– ಮದ್ಯಪಾನ ಮಾಡಿ ಬಸ್ ಚಾಲನೆ, ಟಿಕೆಟ್ ಕೇಸ್, ಮಾರಣಾಂತಿಕ ಅಪಘಾತ ಮಾಡಿದ್ರೂ ಸಸ್ಪೆಂಡ್
ಬೆಂಗಳೂರು: ಬಿಎಂಟಿಸಿ (BMTC Bus) ಬಸ್‌ಗಳಿಂದ ಆಗುತ್ತಿರುವ ಅಪಘಾತಗಳನ್ನು ತಪ್ಪಿಸಲು ಹೊಸ ನಿಯಮಗಳನ್ನು ರೂಪಿಸಲಾಗಿದೆ.
ಬಿಎಂಟಿಸಿ ಎಂಡಿ ರಾಮಚಂದ್ರನ್ ಅವರು ಎಲ್ಲಾ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಸಂಚಾರ ನಿಯಂತ್ರಣಾಧಿಕಾರಿಗಳು, ಡಿಪೋ ಮ್ಯಾನೇಜರ್, ಡಿಸಿ ಸೇರಿದಂತೆ ಎಲ್ಲಾ ಅಧಿಕಾರಿಗಳು ಭಾಗಿಯಾಗಿದ್ದರು. ಇದನ್ನೂ ಓದಿ: ಬಿಎಂಟಿಸಿಗೆ ಮತ್ತೊಂದು ಬಲಿ – ಬಸ್ ಹರಿದು 10 ವರ್ಷದ ಬಾಲಕಿ ಸಾವು
ಕರ್ತವ್ಯನಿರತ ಬಿಎಂಟಿಸಿ ಡ್ರೈವರ್ ಮೊಬೈಲ್‌ನಲ್ಲಿ ಮಾತನಾಡಿದರೆ, ಅಂತಹವರ ಮೇಲೆ ಕಠಿಣ ಕ್ರಮಕೈಗೊಳ್ಳಲಾಗುವುದು. ಚಾಲಕರನ್ನು 15 ದಿನ ಅಮಾನತು ಮಾಡಲಾಗುವುದು. ಚಾಲಕನ ಮೊಬೈಲ್ ವಶಪಡಿಸಿಕೊಳ್ಳಲಾಗುವುದು. ಅಲ್ಲದೇ, ಮತ್ತೊಂದು ಘಟಕಕ್ಕೆ ಡ್ರೈವರ್ ಟ್ರಾನ್ಸ್‌ಫರ್ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಮದ್ಯಪಾನ ಮಾಡಿ ಬಸ್ ಚಲಾಯಿಸಿದರೆ, ಟಿಕೆಟ್ ಕೇಸ್‌ನಲ್ಲಿ ತಗಲಾಕಿಕೊಂಡರೆ ಹಾಗೂ ಮಾರಣಾಂತಿಕ ಅಪಘಾತ ಮಾಡಿದರೆ ಅಮಾನತು ಮಾಡಲಾಗುವುದು ಎಂದು ಎಚ್ಚರಿಸಲಾಗಿದೆ. ಇದನ್ನೂ ಓದಿ: ಬಿಎಂಟಿಸಿ ಬಸ್ಸು ಹತ್ತುವ ವೇಳೆ ಬಾಗಿಲು ಬಂದ್- ಚಕ್ರಕ್ಕೆ ಸಿಲುಕಿ ಪ್ರಯಾಣಿಕ ಸಾವು
ಬಿಎಂಟಿಸಿಯಿಂದ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಧ್ಯಮ ಪ್ರಕಟಣೆ ಜಾರಿ ಮಾಡಲಾಯಿತು. ಆಗಸ್ಟ್ ತಿಂಗಳಲ್ಲಿ ಒಟ್ಟು 4 (1 ವಿದ್ಯುತ್‌ಚಾಲಿತ ಬಸ್ಸಿನ ಅಪಘಾತ ಒಳಗೊಂಡಂತೆ) ಮಾರಣಾಂತಿಕ ಅಪಘಾತಗಳು ಸಂಭವಿಸಿವೆ. 3 ಅಪಘಾತಗಳಲ್ಲಿ ಸಂಸ್ಥೆಯ ಚಾಲಕರು ಹೊಣೆಯಿರುವುದಿಲ್ಲ. 1 ಅಪಘಾತದಲ್ಲಿ ವಿದ್ಯುತ್‌ಚಾಲಿತ ಬಸ್ಸಿನ ಚಾಲಕ ಹಾಗೂ ಪ್ರಯಾಣಿಕರ ತಪ್ಪು ಎಂದು ಕಂಡುಬಂದಿದೆ. ವಾಹನ ಸವಾರರು ಬಸ್ಸನ್ನು ಹಿಂದಿಕ್ಕುವ ಸಲುವಾಗಿ ಅಥವಾ ಅನ್ಯ ಕಾರಣಗಳಿಂದ, ನಿಯಂತ್ರಣ ಕಳೆದುಕೊಂಡು ಬಸ್ಸಿನ ಹಿಂಬದಿಯ ಚಕ್ರಗಳಿಗೆ ಬಿದ್ದಾಗ, ಬಸ್ಸಿನ ನಿಯಂತ್ರಣ ಚಾಲಕರಿಗೆ ಕಷ್ಟಸಾಧ್ಯವಾಗಿರುತ್ತದೆ ಎಂದು ಗಮನಿಸಲಾಗಿದೆ.
