ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ-1 ಚಿತ್ರ ಇದೇ ಅಕ್ಟೋಬರ್ 2 ರಂದು ಜಗತ್ತಿನಾದ್ಯಂತ ತೆರೆ ಕಾಣಲಿದೆ. ಮೊದಲ ಭಾಗವು ದಾಖಲೆ ಹಿಟ್ ಕಂಡ ಬಳಿಕ ಬರ್ತಿರುವ ಎರಡನೇ ಭಾಗಕ್ಕೆ ಭಾರೀ ನಿರೀಕ್ಷೆ ಇದೆ. ಇಂಥಹ ಬಹು ನಿರೀಕ್ಷೆಯ ಪರಿಣಾಮ ಹಂಚಿಕೆ ಹಕ್ಕಿಗೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿದ್ದು ಇದೀಗ ಆಂಧ್ರಪ್ರದೇಶದಲ್ಲಿ ಹಂಚಿಕೆಯ ಹಕ್ಕು ದಾಖಲೆ ಬೆಲೆಗೆ ಸೇಲ್ ಆಗಿದೆ. ಭರ್ತಿ 100 ಕೋಟಿ ರೂ.ಗೆ ಕಾಂತಾರ-1 ಚಿತ್ರದ ಹಂಚಿಕೆ ಹಕ್ಕನ್ನ ಪಡೆದಿದೆ ಆಂಧ್ರಪ್ರದೇಶ.
ಕಾಂತಾರ 1 ಆಂಧ್ರ ಹಂಚಿಕೆ ಪಟ್ಟಿ
ನಿಜಾಮ್ ಪ್ರದೇಶ- 40 ಕೋಟಿ ರೂ.
ಕೋಸ್ಟಲ್ ಆಂಧ್ರ- 45 ಕೋಟಿ ರೂ.
ರಾಯಲ್ ಸೀಮೆ- 15 ಕೋಟಿ ರೂ.
ಹೀಗೆ ಆಂಧ್ರಪ್ರದೇಶವೊಂದರಲ್ಲೇ ಕಾಂತಾರ ಚಿತ್ರ 100 ಕೋಟಿ ರೂ.ಗೆ ಹಂಚಿಕೆಯಾಗಿರೋದು ಬಹಳ ವಿಶೇಷ. ಕನ್ನಡ ಚಿತ್ರವೊಂದಕ್ಕೆ ಮೊದಲ ಭಾರಿ ಆಂಧ್ರದಿಂದ ಈ ಪ್ರಮಾಣ ಬೇಡಿಕೆ ವ್ಯಕ್ತವಾಗಿರೋದು ಎಂದು ಊಹಿಸಲಾಗುತ್ತಿದೆ. ಇನ್ನೂ ತೆಲಂಗಾಣದಲ್ಲಿ ಹಂಚಿಕೆ ಬಾಕಿ ಇದೆ. ಯಾವ ಮಟ್ಟಕ್ಕೆ ಬೇಡಿಕೆ ಬರಬಹುದು ಅನ್ನೋ ಕುತೂಹಲ ಹೆಚ್ಚಾಗಿದೆ. ಇನ್ನುಳಿದಂತೆ ಕನ್ನಡದಲ್ಲಿ ಹೊಂಬಾಳೆ ಸಂಸ್ಥೆಯೇ ಹಂಚಿಕೆ ಮಾಡಲಿದೆ. ಹಿಂದಿ, ಮಲಯಾಳಂ, ತಮಿಳು ಭಾಷೆಯ ಹಂಚಿಕೆ ಹಕ್ಕು ಕ್ರಮೇಣ ದಾಖಲೆ ಬೆಲೆಗೆ ಸೇಲ್ ಆಗಲಿರುವ ಸೂಚನೆ ಕಂಡುಬರುತ್ತಿದೆ. ಈ ಮೂಲಕ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅಕ್ಷರಶಃ ಮ್ಯಾಜಿಕ್ ಕ್ರಿಯೇಟ್ ಮಾಡಿದ್ದಾರೆ. ಇದನ್ನೂ ಓದಿ: ಹೊಂಬಾಳೆ ಫಿಲಮ್ಸ್‌ನ ‘ಕಾಂತಾರ ಚಾಪ್ಟರ್ 1’ ನಲ್ಲಿ ಕುಲಶೇಖರನ ಪಾತ್ರದಲ್ಲಿ ಗುಲ್ಶನ್ ದೇವಯ್ಯ