ಮಂಗಳೂರು: ಧರ್ಮಸ್ಥಳ ದೇವಸ್ಥಾನದ (Dharmasthala Temple) ವಿರುದ್ಧ ಅಪಪ್ರಚಾರ ನಡೆಸಿದ್ದ ಯೂಟ್ಯೂಬರ್ ಸಮೀರ್‌ಗೆ (Sameer MD) ಮಂಗಳೂರಿನಲ್ಲಿರುವ (Mangaluru) ಜಿಲ್ಲಾ ಕೋರ್ಟ್ ಜಾಮೀನು (Bail) ಮಂಜೂರು ಮಾಡಿದೆ.
ಇಂದು ಬೆಳಗ್ಗೆ ಧರ್ಮಸ್ಥಳ ಪೊಲೀಸರು ಸಮೀರ್ ಬಂಧನಕ್ಕೆ ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ನಿವಾಸಕ್ಕೆ ತೆರಳಿದ್ದರು. ಆದರೆ ಪೊಲೀಸರು ತೆರಳಿದಾಗ ಸಮೀರ್ ಮನೆಯಲ್ಲಿ ಇರಲಿಲ್ಲ.
ಸಮೀರ್ ಬಂಧನಕ್ಕೆ ಪೊಲೀಸರು ಮುಂದಾಗುತ್ತಿದ್ದಂತೆ ಇತ್ತ ಸಮೀರ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ 75 ಸಾವಿರ ರೂ. ಬಾಂಡ್, ಒಬ್ಬರು ಶ್ಯೂರಿಟಿ ನೀಡಬೇಕೆಂದು ಸೇರಿ ಕೆಲ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ.
ಷರತ್ತು ಏನು?
ಮುಂದೆ ಇದೇ ರೀತಿಯ ಅಪರಾಧವನ್ನು ಮಾಡಬಾರದು ಮತ್ತು ವಿಚಾರಣೆಗೆ ತಪ್ಪಿಸಬಾರದು. ಬೆದರಿಕೆ, ಪ್ರಚೋದನೆಗಳು ಅಥವಾ ಇತರ ರೀತಿಯಲ್ಲಿ ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ಅವರು ಹಾಳು ಮಾಡಬಾರದು. ತನಿಖಾ ಅಧಿಕಾರಿಗೆ ತಮ್ಮನ್ನು ತಾವು ಲಭ್ಯವಾಗುವಂತೆ ಮಾಡಿಕೊಳ್ಳಬೇಕು ಮತ್ತು ಅವರ ಉಪಸ್ಥಿತಿ ಅಗತ್ಯವಿದ್ದಾಗಲೆಲ್ಲಾ ತನಿಖೆಯ ಸಮಯದಲ್ಲಿ ಸಹಕರಿಸಬೇಕು. ಉಪಸ್ಥಿತಿಯಿಂದ ವಿನಾಯಿತಿ ಪಡೆದಿರುವುದನ್ನು ಹೊರತುಪಡಿಸಿ, ವಿಚಾರಣೆಯ ಎಲ್ಲಾ ದಿನಗಳಲ್ಲಿ ಅವರು ನಿಯಮಿತವಾಗಿ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಷರತ್ತು ವಿಧಿಸಿದೆ.