ದಿನದಿಂದ ದಿನಕ್ಕೆ ಸಪ್ತಸಾಗರದಾಚೆ ಎಲ್ಲೋ ಪುಟ್ಟಿಯ ಖ್ಯಾತಿ ಹೆಚ್ಚುತ್ತಿದೆ. ರುಕ್ಮಿಣಿ ವಸಂತ್ (Rukmini Vasanth) ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಬಹುಭಾಷೆಯ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ರುಕ್ಮಿಣಿ ವಸಂತ್ ಇದೀಗ ಜೇಡಿ ಮಣ್ಣಿನಿಂದ ಮಡಿಕೆ ಮಾಡಿದ್ದಾರೆ.
ಮಣ್ಣು ಹಿಡಿದು ತಾವೇ ಕೈಯ್ಯಾರೆ ಮಡಿಕೆ ಅಚ್ಚಿನಲ್ಲಿ ಮಣ್ಣು ಹಾಕಿ ಅದಕ್ಕೊಂದು ಹಾರ್ಟ್‌ಶೇಪ್ ಕೊಟ್ಟಿದ್ದಾರೆ. ಸುಂದರವಾದ ಬೌಲ್ ಸಿದ್ಧಪಡಿಸಿದ್ದಾರೆ. ಸತತ ಪ್ರಯತ್ನದ ಬಳಿಕ ಮಡಿಕೆ ತಯಾರಾದಂತಿದೆ. ಹೀಗಾಗಿ ಆ ವೀಡಿಯೋವನ್ನ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ರುಕ್ಮಿಣಿ ವಸಂತ್ ಅದಕ್ಕೊಂದು ಅರ್ಥಪೂರ್ಣ ಕ್ಯಾಪ್ಷನ್ ಕೊಟ್ಟಿದ್ದಾರೆ. `ನಿಧಾನವಾಗಿ ಸಿಗುವ ಹರ್ಷ ಹೀಗೆ ಸುಂದರವಾಗಿ ಇರುತ್ತದೆ ಅಲ್ಲವೇ’ ಎಂದಿದ್ದಾರೆ.
ವಿಶೇಷ ಮಣ್ಣಿನಿಂದ ರುಕ್ಮಿಣಿ ತಾವೇ ಕೈಯಾರೆ ಮಾಡಿಕೊಂಡಿರುವ ಮಡಿಕೆಯು ಬಳಸಲು ಯೋಗ್ಯವೋ ಇಲ್ಲವೋ, ಆದರೆ ನೋಡಲು ಅದ್ಭುತವಾಗಿದೆ. ಮಣ್ಣು ತಂದು ತಾವೇ ಕುಳಿತು ಸಿದ್ಧಮಾಡಿ ಅದನ್ನ ಬಾಕ್ಸ್ನಲ್ಲಿ ಪ್ಯಾಕ್ ಮಾಡುವವರೆಗೂ ಸಂಪೂರ್ಣ ವೀಡಿಯೋವನ್ನ ರುಕ್ಮಿಣಿ ಶೇರ್ ಮಾಡಿದ್ದಾರೆ. ಇದೀಗ ಸ್ಟಾರ್ ನಟರ ಚಿತ್ರಗಳ ನಾಯಕಿಯಾಗಿರುವ ರುಕ್ಮಿಣಿ ಕಾಂತಾರ 1 ಚಿತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಟಾಕ್ಸಿಕ್ ಚಿತ್ರದಲ್ಲೂ ನಟಿಸಿರುವ ವದಂತಿ ಇದೆ. ಒಟ್ಟಿನಲ್ಲಿ ಅರ್ಥಪೂರ್ಣ ಸಂದೇಶದ ಜೊತೆ ಸರಳ ವೀಡಿಯೋಗಳ ಮೂಲಕವೇ ರುಕ್ಮಿಣಿ ವಸಂತ್ ಜನಮೆಚ್ಚುಗೆ ಪಡೆದ ನಟಿ.