ಬಿಎಂಟಿಸಿ ಅಪಘಾತಗಳನ್ನು ನಿಯಂತ್ರಿಸಲು ಹಲವು ಕ್ರಮಗಳನ್ನು ನಿಗಮ ಕೈಗೊಂಡಿದೆ. ಅಪಘಾತಗಳು ಆಗದಂತೆ ತಡೆಯಲು ಪ್ರತಿದಿನ ಡಿಪೋ ಮ್ಯಾನೇಜರ್‌ಗಳು ಸಿಬ್ಬಂದಿಗೆ ಮೀಟಿಂಗ್ ಮಾಡಬೇಕು. ಪ್ರತಿದಿನ ಬಸ್ ತೆಗೆಯುವ ಮೊದಲು ಎಲ್ಲಾ ಸಿಬ್ಬಂದಿಗೆ ಸೇಫ್ ಡ್ರೈವಿಂಗ್ ಬಗ್ಗೆ ತಿಳುವಳಿಕೆ ನೀಡುವುದು. ಬರುವ ವಾರದಿಂದ ಸಂಚಾರ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಎಲ್ಲಾ ಬಿಎಂಟಿಸಿ ಚಾಲಕರಿಗೆ ಮತ್ತೆ ಟ್ರೇನಿಂಗ್ ನೀಡಲಾಗುವುದು. ಬಿಎಂಟಿಸಿಯಲ್ಲಿ ಒಟ್ಟು 11,835 ಚಾಲಕರಿಗೆ ತರಬೇತಿ ನೀಡಲಾಗಿದೆ. ಬಿಎಂಟಿಸಿಯ ಕಾಂಟ್ರ್ಯಾಕ್ಟ್ ಡ್ರೈವರ್‌ಗಳು/ಎಲೆಕ್ಟ್ರಿಕ್ ಬಸ್ ಚಾಲಕರು ಸಹ ತರಬೇತಿಗೆ ನಿಯೋಜಿಸಲಾಗುವುದು. ಈಗಾಗಲೇ 1,187 ಚಾಲಕರಿಗೆ ಪೊಲೀಸ್ ಟ್ರಾಫಿಕ್ ಕಮಾಂಡ್ ಸೆಂಟರ್ನಲ್ಲಿ ತರಬೇತಿ ನೀಡಲಾಗಿದೆ. ಅಘಾತಗಳಿಂದಾಗುವ ಪರಿಣಾಮಗಳ ಕುರಿತು ಘಟಕಗಳಲ್ಲಿ ‘ಬದುಕು ಬದುಕಿಸು’ ಹಾಗೂ ಬಸ್ ನಿಲ್ದಾಣಗಳಲ್ಲಿ ‘ಬಸ್ ಬಂತು ಬಸ್’ ಬೀದಿ ನಾಟಕಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಲಾಗಿದೆ.
ಬಿಎಂಟಿಸಿ ಚಾಲಕರ ಒತ್ತಡರಹಿತ ಚಾಲನೆಗಾಗಿ (AVLS ಆಧಾರಿತ) ರಿಯಲ್ ರನ್ನಿಂಗ್ ಟೈಮ್ ಮೇಲೆ ಚಾಲನಾ ಸಮಯವನ್ನು ಪರಿಷ್ಕರಣೆ ಮಾಡಲಾಗುವುದು. ಈಗಾಗಲೇ 2,000 ಅನುಸೂಚಿಗಳಲ್ಲಿ ರನ್ನಿಂಗ್ ಟೈಮ್ ಅನ್ನು ಹೆಚ್ಚಿಸಿ, ಸುತ್ತುವಳಿ ಸಂಖ್ಯೆ ಕಡಿತ ಮಾಡಲಾಗುವುದು. ಬಿಎಂಟಿಸಿ ಬಸ್ ತಲುಪುವ ಸಮಯ ವಿಸ್ತರಣೆ ಮಾಡಲಾಗುವುದು. ಅಪರಾಧರಹಿತ ಚಾಲಕರನ್ನು ಪ್ರೋತ್ಸಾಹಿಸಲು ಮುಖ್ಯಮಂತ್ರಿಗಳ ಚಿನ್ನದ ಪದಕ ಮತ್ತು ಬೆಳ್ಳಿ ಪದಕಗಳನ್ನು ನೀಡಿ ಗೌರವಿಸಲಾಗುವುದು. ಇದನ್ನೂ ಓದಿ: ಬ್ರೇಕ್ ಫೇಲ್ ಆಗಿ ರಸ್ತೆಬದಿ ಕಂದಕಕ್ಕೆ ನುಗ್ಗಿದ ಬಿಎಂಟಿಸಿ ಬಸ್
40 ವರ್ಷ ಮೇಲ್ಪಟ್ಟ ಎಲ್ಲಾ ಬಿಎಂಟಿಸಿ ಚಾಲಕರಿಗೂ ಜಯದೇವದಲ್ಲಿ ತಪಾಸಣೆ ನಡೆಸಲಾಗುವುದು. ಕೆಲ ಚಾಲಕರಿಗೆ ಯೋಗ ತರಬೇತಿ ನೀಡಲಾಗುವುದು. ಪ್ರತಿನಿತ್ಯ 50 ಡಿಪೋಗಳಲ್ಲಿ ಒಂದು ತಿಂಗಳವರೆಗೆ ಮೂರು ಬಾರಿ ಸೇಫ್ ಡ್ರೈವಿಂಗ್ ಬಗ್ಗೆ ಸಿಬ್ಬಂದಿಗೆ ತಿಳುವಳಿಕೆ ನೀಡಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.