ಶಿವಮೊಗ್ಗ: ನಗರದ (Shivamogga) ಮೆಗ್ಗಾನ್ ಆಸ್ಪತ್ರೆ ಹೆರಿಗೆ ವಾರ್ಡ್ ( McGann Hospital) ಶೌಚಾಲಯ ಕೊಠಡಿಯಲ್ಲಿ, ನವಜಾತ ಗಂಡು ಶಿಶುವಿನ ಕತ್ತು ಸೀಳಿ ಕೊಲೆ ಮಾಡಿದ್ದ ತಾಯಿಯನ್ನು (Mother) ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತಳನ್ನು ದಾವಣಗೆರೆಯ (Davanagere) ಹೊನ್ನಾಳಿ ತಾಲೂಕಿನ ತಿಮ್ಲಾಪುರದ ಶೈಲಾ ಎಂದು ಗುರುತಿಸಲಾಗಿದೆ. ಆ.16 ರಂದು ಮೆಗ್ಗಾನ್ ಆಸ್ಪತ್ರೆ ಹೆರಿಗೆ ವಾರ್ಡ್‌ನ ಶೌಚಾಲಯದಲ್ಲಿ ಕತ್ತು ಸೀಳಿ ಹತ್ಯೆ ಮಾಡಿದ್ದ ಸ್ಥಿತಿಯಲ್ಲಿ ನವಜಾತ ಗಂಡು ಶಿಶುವಿನ ಶವ ಪತ್ತೆಯಾಗಿತ್ತು. ಆಸ್ಪತ್ರೆ ಸಿಬ್ಬಂದಿ ಹೆರಿಗೆ ವಾರ್ಡ್‌ನಲ್ಲಿ ದಾಖಲಾಗಿದ್ದ ಮಹಿಳೆಯರು ಹಾಗೂ ಶಿಶುಗಳ ವಿವರ ಕಲೆ ಹಾಕಿದ್ದರು. ಹೆರಿಗೆಯಾದ ಎಲ್ಲಾ ಶಿಶುಗಳು ವಾರ್ಡ್ ನಲ್ಲಿರುವುದು ಕಂಡುಬಂದಿತ್ತು. ಅದೇ ದಿನ ಮನೆಯಲ್ಲಿ ಅಬಾರ್ಷನ್ ಆಗಿದೆ ಹಾಗೂ ಹೊಟ್ಟೆ ನೋವೆಂದು ಹೇಳಿ, ಹೆರಿಗೆ ವಾರ್ಡ್‌ನಲ್ಲಿ ದಾಖಲಾಗಿದ್ದ ಶೈಲಾ ಬಳಿಯೂ ಆಸ್ಪತ್ರೆ ಸಿಬ್ಬಂದಿ ವಿಚಾರಿಸಿದ್ದರು. ಆದರೆ ಶಿಶು ತನ್ನದಲ್ಲವೆಂದು ನಿರಾಕರಿಸಿದ್ದಳು. ಇದನ್ನೂ ಓದಿ: ಹೇಮಾವತಿ ನದಿಗೆ ಬಿದ್ದ ಕಾರು – ಇಬ್ಬರ ಶವ ಪತ್ತೆ, ಮತ್ತಿಬ್ಬರು ಕೊಚ್ಚಿ ಹೋಗಿರೋ ಶಂಕೆ
ಈ ಕುರಿತಂತೆ ಆಸ್ಪತ್ರೆ ಆಡಳಿತ ಮಂಡಳಿಯು, ದೊಡ್ಡಪೇಟೆ ಠಾಣೆಯಲ್ಲಿ ದೂರು ನೀಡಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಶೈಲಾ ಮೇಲೆಯೇ ಅನುಮಾನ ವ್ಯಕ್ತಪಡಿಸಿ ಆಕೆಯ ಚಲನವಲನದ ಮೇಲೆ ನಿಗಾವಹಿಸಿದ್ದರು. ಆಕೆ ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆ, ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದರು. ಈ ವೇಳೆ ಶೌಚಾಲಯದಲ್ಲಿ ಪತ್ತೆಯಾದ ಶಿಶು ತನ್ನದಾಗಿದ್ದು, ತಾನೇ ಕೊಲೆ ಮಾಡಿರುವ ಸಂಗತಿ ಬಾಯ್ಬಿಟ್ಟಿದ್ದಳು.
ಕೊಲೆಗೆ ಕಾರಣವೇನು?
ಈಗಾಗಲೇ ಶೈಲಾಗೆ ಇಬ್ಬರು ಮಕ್ಕಳಿದ್ದಾರೆ. ಮತ್ತೊಂದೆಡೆ, 4 ವರ್ಷಗಳ ಹಿಂದೆ ಸಂತಾನಹರಣ ಚಿಕಿತ್ಸೆಯೂ ಆಗಿತ್ತು. ಇದರ ನಡುವೆ ಆಕೆ ಗರ್ಭಿಣಿಯಾಗಿದ್ದಳು. ಇದನ್ನು ಕುಟುಂಬದವರಿಂದ ಆಕೆ ಮುಚ್ಚಿಟ್ಟಿದ್ದಳು. ಆ.16 ರಂದು ತನಗೆ ಮನೆಯಲ್ಲಿ ತನಗೆ ಅಬಾರ್ಷನ್ ಆಗಿದೆ ಹಾಗೂ ಹೊಟ್ಟೆ ನೋವೆಂದು ಹೇಳಿ, ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಳು. ಈ ವೇಳೆ ಕೊಲೆ ಮಾಡಿದ ಶಿಶುವವನ್ನು ಶೌಚಾಲಯದಲ್ಲಿ ಹಾಕಿದ್ದಳು ಎಂದು ಹೇಳಲಾಗುತ್ತಿದೆ.
ಕೆಲವು ಮೂಲಗಳ ಪ್ರಕಾರ, ಹೆರಿಗೆ ವಾರ್ಡ್‌ನಲ್ಲಿ ದಾಖಲಾಗಿದ್ದ ಮಹಿಳೆಯೋರ್ವರನ್ನು ನೋಡಲು ಆಗಮಿಸಿದ ವೇಳೆ ಆಕೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಶೌಚಾಲಯಕ್ಕೆ ತೆರಳಿದ ವೇಳೆ ನಾರ್ಮಲ್ ಹೆರಿಗೆಯಾಗಿದೆ. ಅಲ್ಲಿಯೇ ಶಸ್ತ್ರಚಿಕಿತ್ಸೆಗೆ ಬಳಸುವ ಬ್ಲೇಡ್ ನಿಂದ ಮಗುವಿನ ಕತ್ತು ಸೀಳಿ ಕೊಲೆ ಮಾಡಿದ್ದಳು ಎನ್ನಲಾಗುತ್ತಿದೆ. ಇದನ್ನೂ ಓದಿ: ಪ್ರೀತ್ಸೆ ಪ್ರೀತ್ಸೆ ಎಂದು ವಿದ್ಯಾರ್ಥಿನಿಯ ಹಿಂದೆ ಬಿದ್ದು, ಕೊಲೆ ಬೆದರಿಕೆ – ಪಾಗಲ್ ಪ್ರೇಮಿ ಅರೆಸ್ಟ್