗಳನ್ನು ಪಾಲಿಸಿ ನೀವು ವಿಭಿನ್ನ ರೀತಿಯಲ್ಲಿ ದೊಡ್ಡ ಗಣೇಶನ ವಿಗ್ರಹವನ್ನು ತಯಾರಿಸಬಹುದು. ಇದು ನಿಮಗ ಸ್ವಂತ ಕೈಯಿಂದಲೂ ತಯಾರಾಗಿರುತ್ತದೆ ಹಾಗೂ ಅಂಗಡಿ ಇಂದ ಖರೀದಿಸಿ ತಂದ ಗಣೇಶನ ವಿಗ್ರಹಕ್ಕೂ ವಿಭಿನ್ನವಾಗಿರುತ್ತದೆ. ಎಲ್ಲದಕ್ಕೂ ಮಿಗಿಲಾಗಿ ನಿಮ್ಮ ಪ್ರೀತಿ, ಭಕ್ತಿ ಭಾವದಿಂದ ಈ ಬಾರಿಯ ಗಣೇಶೋತ್ಸವ ಸಂಭ್ರಮದಲ್ಲಿರುತ್ತದೆ.