ಮಂಡ್ಯ: ನನ್ನ ಪತಿ ಹೇಳುತ್ತಿರುವುದು ಬರೀ ಸುಳ್ಳು. ದುಡ್ಡಿನ ಆಮಿಷಕ್ಕೆ ಹೀಗೆ ಮಾಡುತ್ತಿರಬಹುದು ಎಂದು ಧರ್ಮಸ್ಥಳ (Dharmasthala) ಬುರುಡೆ ಪ್ರಕರಣದ ಸಾಕ್ಷಿದಾರ ಅನಾಮಿಕನ ಮೊದಲ ಪತ್ನಿ (Mask Man Wife) ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, 1999ರಲ್ಲಿ ಮದುವೆ, 7 ವರ್ಷ ಸಂಸಾರ ಮಾಡಿದ್ದೆವು. ಆತನ ಗುಣ ಸರಿ ಇರಲಿಲ್ಲ. ಬರೀ ಸುಳ್ಳು ಹೇಳುತ್ತಿದ್ದ. ನನಗೆ ಹೊಡೆಯುವುದು, ಕೆಟ್ಟ ಮಾತುಗಳಿಂದ ಬೈಯುತ್ತಿದ್ದ. ದೇವಸ್ಥಾನಕ್ಕೆ ಆ ರೀತಿ ಮೋಸ ಮಾಡಬಾರದು. ಆತ ಬೇರೊಬ್ಬಳ ಜೊತೆ ಸಂಸಾರ ಮಾಡಲು ನನ್ನನ್ನೇ ಓಡಿಸಿದ್ದ ಎಂದು ತಿಳಿಸಿದರು.
ಮೊದಲ ಪತ್ನಿ ಹೇಳಿದ್ದೇನು?
1999 ರಲ್ಲಿ ನಮಗೆ ಮದುವೆಯಾಗಿತ್ತು. 7 ವರ್ಷ ನಾನು ಆತನ ಜೊತೆ ಸಂಸಾರ ಮಾಡಿದ್ದೆ. ನಮಗೆ ಒಂದು ಹೆಣ್ಣು, ಒಂದು ಗಂಡು ಮಕ್ಕಳಿದ್ದಾರೆ. ವಿಚ್ಚೇದನ ವೇಳೆ ಜೀವನಾಂಶ ಕೊಡಲು ನಾನು ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ಸುಳ್ಳು ಹೇಳಿದ್ದ. ನನಗೆ ಅಲ್ಲೂ ನನಗೆ ನ್ಯಾಯ ಸಿಗಲಿಲ್ಲ. ನನ್ನ ತಾಯಿಯೇ ನನ್ನ ಮಕ್ಕಳನ್ನ ಸಾಕಿದ್ದರು. ಇದನ್ನೂ ಓದಿ: ಬಿ.ಎಲ್ ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ – ಮಹೇಶ್ ಶೆಟ್ಟಿ ತಿಮರೋಡಿ ಅರೆಸ್ಟ್
