– 19 ಗಂಟೆ ವಿಚಾರಣೆ ಬಳಿಕ ತಿಮರೋಡಿ, ಮಟ್ಟಣ್ಣನವರ್ ಹೆಸರು ಕಕ್ಕಿದ ಚಿನ್ನಯ್ಯ
– 12 ದಿನ, 17 ಪಾಯಿಂಟ್, 25 ಗುಂಡಿ, 52 ದಿನಗಳ ಬಳಿಕ ಮುಖವಾಡ ಕಳಚಿದ ಮಾಸ್ಕ್ ಮ್ಯಾನ್
ಮಂಗಳೂರು: ಅನಾಮಿಕನ ಪಾಪ ಪ್ರಜ್ಞೆಯ ಆಟಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. 12 ದಿನ, 260 ಸಿಬ್ಬಂದಿ, 17 ಪಾಯಿಂಟ್, 25 ಗುಂಡಿ, 52 ದಿನಗಳ ಬಳಿಕ ವಿಶೇಷ ತನಿಖಾ ತಂಡ ಮಾಸ್ಕ್ ಮ್ಯಾನ್‌ನ ಮುಖವಾಡ ಕಳಚಿದೆ. ಬಳಿಕ 10 ದಿನಗಳ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿರುವ ಎಸ್‌ಐಟಿ (SIT) ಮತ್ತೊಂದು ಸ್ಫೋಟಕ ವಿಚಾರ ಬಯಲಾಗಿದೆ.
ಆರೋಪಿ ಚಿನ್ನಯ್ಯ, ಆರಂಭದಲ್ಲಿ 2 ಲಕ್ಷ ರೂ. ಹಣ ಪಡೆದು ಡ್ರಾಮಾ ಶುರು ಮಾಡಿದ್ದ. 2023 ಡಿಸೆಂಬರ್‌ನಲ್ಲಿ ಗ್ಯಾಂಗ್ ಒಂದು ಚಿನ್ನಯ್ಯನನ್ನ ಸಂಪರ್ಕ ಮಾಡಿತ್ತು. ಈ ವೇಳೆ ಅಕ್ರಮವಾಗಿ ಶವಗಳನ್ನ ಹೂತಿಟ್ಟಿರುವ ಬಗ್ಗೆ ತಪ್ಪು ಒಪ್ಪಿಗೆ ಕೊಡುವಂತೆ ಆ ಗ್ಯಾಂಗ್‌ನೊಂದಿಗೆ ಚಿನ್ನಯ್ಯ ಡೀಲ್ ಮಾಡಿಕೊಂಡಿದ್ದ. ಇದನ್ನೂ ಓದಿ: ದೆಹಲಿಗೂ ಬುರುಡೆ ಕೊಂಡೊಯ್ದಿದ್ದ ಚಿನ್ನಯ್ಯ & ಗ್ಯಾಂಗ್ – ಮಹಾ ರಹಸ್ಯ ಸ್ಫೋಟ
ಇದೀಗ ಅಪಪ್ರಚಾರ ಮಾಡುವ ಗ್ಯಾಂಗ್‌ನಲ್ಲಿ ಯಾರಿದ್ರು ಅನ್ನೋದರ ಬಗ್ಗೆ ವಿಚಾರಣೆ ವೇಳೆ ಚಿನ್ನಯ್ಯ (Chinnayya) ಬಾಯ್ಚಿಟ್ಟಿದ್ದಾನೆ. ಈ ವೇಳೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಹೆಸರನ್ನು ಚಿನ್ನಯ್ಯ ಕಕ್ಕಿದ್ದಾನೆ. ಇದನ್ನೂ ಓದಿ: ಸಮೀರ್‌ನ ಸುಳ್ಳಿನ ಕಂತೆ ಬಯಲು – ಇಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ʻದೂತʼನ ವಿಚಾರಣೆ
19 ಗಂಟೆಗಳ ವಿಚಾರಣೆಯಲ್ಲಿ ಕೆಲವು ಸ್ಫೋಟಕ ವಿಷಯಗಳನ್ನ ಆರೋಪಿ ಚಿನ್ನಯ್ಯ ಬಾಯಿಬಿಟ್ಟಿದ್ದು, ಸೂತ್ರಧಾರಿಗಳ ಪಾತ್ರದ ಬಗ್ಗೆ ಎಸ್‌ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ. ಇಂದು ಕೂಡ ಎಸ್‌ಐಟಿ ಅಧಿಕಾರಿಗಳು ಆರೋಪಿ ಚಿನ್ನಯ್ಯನ ವಿಚಾರಣೆಯನ್ನು ಮುಂದುವರೆಸಿದ್ದು, ವಿಚಾರಣೆ ವೇಳೆ ಮತ್ತಷ್ಟು ಸತ್ಯ ಹೊರ ಬೀಳಲಿದೆ.
