– ಮಹಿಳೆಯರ ಮೂಗುತಿ, ಸರಗಳ್ಳತನ ಮಾಡ್ತಿದ್ದ ಮಾಸ್ಕ್ ಮ್ಯಾನ್
ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನ ಹೂತಿಟ್ಟ ಪ್ರಕರಣ (Dharmasthala Case) ಇನ್ನೇನು ತಾರ್ಕಿಕ ಅಂತ್ಯಕ್ಕೆ ಬರುತ್ತಿದೆ. ತೀವ್ರ ವಿಚಾರಣೆ ಬಳಿಕ ಮುಸುಕುಧಾರಿಯನ್ನು ಬಂಧಿಸಿರುವ ವಿಶೇಷ ತನಿಖಾ ತಂಡ (SIT) ಆತನ ಹೆಸರು, ಊರು, ಹಿನ್ನೆಲೆಯನ್ನು ಬಹಿರಂಗಪಡಿಸಿದೆ.
ಹೌದು. ನೂರಾರು ಶವಗಳನ್ನು ತಾನೇ ಹೂತಿರುವುದಾಗಿ ಮತ್ತು ಹೂಳುವಾಗ ಶವಗಳು ಕೊಲೆ ಮತ್ತು ಅತ್ಯಾಚಾರ ಮಾಡಿದ್ದ ಸ್ಥಿತಿಯಲ್ಲಿರುತ್ತಿದ್ದವು ಎಂಬುದಾಗಿ ಬುರುಡೆ ಬಿಟ್ಟಿದ್ದ ಮಾಸ್ಕ್ ಮ್ಯಾನ್ (Mask Man) ಮುಖವಾಡವನ್ನು ಎಸ್‌ಐಟಿ ಅಧಿಕಾರಿಗಳು ಕಳಚಿದ್ದಾರೆ. ಈತನ ಹಿನ್ನೆಲೆಯನ್ನೂ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ನಾನು ಪಾತ್ರಧಾರಿ ಮಾತ್ರ, ಸೂತ್ರಧಾರಿಗಳು ಬೇರೆನೇ ಇದ್ದಾರೆ: ಮಾಸ್ಕ್ ಮ್ಯಾನ್ ಸ್ಫೋಟಕ ಹೇಳಿಕೆ
ದೂರುದಾರ ಮೂಲತಃ ಮಂಡ್ಯ (Mandya) ಜಿಲ್ಲೆಯವನಾಗಿದ್ದು, ಸಿ.ಎನ್ ಚಿನ್ನಯ್ಯ ಅಲಿಯಾಸ್ ಚಿನ್ನಪ್ಪ ಅಲಿಯಾಸ್ ಚಿನ್ನಯ್ಯ ಅಲಿಯಾಸ್ ಚೆನ್ನಯ್ಯ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಮುಸುಕುಧಾರಿಗೆ ಈ ಹೆಸರು ಬರೋದಕ್ಕೂ ಒಂದು ಕಾರಣ ಇದೆ. ಈತ ನದಿಯಲ್ಲಿ ಮುಳುಗಿದ ಹೆಣಗಳಿಂದ ಚಿನ್ನ ಕದಿಯುತ್ತಿದ್ದನಂತೆ, ಮಹಿಳೆಯರ ಮೂಗುತಿ, ಕಿವಿಯೋಲೆ, ಸರಗಳನ್ನೂ ಕದಿಯುತ್ತಿದ್ದನಂತೆ. ಈ ಕಾರಣದಿಂದಾಗಿಗೇ ಚಿನ್ನಪ್ಪ, ಚಿನ್ನಯ್ಯ ಎಂದು ಕರೆಯುತ್ತಿದ್ದರಂತೆ. ಇದನ್ನೂ ಓದಿ: ಸೌಜನ್ಯ ತಾಯಿ ಷಡ್ಯಂತ್ರಕ್ಕೆ ಬಲಿಯಾಗಿರುವ ಸಾಧ್ಯತೆಯಿದೆ, ಅವರನ್ನು ವಿಚಾರಣೆ ಒಳಪಡಿಸಬೇಕು: ಸೂಲಿಬೆಲೆ
ಸದ್ಯ ಮಾಸ್ಕ್ ಮ್ಯಾನನ್ನ ಬಂಧಿಸಿರುವ ಎಸ್‌ಐಟಿ ಪೊಲೀಸರು ಮೆಡಿಕಲ್ ಟೆಸ್ಟ್‌ಗಾಗಿ ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ಕರೆತಂದಿದ್ದಾರೆ. ವೈದ್ಯಕೀಯ ಪರೀಕ್ಷೆ ಮುಗಿದ ಬಳಿಕ ಆತನನ್ನ ನ್ಯಾಯಾಧೀಶರ ಎದುರು ಹಾಜರುಪಡಿಸಿ, ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ. ಇದನ್ನೂ ಓದಿ: Dharmasthala Case | ಎಸ್‌ಐಟಿಯಿಂದ ಮಾಸ್ಕ್ ಮ್ಯಾನ್ ಚಿನ್ನಯ್ಯ ಅರೆಸ್ಟ್