ಅವನೀತ್ ಕೌರ್.. (Avneet Kaur) ಈಕೆ ಹೇಳಿಕೊಳ್ಳುವಂಥಹ ಹಿಟ್ ಸಿನಿಮಾ ಕೊಟ್ಟ ನಟಿಯಲ್ಲ. ಆದರೆ ಡಾನ್ಸ್ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಗಳಿಸಿರುವ ಪಂಜಾಬ್ ಬ್ಯೂಟಿ. ಹಾಲ್ಗೆನ್ನೆಯ ಈ ಚೆಲುವೆ ರಾತ್ರೋರಾತ್ರಿ ಹೆಡ್‌ಲೈನ್ಸ್ ಸುದ್ದಿ ಆಗ್ತಾರೆ. ಕಾರಣ ಈಕೆಯ ಇನ್‌ಸ್ಟಾ ಫೋಟೋಗೆ ವಿರಾಟ್ ಕೊಹ್ಲಿ (Virat Kohli) ಅಫಿಷಿಯಲ್ ಐಡಿಯಿಂದ ಲೈಕ್ ಬಂದಿರುತ್ತೆ.
ಸಿಕ್ಕಾಪಟ್ಟೆ ಟ್ರೋಲ್ ಆದ ಬಳಿಕ ವಿರಾಟ್ ಪ್ರತಿಕ್ರಿಯಿಸಿ, ಇದು ಅವರ ಇನ್‌ಸ್ಟಾಗ್ರಾಂ ಹ್ಯಾಂಡಲ್ ಮಾಡುವ ವ್ಯಕ್ತಿಯ ಆಕ್ಸಿಡೆಂಟಲ್ ಕರಾಮತ್ ಅನ್ನೋದಾಗಿ ಸ್ಪಷ್ಟಪಡಿದ್ರು. ಆದರೆ ಈ ಆಕ್ಸಿಡೆಂಟ್ ಪ್ರಕ್ರಿಯೆಯ ಲಾಭ ಪಡೆದುಕೊಂಡಿದ್ದ ನಟಿ ಅವನೀತ್ ಕೌರ್. 4 ತಿಂಗಳ ಹಿಂದೆ ನಡೆದ ಆ ಘಟನೆ ಬಗ್ಗೆ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ. ಇದನ್ನೂ ಓದಿ:ಮದರಾಸಿ ಟ್ರೈಲರ್ ರಿಲೀಸ್ – ಮಾಸ್ ಲುಕ್‌ನಲ್ಲಿ ಶಿವಕಾರ್ತಿಕೇಯನ್
ತನ್ನ ಮುಂದಿನ ಚಿತ್ರ `ಲವ್ ಇನ್ ವಿಯೆಟ್ನಾಂʼ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದಾರೆ. ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡ ನಿಮ್ಮ ಫೋಟೋಗೆ ಲೈಕ್ ಕೊಡ್ತಾರಲ್ಲ ಎಂಬ ಪ್ರಶ್ನೆಗೆ ನಾಚಿಕೆಯಿಂದಲೇ, ಮಿಲ್ತಾ ರಹೇ ಪ್ಯಾರ್, ಬಸ್. ಔರ್ ಕ್ಯಾ ಬೋಲೂ ಮೈʼ(ಪ್ರೀತಿ ಸಿಗ್ತಾನೆ ಇರುತ್ತೆ, ಇನ್ನೇನು ಹೇಳಲಿ) ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ:ಮಂಗಳಾಪುರಂ ಚಿತ್ರಕ್ಕೆ ಬಿಗ್ ಬಾಸ್ ಖ್ಯಾತಿಯ ಗೌತಮಿ ನಾಯಕಿ
ಒಟ್ನಲ್ಲಿ ಎಲ್ಲರಿಗೂ ಒಂದ್ ಟೈಂ ಬರುತ್ತೆ ಅಂತಾರಲ್ಲ ಹಾಗೆ ಅವನೀತ್ ಕೌರ್‌ಗೆ ಲಕ್ ಬಂದಿದೆ. ಆದರೆ ವಿರಾಟ್ ಕೊಹ್ಲಿ ಇನ್‌ಸ್ಟಾ ಮ್ಯಾನೇಜರ್ ಮಾಡಿರುವ ಎಡವಟ್ಟಿನಿಂದ ಕೊಹ್ಲಿ ಮೇಲೆ ಅನುಮಾನ ಪಡುವಂತಾಯ್ತು. ಅನುಮಾನದ ಬೆಂಕಿಯಲ್ಲಿ ಲಾಭ ಪಡೆದುಕೊಂಡಿದ್ದು ಮಾತ್ರ ಈ ಮಾದಕ ನಟಿ ಅವನೀತ್ ಕೌರ್.