FSL ವರದಿಯಿಂದ ಬುರುಡೆ ಬಂಡವಾಳ ಬಯಲು
ಈ ಬುರುಡೆಯನ್ನು ಇಟ್ಟುಕೊಂಡು ನ್ಯಾಯಾಲಯದಿಂದ ಸಾಕ್ಷಿ ಸಂರಕ್ಷಣಾ ಕಾಯ್ದೆಯಡಿ ಭದ್ರತೆ ಪಡೆದುಕೊಂಡಿದ್ದ. ಹೀಗಾಗಿ ಎಸ್‌ಐಟಿ (SIT) ಸಹ ಆತ ಹೇಳಿದಂತೆ ಕೇಳುತ್ತಿತ್ತು. ಆತ ಹೇಳಿದ್ದ 17 ಜಾಗಗಳಲ್ಲಿ ಗುಂಡಿ ತೋಡಿದ ಬಳಿಕ ಮೂಲ ಬುರುಡೆಯ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಪ್ರಶ್ನೆ ಮಾಡಿದ್ದರು. ಈ ವೇಳೆ ಆತ ಒಂದೊಂದು ಜಾಗದ ಹೆಸರನ್ನು ಹೇಳಿದ್ದ. ಒಮ್ಮೆ ಬೋಳಿಯಾರ್ ಮತ್ತೊಮ್ಮೆ ಕಲ್ಲೇರಿ ಇನ್ನೊಮ್ಮೆ ಇನ್ಯಾವುದೋ ಜಾಗವನ್ನು ಹೇಳಿದ್ದ. ಇದನ್ನೂ ಓದಿ: ಅನನ್ಯಾ ಭಟ್ ನಾಪತ್ತೆ ಪ್ರಕರಣ – ಎಸ್‌ಐಟಿ 2ನೇ ನೋಟಿಸ್‌ಗೂ ಉತ್ತರಿಸದ ಸುಜಾತ ಭಟ್
ಈ ಮಧ್ಯೆ ಬುರುಡೆಯಲ್ಲಿದ್ದ ಮಣ್ಣು ಧರ್ಮಸ್ಥಳ (Dharmasthala) ಪರಿಸರದ್ದೇ ಅಲ್ಲ ಎನ್ನುವುದು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ದೃಢಪಟ್ಟಿತ್ತು. ಇದು ಪಕ್ಕಾ ಆಗುತ್ತಿದ್ದಂತೆ ಪೊಲೀಸರು ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಆತ ಬೇರೆ ಜಾಗದಿಂದ ಈ ಬುರುಡೆ ತಂದಿದ್ದೇನೆ. ಬೇರೆಯವರು ಹೇಳಿದಂತೆ ನಾನು ಈ ಪ್ರಕರಣಕ್ಕೆ ಬಂದಿದ್ದೇನೆ ಎಂದು ಬಾಯಿಬಿಟ್ಟಿದ್ದ.