ಮದುವೆ ಬಳಿಕ ಧರ್ಮಸ್ಥಳದ ನೇತ್ರಾವತಿಯಲ್ಲಿ 7 ವರ್ಷ ಅವರ ಜೊತೆಗಿದ್ದೆ. ಧರ್ಮಸ್ಥಳದಲ್ಲಿ ಕಸ ಗುಡಿಸುವುದು, ಬಾತ್‌ರೂಂ ತೊಳೆಯುವುದು ಮಾಡುತ್ತಿದ್ದರು. ಧರ್ಮಸ್ಥಳ ಎಂದರೆ ನಮ್ಮ ತವರು ಮನೆಯವರಿಗೆ ಬಹಳ ಪ್ರೀತಿ. ಗುಂಡಿ ತೋಡಿದರೂ ಏನು ಸಿಕ್ಕಿಲ್ಲ ಅಂದರೆ ಏನೋ ಕಿತಾಪತಿ ಮಾಡ್ತಿದ್ದಾನೆ ಎನಿಸುತ್ತದೆ. ಇದನ್ನೂ ಓದಿ: ನೂರಾರು, ಸಾವಿರಾರು ಹೆಣ ಹೂತಿದ್ದೇನೆ ಎನ್ನುವುದು ಸುಳ್ಳು: ಮಾಸ್ಕ್‌ಮ್ಯಾನ್ ಜೊತೆ ಕೆಲಸ ಮಾಡಿದ್ದ ಕೆಲಸಗಾರ
ನನ್ನ ಬಳಿ ಅತ್ಯಾಚಾರ, ಕೊಲೆಯಾದ ಶವಗಳನ್ನು ಹೂತ ಬಗ್ಗೆ ಯಾವತ್ತೂ ಹೇಳಿಲ್ಲ. ಯಾವಾಗಲೂ ಅಹಂಕಾರದಲ್ಲೇ ಮರೆಯುತ್ತಿದ್ದ. ಅವನ ಸ್ವಂತ ಅಣ್ಣ, ತಮ್ಮಂದಿರಿಗೂ ಬಾಯಿಗೆ ಬಂದಹಾಗೇ ಬೈಯ್ಯುತ್ತಿದ್ದ. ಅವನು ಮೋಸಗಾರ, ಸುಳ್ಳುಗಾರ. ಅವನನ್ನು ಬಿಟ್ಟು ಬಂದದ್ದು ಒಳ್ಳೆಯದಾಯಿತು. ಇಟ್ಟುಕೊಂಡವಳನ್ನು ಮದುವೆ ಮಾಡಿಕೊಳ್ಳಲು ನನಗೆ ಚಿತ್ರಹಿಂಸೆ ಕೊಟ್ಟು ಓಡಿಸಿದ್ದ.
ವೀರೇಂದ್ರ ಹೆಗ್ಗಡೆಯವರು (Veerendra Heggade) ತುಂಬಾ ಒಳ್ಳೆಯವರು. ಕೆಲಸಕೊಟ್ಟ, ಅನ್ನ ಕೊಟ್ಟ ಜಾಗಕ್ಕೆ ಅನ್ಯಾಯ ಮಾಡಬಾರದು. ಮದುವೆ ಮಾಡಿಕೊಂಡು ನಮಗೆ ಏನ್ ಮಾಡಿದ್ಯ ಎಂದು 2ನೇ ಹೆಂಡ್ತಿ ಬೈತ್ತಿದ್ದಳಂತೆ. ಅವಳ ಒತ್ತಡಕ್ಕೆ, ಆಮಿಷಕ್ಕೆ ಒಳಗಾಗಿ ಹೀಗೆ ಮಾಡುತ್ತಿರಬೇಕು. ದೇವಸ್ಥಾನದ ಹೆಸರು ಕೆಡಿಸುತ್ತಿರುವ ಅವನು ಹಾಳಾಗಬೇಕು. ಅವನು ಸತ್ತು, ಹೆಣ ಆದರೂ ನಾನು ಹೋಗಿ ನೋಡುವುದಿಲ್ಲ.
ಅನಾಮಿಕನ ಅಣ್ಣ ಮತ್ತು ಮನೆಯವರೆಲ್ಲ ಒಳ್ಳೆಯವರು. ಆತ ತನಗೆ ಹೊಡೆದಾಗಲೂ ಅವರು ತನ್ನ ಪರವಾಗಿ ನಿಂತಿದ್ದರು. ಅವನನ್ನು ನೋಡಿದ ತಕ್ಷಣವೇ ಅವನ ದೇಹದ ಆಕಾರ ಮತ್ತು ನೇತ್ರಾವತಿಯಲ್ಲಿ ಕೆಲಸ ಮಾಡಿದ್ದನ್ನು ಹೇಳಿದಾಗ ಆತ ತನ್ನ ಮಾಜಿ ಪತಿ ಎನ್ನುವುದು ಖಚಿತವಾಯಿತು.