ಬೆಂಗಳೂರು: ಧರ್ಮಸ್ಥಳ (Dharmasthala) ಪರ ಈಗ ಹಲವು ಸ್ವಾಮೀಜಿಗಳು ಬ್ಯಾಟಿಂಗ್ ಮಾಡುತ್ತಿದ್ದು, ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸುವಂತೆ ಆಗ್ರಹಿಸಿ ಅಮಿತ್ ಶಾಗೆ (Amit Shah) ಪತ್ರ ಬರೆದ್ದಾರೆ.
ಧರ್ಮಸ್ಥಳದ ವಿರುದ್ಧ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಇದರಲ್ಲಿ ರಾಷ್ಟ್ರ ವಿರೋಧಿ ಕೈಗಳು ಕೆಲಸ ಮಾಡುತ್ತಿವೆ. ಇದಕ್ಕೆ ಕಡಿವಾಣ ಹಾಕುವ ಕೆಲಸ ಕೇಂದ್ರದಿಂದ ಆಗಬೇಕಿದೆ. ಕೂಡಲೇ ಕೇಂದ್ರ ಮಧ್ಯಪ್ರವೇಶ ಮಾಡಬೇಕು ಎಂದು ಪತ್ರದಲ್ಲಿ ಸ್ವಾಮೀಜಿಗಳು ಮನವಿ ಮಾಡಿದ್ದಾರೆ. ಲಿಂಗಾಯತ ಮಠ, ಜೈನಮಠ, ಬ್ರಾಹ್ಮಣ ಮಠ ಸೇರಿ ಹಲವು ಮಠಾಧೀಶರು ಗೃಹಸಚಿವ ಅಮಿತ್ ಶಾ ಅವರ ಭೇಟಿಗೆ ಅವಕಾಶ ಕೇಳಿದ್ದಾರೆ. ಧರ್ಮಸ್ಥಳದಲ್ಲಿ ಏನೆಲ್ಲ ನಡೆಯುತ್ತಿದೆ ಅನ್ನೋದನ್ನ ವಿವರಿಸಲು ಅವಕಾಶ ಕೋರಿ ಪತ್ರವನ್ನ ಬರೆದಿದ್ದಾರೆ. ಇದನ್ನೂ ಓದಿ: ಮೈಸೂರು ಸ್ಯಾಂಡಲ್ ಸೋಪ್ ಪ್ರಚಾರಕ್ಕೆ 48.88 ಕೋಟಿ – ತಮನ್ನಾಗೆ 6.20 ಕೋಟಿ, ಯಾರಿಗೆ ಎಷ್ಟು?
ಧಾರವಾಡದ ಶ್ರೀ ನವಗ್ರಹ ತೀರ್ಥಕ್ಷೇತ್ರ ಸ್ವಸ್ತಿ ಶ್ರೀ ಧರ್ಮಸೇನಾ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿ, ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿಗಳು ಧರ್ಮಸ್ಥಳ ವಿಚಾರವಾಗಿ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಇದೇ 28 ರಂದು ಬೆಂಗಳೂರಿನಲ್ಲಿ ಮದುವೆಯಾಗಲಿದ್ದಾರೆ ಅನುಶ್ರೀ
ಪತ್ರದಲ್ಲೇನಿದೆ?
ಧರ್ಮಸ್ಥಳದಲ್ಲಿ ನಡೆಯುತ್ತಿರುವ ಘಟನೆಗಳು ರಾಜ್ಯ ಸರ್ಕಾರ ರಚಿಸಿದ ವಿಶೇಷ ತನಿಖಾ ತಂಡದ ತನಿಖೆಗೆ ಸಂಬಂಧಿಸಿದ ಎಲ್ಲಾ ಗೊಂದಲಗಳ ಬಗ್ಗೆ ನಿಮಗೆ ತಿಳಿದಿರಬೇಕು. ಈ ಎಲ್ಲಾ ಘಟನೆಗಳು ರಾಷ್ಟ್ರ ವಿರೋಧಿಗಳು, ಎಡಪಂಥೀಯರು, ನಗರ ನಕ್ಸಲರು, ವಿದೇಶಿ ಶಕ್ತಿಗಳು ಒಟ್ಟಾಗಿ ಶ್ರೀ ಕ್ಷೇತ್ರದ ಧರ್ಮ ನಿಷ್ಠೆಯನ್ನ ಕೆಣಕಲು ಕೆಲಸ ಮಾಡುತ್ತಿರುವ ಆಳವಾದ ಪಿತೂರಿಯಿಂದ ಉಂಟಾಗಿವೆ ಎಂಬುದನ್ನ ಗಮನಿಸುವುದು ತುಂಬಾ ನೋವಿನ ಸಂಗತಿ. ನಿಮಗೆ ತಿಳಿದಿರುವಂತೆ, ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರಧಾನ ದೇವರು ಮಂಜುನಾಥೇಶ್ವರ ನಮ್ಮ ಭಾರತದ ಹಲವಾರು ಕೋಟಿ ನಾಗರಿಕರ ನಂಬಿಕೆ ಮತ್ತು ನಂಬಿಕೆಯ ಮೂಲವಾಗಿದ್ದಾರೆ. ಶ್ರೀ ಕ್ಷೇತ್ರವನ್ನು ಕೆಣಕುವ ಯಾವುದೇ ಪ್ರಯತ್ನವು ಅತ್ಯಂತ ಖಂಡನೀಯ ಮತ್ತು ಅಸಹನೀಯ. ಇದನ್ನೂ ಓದಿ: ಕಾಂಗ್ರೆಸ್ ನಾಯಕಿ ಕುಸುಮಾ ಮನೆ ಮೇಲೆ ಇಡಿ ದಾಳಿ
ನಮ್ಮ ಸಾಮೂಹಿಕ ಆತ್ಮಸಾಕ್ಷಿಯು ತೀವ್ರವಾಗಿ ಜರ್ಜರಿತವಾಗಿದೆ ಮತ್ತು ನಾವು ಅಂತ್ಯವಿಲ್ಲದ ನೋವನ್ನ ಅನುಭವಿಸುತ್ತಿದ್ದೇವೆ. ಈ ರಾಷ್ಟ್ರ ವಿರೋಧಿಗಳ ಈ ಅತ್ಯಂತ ಖಂಡನೀಯ ಕೃತ್ಯವು ಖಂಡಿತವಾಗಿಯೂ ಈ ದೇಶದ ಸಾಮಾಜಿಕ ಮತ್ತು ಆಧ್ಯಾತ್ಮಿಕ ರಚನೆಯನ್ನು ಆಸ್ಥಿರಗೊಳಿಸುವ ಉದ್ದೇಶ ಹೊಂದಿದೆ. ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡವು ನಮ್ಮ ಧರ್ಮ ಮತ್ತು ಅದರ ನಂಬಿಕೆಗಳನ್ನು ರಕ್ಷಿಸಲು ಸಾಕಷ್ಟು ಕೆಲಸ ಮಾಡುತ್ತಿಲ್ಲ ಎಂದು ನಾವು ನೋವಿನಿಂದ ಕಂಡುಕೊಂಡಿರುವುದರಿಂದ, ಈ ಶಕ್ತಿಗಳು ನಮ್ಮ ಮಹಾನ್ ಭಾರತಕ್ಕೆ ಯಾವುದೇ ಹಾನಿ ಮಾಡದಂತೆ ತಡೆಯುವುದು ನಮ್ಮ ಸಾಮೂಹಿಕ ಜವಾಬ್ದಾರಿ ಎಂದು ನಾವು ಪರಿಗಣಿಸುತ್ತೇವೆ.
ಇದಕ್ಕೆ ಸಂಬಂಧಪಟ್ಟಂತೆ ಲಿಂಗಾಯತ, ಜೈನ, ಬ್ರಾಹ್ಮಣ ಮತ್ತು ಇತರೆ ಮಠಗಳು ಸೇರಿದಂತೆ ವಿವಿಧ ಧರ್ಮಗಳ ಹಲವಾರು ಮಠಾಧೀಶರ ನಿಯೋಗವು, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಲ್ಲಾ ಘಟನೆಗಳು ಮತ್ತು ಈ ರಾಷ್ಟ್ರ ವಿರೋಧಿ ಶಕ್ತಿಗಳು ಉಂಟು ಮಾಡುವ ನಿರಂತರ ಹಾನಿಯಿಂದ ದೇಶದ ಸಾಮಾಜಿಕ ರಚನೆಗೆ ಆಗಿರುವ ಹಾನಿಯ ಬಗ್ಗೆ ವೈಯಕ್ತಿಕವಾಗಿ ನಿಮಗೆ ತಿಳಿಸಲು ನಿಮ್ಮನ್ನ ಭೇಟಿ ಮಾಡಲು ಬಯಸಿದ್ದೇವೆ. ಈ ನೋವಿನ ಘಟನೆಗಳಲ್ಲಿ ತುರ್ತಾಗಿ ಮಧ್ಯ ಪ್ರವೇಶಿಸಿ, ಕೋಟ್ಯಂತರ ಭಕ್ತರ ಹಿತಾಸಕ್ತಿಗಳನ್ನ ರಕ್ಷಿಸುವಂತೆ ನಾವು ನಿಮ್ಮನ್ನ ವಿನಂತಿಸುತ್ತೇವೆ. ಆದ್ದರಿಂದ ಮೇಲೆ ತಿಳಿಸಿದ ವಿಷಯಗಳ ಕುರಿತು ಪ್ರತಿನಿಧಿಸಲು ಸ್ವಾಮೀಜಿಗಳು ಮತ್ತು ವಿವಿಧ ಮಠಗಳ ಮುಖ್ಯಸ್ಥರ ನಿಯೋಗಕ್ಕೆ ತುರ್ತು ಬೇಟಿಗೆ ಅನುಮತಿ ಒದಗಿಸುವಂತೆ ನಿಮ್ಮಲ್ಲಿ ವಿನಂತಿಸಲಾಗಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.