– ಕೃಷ್ಣಾ ನದಿಗೆ 2.52 ಲಕ್ಷ ಕ್ಯೂಸೆಕ್ ಒಳ ಹರಿವು
ಚಿಕ್ಕೋಡಿ: ಮಹಾರಾಷ್ಟ್ರ (Maharashtra) ಘಟ್ಟ ಪ್ರದೇಶದಲ್ಲಿನ ಮಳೆಯ ಅಬ್ಬರ ಹಾಗೂ ಮಹಾರಾಷ್ಟ್ರ ಜಲಾಶಯಗಳಿಂದ ಬರುತ್ತಿರುವ ಭಾರೀ ಪ್ರಮಾಣದ ನೀರಿನಿಂದ ಕೃಷ್ಣಾ ನದಿ (Krishna River Water) ನೀರಿನ ಒಳ ಹರಿವಿನಲ್ಲಿ ಗಣನೀಯ ಏರಿಕೆಯಾಗಿದೆ.
ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಒಟ್ಟು 2 ಲಕ್ಷದ 52 ಸಾವಿರ ಕ್ಯೂಸೆಕ್ ನೀರಿನ ಒಳ ಹರಿವು ದಾಖಲಾಗಿದೆ. ಅಪಾಯದ ಮಟ್ಟ ಮೀರಿ ಕೃಷ್ಣಾ ನದಿ ಹರಿಯುತ್ತಿದ್ದು ಒಟ್ಟು 12 ಪ್ರಮುಖ ಸೇತುವೆಗಳ ಮುಳುಗಡೆ ಯಥಾಸ್ಥಿತಿ ಮುಂದುವರೆದಿದೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ನದಿ ತೀರದ ದತ್ತ ಮಂದಿರ ಸಂಪೂರ್ಣ ಜಲಾವೃತವಾಗಿದೆ ನದಿ ತೀರದಲ್ಲಿ ಬೆಳಗಾವಿ ಜಿಲ್ಲಾಡಳಿತ ಹೈಅಲರ್ಟ ಜಾರಿ ಮಾಡಿದೆ. ಇದನ್ನೂ ಓದಿ: ಬೀದಿ ನಾಯಿಗಳನ್ನ ಹಿಡಿಯಿರಿ, ಸಂತಾನಹರಣ ಶಸ್ತ್ರಚಿಕಿತ್ಸೆ ಬಳಿಕ ಬಿಟ್ಟುಬಿಡಿ: ಸುಪ್ರೀಂ ತೀರ್ಪಿನಲ್ಲಿ ಮಹತ್ವದ ತಿದ್ದುಪಡಿ
ಮತ್ತೆ ನೀರು ಹೆಚ್ಚಳವಾದಲ್ಲಿ ಗ್ರಾಮಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಇನ್ನು 50 ಸಾವಿರ ಕ್ಯೂಸೆಕ್ ನೀರು ಹೆಚ್ಚಾದಲ್ಲಿ ಪ್ರವಾಹ ಸೃಷ್ಟಿ ಆಗುವ ಆತಂಕದಲ್ಲಿ ನದಿ ತೀರದ ಜನರಿದ್ದಾರೆ. ಇದನ್ನೂ ಓದಿ: ಕೋಲಾರದಲ್ಲಿ ಕೊಲೆ, ತಮಿಳುನಾಡಿನಲ್ಲಿ ಶವ ಪತ್ತೆ – 6 ವರ್ಷಗಳ ಬಳಿಕ ಪ್ರಕರಣ ಭೇದಿಸಿದ ಶಿಡ್ಲಘಟ್ಟ ಪೊಲೀಸ್
ಚಿಕ್ಕೋಡಿ, ನಿಪ್ಪಾಣಿ, ರಾಯಬಾಗ, ಅಥಣಿ ತಾಲೂಕಿನಲ್ಲಿ ಪ್ರವಾಹ ಸೃಷ್ಟಿಯಾಗುವ ಆತಂಕ ಎದುರಾಗಿದೆ. ಈಗಾಗಲೇ ದೂದಗಂಗಾ ಹಾಗೂ ವೇದಗಂಗಾ ನದಿ ತೀರದ ಕಾರದಗಾ, ಹುನ್ನರಗಿ ಗ್ರಾಮಗಳು ಸೇರಿ ಕೆಲ ಪ್ರದೇಶಗಳಿಗೆ ನೀರು ನುಗ್ಗಿದ್ದು ಜನರು ತಮ್ಮ ಜಾನುವಾರುಗಳ ಜೊತೆಗೆ ಸುರಕ್ಷಿತ ಸ್ಥಳಗಳತ್ತ ತೆರಳುತ್ತಿದ್ದಾರೆ. ಇದನ್ನೂ ಓದಿ: ವಿಧಾನಸಭೆಯಲ್ಲಿ RSS ಗೀತೆ ಹಾಡಿ ಗಮನ ಸೆಳೆದ ಡಿಕೆಶಿ – ಬಿಜೆಪಿಗೆ ಸಿಕ್ತು ಬ್ರಹ್ಮಾಸ್ತ್ರ