ಬೆಂಗಳೂರು: ಧರ್ಮಸ್ಥಳ (Dharmasthala Temple) ಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆಸಿದ್ದಕ್ಕೆ ಯೂಟ್ಯೂಬರ್ ಸಮೀರ್ (Youtber Sameer) ಯಾವುದೇ ಕ್ಷಣದಲ್ಲಿ ಬಂಧನವಾಗುವ ಸಾಧ್ಯತೆಯಿದೆ.
ಬನ್ನೇರುಘಟ್ಟದಲ್ಲಿರುವ ಸಮೀರ್ ಬಾಡಿಗೆ ಮನೆಗೆ ಧರ್ಮಸ್ಥಳ ಪೊಲೀಸರು ಆಗಮಿಸಿದ್ದಾರೆ. ಈಗಾಗಲೇ ಸಮೀರ್ ಮನೆಯನ್ನು ಪೊಲೀಸರು ಸುತ್ತುವರೆದಿದ್ದಾರೆ.
ಇಂದು ಬೆಳಗ್ಗೆ ಧರ್ಮಸ್ಥಳ ಪೊಲೀಸರು ಬನ್ನೇರುಘಟ್ಟಕ್ಕೆ ಆಗಮಿಸಿದ್ದಾರೆ. ಆದರೆ ಖಚಿತವಾಗಿ ವಿಳಾಸ ಸಿಕ್ಕಿರಲಿಲ್ಲ, ಈಗ ಮನೆಯನ್ನು ಸುತ್ತುವರೆದು ವಶಕ್ಕೆ ಪಡೆಯುವ ಸಾಧ್ಯತೆಯಿದೆ.
ಧರ್ಮಸ್ಥಳ ಕ್ಷೇತ್ರಕ್ಕೆ ಅಪಪ್ರಚಾರ ನಡೆಸಿದ್ದಕ್ಕೆ ರಾಜ್ಯದ್ಯಂತ ಆತನ ವಿರುದ್ಧ ಹಿಂದೂ ಸಂಘಟನೆಗಳು ದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು. ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಸಮೀರ್ ಅನ್ನು ಬಂಧನ ಮಾಡುವಂತೆ ನೆಟ್ಟಿಗರು ಆಗ್ರಹಿಸುತ್ತಿದ್ದರು. ಇದನ್ನೂ ಓದಿ:ಧರ್ಮಸ್ಥಳ ಪ್ರಕರಣದ ಅನಾಮಿಕನ ಹುಟ್ಟೂರಲ್ಲಿ ʻಪಬ್ಲಿಕ್ ಟಿವಿʼ – ಮಾಸ್ಕ್ ಮ್ಯಾನ್ ಊರು ಯಾವ್ದು? ಓದಿದ್ದೇನು?
ಒಂದು ಧರ್ಮ, ಧಾರ್ಮಿಕ ಕ್ಷೇತ್ರವನ್ನು ಅವಹೇಳನ ಮಾಡುವಂತಿಲ್ಲ. ಹೀಗಿದ್ದರೂ ಧರ್ಮಸ್ಥಳ ದೇವಸ್ಥಾನದ ವಿರುದ್ಧ ಎಐ ವಿಡಿಯೋ ಪ್ರಕಟಿಸಿ ಅವಹೇಳನ ಮಾಡಿದ್ದರೂ ಯಾಕೆ ಇನ್ನೂ ಆತನ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಜನರು ಸರ್ಕಾರವನ್ನು ಪ್ರಶ್ನಿಸುತ್ತಿದ್ದರು. ಜನರ ಆಗ್ರಹ ಜೋರಾಗುತ್ತಿದ್ದಂತೆ ಈಗ ಗೃಹ ಇಲಾಖೆ ಎಚ್ಚೆತ್ತುಕೊಂಡಿದೆ.
ಸಮೀರ್ ನಾಪತ್ತೆ: ಪಬ್ಲಿಕ್ ಟಿವಿಗೆ ಸಿಕ್ಕಿದ ಮಾಹಿತಿ ಪ್ರಕಾರ ಸಮೀರ್ ಈಗ ನಾಪತ್ತೆಯಾಗಿದ್ದಾನೆ. ಪೊಲೀಸರು ಈಗ ಆತನ ಪತ್ತೆಗೆ ಬಲೆ ಬೀಸಿದ್ದಾರೆ.
ಈಗಾಗಲೇ ಸಮೀರ್‌ಗೆ ಮೂರು ಬಾರಿ ಪೊಲೀಸರು ನೋಟಿಸ್ ನೀಡಿದ್ದರು. ಮೂರು ಬಾರಿ ನೋಟಿಸ್ ನೀಡಿದರೂ ಪ್ರತಿಕ್ರಿಯೆ ನೀಡಿಲ್ಲ.ಹೀಗಾಗಿ ವಾರೆಂಟ್ ಪಡೆದು ಪೊಲೀಸರು ಬಂಧನಕ್ಕೆ ಆಗಮಿಸಿದ್ದರು.